ಆಫ್ರೊ- ಏಷ್ಯಾ ಸಮಾವೇಶಕ್ಕೆ ಅಗಾಥಾ ಸಂಗ್ಮಾ

7

ಆಫ್ರೊ- ಏಷ್ಯಾ ಸಮಾವೇಶಕ್ಕೆ ಅಗಾಥಾ ಸಂಗ್ಮಾ

Published:
Updated:

ಕೈರೊ (ಪಿಟಿಐ): ಗ್ರಾಮೀಣಾಭಿವೃದ್ಧಿಗೆ ಸಂಬಂಧಿಸಿದಂತೆ ಈಜಿಪ್ಟ್‌ನಲ್ಲಿ ನಡೆಯುತ್ತಿರುವ ಆಫ್ರಿಕಾ-ಏಷ್ಯಾ ಸಮಾವೇಶದಲ್ಲಿ ಪಾಲ್ಗೊಳ್ಳಲು ಗ್ರಾಮೀಣಾಭಿವೃದ್ಧಿ ಇಲಾಖೆ ರಾಜ್ಯ ಸಚಿವೆ ಅಗಾಥಾ ಸಂಗ್ಮಾ ಆಗಮಿಸಿದ್ದಾರೆ.ಮೂರು ದಿನಗಳ ಈ ಸಮಾವೇಶ ಬುಧವಾರ ಆರಂಭಗೊಂಡಿದ್ದು, ಈವರೆಗೆ `ಆಫ್ರೊ- ಏಷ್ಯನ್ ರೂರಲ್ ಡೆವಲಪ್‌ಮೆಂಟ್ ಆಗರ್ನೈಸೇಷನ್~ (ಎಎಆರ್‌ಡಿಒ)ನ ಅಧ್ಯಕ್ಷ ಸ್ಥಾನದಲ್ಲಿದ್ದ ಅಗಾಥಾ ಈ ಸ್ಥಾನವನ್ನು ಈಜಿಪ್ಟ್ ಸಾಮಾಜಿಕ ವ್ಯವಹಾರಗಳ ಸಚಿವರಿಗೆ ಬಿಟ್ಟುಕೊಡಲಿದ್ದಾರೆ. ಭಾರತ ಮತ್ತು ಈಜಿಪ್ಟ್ `ಎಎಆರ್‌ಡಿಒ~ದ ಸಂಸ್ಥಾಪಕ ದೇಶಗಳಾಗಿದ್ದು, ಈ ವರ್ಷ ಸಂಸ್ಥೆಯ ಚಿನ್ನದ ಹಬ್ಬದ ಆಚರಣೆ ಭಾರತದಲ್ಲಿ ನಡೆಯಲಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry