ಆಫ್ಘನ್: ಹಿಮಚಳಿಗೆ 24 ಮಕ್ಕಳು ಬಲಿ

7

ಆಫ್ಘನ್: ಹಿಮಚಳಿಗೆ 24 ಮಕ್ಕಳು ಬಲಿ

Published:
Updated:

ಕಾಬೂಲ್ (ಐಎಎನ್‌ಎಸ್): ಆಫ್ಘಾನಿಸ್ತಾನದ ಬದಾಕ್ಷನ್ ಪ್ರಾಂತ್ಯದಲ್ಲಿ ಕಳೆದ ನಾಲ್ಕು ದಿನಗಳಿಂದ ಭಾರಿ ಹಿಮಪಾತ, ಶೀತಲ ಹವಾಮಾನ ಹಾಗೂ ಚಳಿಗಾಳಿಗೆ ಸಂಬಂಧಿಸಿದ ಕಾಯಿಲೆಗಳಿಂದ 24 ಮಕ್ಕಳು ಮೃತಪಟ್ಟಿರುವುದಾಗಿ ಅಧಿಕಾರಿಯೊಬ್ಬರು ಬುಧವಾರ ಇಲ್ಲಿ ತಿಳಿಸಿದ್ದಾರೆ.ಕೆಲವು ಪ್ರದೇಶಗಳಲ್ಲಿ ಸುಮಾರು 2.5 ಮೀಟರ್‌ಗಳಷ್ಟು ಎತ್ತರದವರೆಗೆ ಹಿಮಪಾತವಾಗಿದ್ದು, ತೊಂದರೆಗೀಡಾದ ಗ್ರಾಮಸ್ಥರು ಆರೋಗ್ಯ ಕೇಂದ್ರಗಳನ್ನು ತಲುಪಲು ಕನಿಷ್ಠ ಎರಡು ತಾಸು ನಡೆದು ಹೋಗಬೇಕಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry