ಆಫ್ರಿಕಾದಲ್ಲಿ ವಿಫುಲ ಉದ್ಯೋಗಾವಕಾಶ

ಗುರುವಾರ , ಮೇ 23, 2019
29 °C

ಫಲಿತಾಂಶ (ಮುನ್ನಡೆ+ಗೆಲುವು) 0/542LIVE

ಆಫ್ರಿಕಾದಲ್ಲಿ ವಿಫುಲ ಉದ್ಯೋಗಾವಕಾಶ

Published:
Updated:

ಗುಲ್ಬರ್ಗ: ವೈದ್ಯಕೀಯ ಕ್ಷೇತ್ರದ  ಫಾರ್ಮ್‌ಸಿ ವಿಭಾಗದಲ್ಲಿ ವೃತ್ತಿ ಪರಿಣಿತರು ಉದ್ಯೋಗ ಕೈಗೊಳ್ಳಲು ದಕ್ಷಿಣ ಆಫ್ತಿಕಾದಲ್ಲಿ ಸಾಕಷ್ಟು ಉದ್ಯೋಗಾವಕಾಶಗಳಿವೆ ಎಂದು ಕಿನ್ಯಾ ದೇಶದ ಮೌಂಟ್ ವಿಶ್ವವಿದ್ಯಾಲಯದ ಫಾರ್ಮಸಿ ವಿಭಾಗದ ಮುಖ್ಯಸ್ಥ ಡಾ. ಎಡ್ವರ್ಡ್ ಕೆ. ಕಮಾಮಿಯಾ ಶುಕ್ರವಾರ ಇಲ್ಲಿ ವಿವರಿಸಿದರು.ಮಾತೊಶ್ರೀ ತಾರಾದೇವಿ ರಾಂಪುರೆ ಫಾರ್ಮಾಸುಟಿಕಲ್ ವಿಜ್ಞಾನ ಸಂಸ್ಥೆಯ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ `ದಕ್ಷಿಣ ಆಫ್ತಿಕಾ ಪ್ರದೇಶದಲ್ಲಿ ಉದ್ಯೋಗಾವಕಾಶ~ ಕುರಿತು ಅತಿಥಿ ಉಪನ್ಯಾಸ ನೀಡಿದರು.ಮೌಂಟ್ ವಿಶ್ವವಿದ್ಯಾಲಯವು ಕೀನ್ಯಾದಲ್ಲೆ ಅತಿದೊಡ್ಡ ವಿವಿಯಾಗಿದ್ದು, ಒಟ್ಟು ಏಳು ಕ್ಯಾಂಪಸ್‌ಗಳನ್ನು ಹೊಂದಿದೆ. ಇದೇ ವರ್ಷ ದಕ್ಷಿಣ ಸುಡಾನ್‌ನಲ್ಲಿ ಹೊಸ ಕ್ಯಾಂಪಸ್ ಆರಂಭಿಸಲಾಗುತ್ತಿದೆ. ಫಾರ್ಮಸಿ, ನರ್ಸಿಂಗ್, ಬಿಬಿಐಟಿ ಎಜ್ಯುಕೇಷನ್, ಕೌನ್ಸೆಲಿಂಗ್, ಕ್ಲಿನಿಕಲ್ ಮೆಡಿಷಿನ್, ಎಂಬಿಎ, ಬಿಸಿನೆಸ್ ಲಾ, ಮೆಡಿಕಲ್ ಲ್ಯಾಬ್ ಟೆಕ್ನಾಲಾಜಿ ಕೋಸ್‌ಗಳನ್ನು ನಡೆಸುತ್ತಿದೆ ಎಂದು ತಿಳಿಸಿದರು.ಭಾರತದ ವಿಶ್ವವಿದ್ಯಾಲಯಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲು ಮುಂದೆ ಬಂದಿದ್ದೇವೆ. ಬಿ. ಫಾರ್ಮಸಿ, ಎಂ. ಫಾರ್ಮಸಿ ಶಿಕ್ಷಣ ಪಡೆದವರಿಗೆ ದ.ಆಫ್ರಿಕಾದಲ್ಲಿ ವಿಫುಲ ಅವಕಾಶಗಳಿವೆ ಎಂದು ತಿಳಿಸಿದರು.ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ. ನಮೋಶಿ, ಎಚ್‌ಕೆಇ ಶಿಕ್ಷಣ ಸಂಸ್ಥೆಯ ಸದಸ್ಯರಾದ ಎನ್.ಡಿ. ಪಾಟೀಲ, ರಜಶೇಖರ್ ಆರ್. ಕಣಕಿ, ಎಸ್.ಆರ್. ಹರ್ವಾಲ ಇನ್ನಿತರರು ಇದ್ದರು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry