ಆಫ್ಘಾನಿಸ್ತಾನ: ದುರ್ಬಲ ಸರ್ಕಾರಕ್ಕೆ ಪಾಕ್ ಯತ್ನ

7

ಆಫ್ಘಾನಿಸ್ತಾನ: ದುರ್ಬಲ ಸರ್ಕಾರಕ್ಕೆ ಪಾಕ್ ಯತ್ನ

Published:
Updated:
ಆಫ್ಘಾನಿಸ್ತಾನ: ದುರ್ಬಲ ಸರ್ಕಾರಕ್ಕೆ ಪಾಕ್ ಯತ್ನ

ನ್ಯೂಯಾರ್ಕ್ (ಪಿಟಿಐ): ನೆರೆಯ ರಾಷ್ಟ್ರವಾದ ಆಫ್ಘಾನಿಸ್ತಾನದಲ್ಲಿ ದುರ್ಬಲ ಸರ್ಕಾರವಿರಬೇಕು ಮತ್ತು ಅಲ್ಲಿ ತಾಲಿಬಾನ್ ಉಗ್ರರ ಮೂಲಕ ತಾನು ಪರೋಕ್ಷ ಆಡಳಿತ ನಡೆಸಬೇಕು ಎಂಬುದು ಪಾಕಿಸ್ತಾನದ ಹುನ್ನಾರ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. 

ಆಫ್ಘಾನಿಸ್ತಾನಕ್ಕೆ ಸಂಬಂಧಿಸಿದಂತೆ ಅಮೆರಿಕ ಮತ್ತು ಪಾಕಿಸ್ತಾನ ಸರ್ಕಾರಗಳು ವಿಭಿನ್ನ ಗುರಿಗಳನ್ನು ಹೊಂದಿವೆ. ಆಫ್ಘಾನಿಸ್ತಾನದಲ್ಲಿ ಅಮೆರಿಕ ಈಗ ಹೊಂದಿರುವ ಪ್ರಭಾವವನ್ನೇ ಬಳಸಿಕೊಂಡು ಮುಂಬರುವ ದಿನಗಳಲ್ಲಿ ತಾನು ಹತೋಟಿ ಸಾಧಿಸಲು ಪಾಕಿಸ್ತಾನ ಪ್ರಯತ್ನಿಸುತ್ತಿದೆ. ಆದರೆ ಅಮೆರಿಕವು ಆಫ್ಘಾನಿಸ್ತಾನದಲ್ಲಿ ಕೇಂದ್ರೀಕೃತ ಸರ್ಕಾರ ಸ್ಥಾಪಿಸಿ ದೇಶದ ಗಡಿ ರಕ್ಷಣೆ ಮಾಡಿಕೊಳ್ಳಬಲ್ಲಂತಹ ಬಲಿಷ್ಠ ಸೇನೆ ಇರಬೇಕು ಎಂದು ಬಯಸಿದೆ ಎಂದು ಪತ್ರಿಕೆ ವಿವರಿಸಿದೆ.ಅಮೆರಿಕದ ಯೋಜನೆಯಿಂದ ಚಿಂತೆಗೀಡಾಗಿರುವ ಪಾಕಿಸ್ತಾನ ಸರ್ಕಾರವು, ಆಫ್ಘಾನಿಸ್ತಾನದಲ್ಲಿ ಸಣ್ಣ ಗಾತ್ರದ ಸೇನೆ ಇದ್ದರೆ ಸಾಕು ಎಂದು ಅಮೆರಿಕದ ಮೇಲೆ ಒತ್ತಡ ಹೇರುತ್ತಿದೆ.

ಈ ಹಿನ್ನೆಲೆಯಲ್ಲಿ ಪಾಕಿಸ್ತಾನದ ಪ್ರಧಾನಿ ಯುಸೂಫ್ ರಜಾ ಗಿಲಾನಿ, ಸೇನಾ ಮುಖ್ಯಸ್ಥ ಅಶ್ಫಕ್ ಪರ್ವೇಜ್ ಖಯ್ಯಾನಿ ಮತ್ತು ಐಎಸ್‌ಐ ಮುಖ್ಯಸ್ಥರು ಇತ್ತೀಚೆಗೆ ಅಮೆರಿಕಕ್ಕೆ ಭೇಟಿ ನೀಡಿ ಚರ್ಚಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry