ಆಭರಣಗಳ ವಿನ್ಯಾಸ ಲೋಕ

7

ಆಭರಣಗಳ ವಿನ್ಯಾಸ ಲೋಕ

Published:
Updated:
ಆಭರಣಗಳ ವಿನ್ಯಾಸ ಲೋಕ

ಳಿಗೆ ತುಂಬೆಲ್ಲಾ ಆಭರಣಗಳ ಹೊಳಪು. ಬಗೆ ಬಗೆ ಒಡವೆಗಳು ಮಿರುಗುತ್ತಿದ್ದ ಆ ಪುಟ್ಟ ಮಳಿಗೆಯ ತುಂಬಾ ಕಣ್ಣಿನ ಹೊಳಪಿಗೇ ಸೆಡ್ಡು ಹೊಡೆಯುವ ಬೆಳಕು. ಒಂದಕ್ಕಿಂತ ಒಂದು ಭಿನ್ನ ಎನ್ನುವಂತಿದ್ದ ಆ ಆಭರಣಗಳಂತೂ ಮಹಿಳೆಯರ ಮನದಲ್ಲಿ ಆಸೆಯ ಕೋಲ್ಮಿಂಚು ಹರಿಸುವಂತಿದ್ದವು.ಇಂಥ ಒಂದು ಆಭರಣ ಮಳಿಗೆ ಆರಂಭಗೊಂಡಿರುವುದು ಇಂದಿರಾನಗರದಲ್ಲಿ. ಕೇವಲ ಆಭರಣ ಮಳಿಗೆಯಲ್ಲದೆ, ‘ಡಿಸೈನ್ ಸ್ಟುಡಿಯೊ’ ಕೂಡ ಇರುವುದು ಇಲ್ಲಿನ ವಿಶೇಷ. ಈ ಹಿಂದೆ ಮುಂಬೈನಲ್ಲಿ ವಜ್ರಾಭರಣ ವಿನ್ಯಾಸ ಮತ್ತು ತಯಾರಿಕೆಯಲ್ಲಿ ತೊಡಗಿ ಸೈ ಎನಿಸಿಕೊಂಡಿದ್ದ ಡಯಾಟ್ರೆಂಡ್ಸ್ ಇದೀಗ ‘ಲವ್ ಈಸ್ ಫಾರೆವರ್ (ಲೈಫ್)’ ಎಂಬ ಹೆಸರಿನೊಂದಿಗೆ ನಗರದಲ್ಲಿ ತನ್ನ ಮೊದಲ ಮಳಿಗೆಯನ್ನು ತೆರೆದಿದೆ.ವಜ್ರದ ಕಟಿಂಗ್, ಪಾಲಿಶಿಂಗ್, ವಿನ್ಯಾಸ ಮತ್ತು ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದ ಡಯಾಟ್ರೆಂಡ್ಸ್ ಇದೀಗ ತನ್ನದೇ ಹಲವು ಬಗೆಯ ವಿನ್ಯಾಸದ ಚಿನ್ನ, ವಜ್ರ, ಪ್ಲಾಟಿನಂ ಒಡವೆಗಳನ್ನು ಇಲ್ಲಿನವರಿಗೆಂದೇ ಹೊತ್ತು ತಂದಿದೆ. ಗ್ರಾಹಕರಿಗೆ ಕೇವಲ ವ್ಯಾವಹಾರಿಕಾಗಿ ಒಡವೆಗಳನ್ನು ಮಾಡಿಕೊಡದೆ, ಅವರ ವ್ಯಕ್ತಿತ್ವ, ಅಭಿರುಚಿಗೆ ಹೊಂದುವಂತೆ ಅವರೊಂದಿಗೆ ಚರ್ಚಿಸಿ, ಸೂಕ್ತ ಆಭರಣ ವಿನ್ಯಾಸ ಮಾಡಿಕೊಡುವುದು ಇಲ್ಲಿನ ಸಂಪ್ರದಾಯವಂತೆ.

ಪ್ರತಿಯೊಂದು  ಆಭರಣಕ್ಕೂ ಪ್ರಕೃತಿಯೇ ಪ್ರೇರಣೆ ಎನ್ನುವ ಸಂಸ್ಥೆಯ ಮುಖ್ಯ ನಿರ್ವಹಣಾ ಅಧಿಕಾರಿ ದೀಪ್ತಿ ಸಾತೆ, ಪ್ರೀತಿಯಿಲ್ಲದ ಮೇಲೆ ಏನೂ ಸಾಧ್ಯವಾಗುವುದಿಲ್ಲ ಎಂಬ ಕಾರಣಕ್ಕೇ ಮಳಿಗೆಗೆ ‘ಲವ್ ಈಸ್ ಫಾರೆವರ್' ಎಂಬ ಹೆಸರಿಟ್ಟಿದ್ದೇವೆ ಎಂದು ವಿವರಿಸುತ್ತಾರೆ.ಸಂಗ್ರಹದಲ್ಲಿ ವಿಶೇಷತೆ

ಮನುಷ್ಯನಿಗೆ ಪ್ರಕೃತಿಯ ಒಡನಾಟ ತುಂಬಾ ಅಗತ್ಯ. ಪ್ರಕೃತಿಯಲ್ಲಿನ ಸುಂದರ ತುಣುಕುಗಳನ್ನು ಆರಿಸಿಕೊಂಡು ಇಲ್ಲಿನ ಒಡವೆಗಳ ವಿನ್ಯಾಸಕ್ಕೆ ಒಗ್ಗಿಸಿಕೊಳ್ಳಲಾಗಿದೆ. ಅದೇ ‘ನೇಚರ್ಸ್‌ ರೆವೆರಿ’ ಸಂಗ್ರಹ. ಇನ್ನು ಪ್ರೀತಿ ಇಲ್ಲದೆ ಮನುಷ್ಯ ಬದುಕಲು ಸಾಧ್ಯವೇ ಇಲ್ಲ. ಆ ಪ್ರೀತಿಯನ್ನು ಆಭರಣದ ಮೂಲಕ ವ್ಯಕ್ತಪಡಿಸಿ ಎಂದು ‘ಕಲರ್ಸ್‌ ಆಫ್ ಲವ್’ ಎಂಬ ಸಂಗ್ರಹ ಪರಿಚಯಿಸಲಾಗಿದೆ.

ಗುಲಾಬಿ ಮತ್ತು ಕೆಂಪು ಬಣ್ಣದ ಕಲ್ಲುಗಳ ಆಭರಣ ವಿನ್ಯಾಸ ಇರುವುದು ಪ್ರೀತಿಯ ಸಂಕೇತವಂತೆ. ಭಾರತದಲ್ಲಿ ಎಲ್ಲಿಯೂ ಇಲ್ಲದ ತೀರಾ ಹೊಸತಾದ ವಿನ್ಯಾಸವೆಂದರೆ ‘ಪೊಯೆಟಿಕ್ ಹ್ಯೂಸ್’. ಎಲೆ, ಚಿಟ್ಟೆ, ಹಕ್ಕಿ, ಹೂವಿನ ವಿನ್ಯಾಸಗಳನ್ನು ನಾಜೂಕಾಗಿ ಅದೇ ಬಣ್ಣದಲ್ಲಿ ಮೂಡಿಸಿರುವುದು ಗಮನ ಸೆಳೆಯುತ್ತದೆ.ಇನ್ನೂ ಹಲವು ಅಚ್ಚರಿಗಳನ್ನು ‘ಎನ್‌ಟ್ವಿನ್ಡ್ ಡ್ರೀಮ್ಸ್’, ಆಸ್ಟ್ರಲ್, ಮದುವೆ, ಅರ್ಬನ್ ಫ್ಯಾಂಟಸಿ, ಹೈ ಎಂಡ್ ಕಲೆಕ್ಷನ್, ಡ್ರೀಮ್ ವೀವರ್ಸ್‌ ಹೀಗೆ ಹಲವು ಸಂಗ್ರಹಗಳು ನೀಡುತ್ತವೆ.ವಿನ್ಯಾಸಕ್ಕೆ ಒತ್ತು

ಸಮಕಾಲೀನ ಆಭರಣ ಶೈಲಿಗಳನ್ನು, ಗ್ರಾಹಕರ ಅಗತ್ಯಗಳನ್ನು ಉದ್ದೇಶವಾಗಿಸಿಕೊಂಡು ಆಭರಣಗಳನ್ನು ವಿನ್ಯಾಸಗೊಳಿಸಲಾಗುತ್ತದೆ. ಪ್ರಾಚೀನ ಶೈಲಿಯೊಂದಿಗೆ ಸಮಕಾಲೀನತೆಯನ್ನು ಒಗ್ಗಿಸಿಕೊಂಡು ಈ ಸಂಗ್ರಹಗಳನ್ನು ಪರಿಚಯಿಸಿದೆ. ಮಹಿಳೆಯರಿಗೆ ನೆಕ್ಲೇಸ್, ಕಿವಿಯೋಲೆ, ಪೆಂಡೆಂಟ್, ಎಲ್ಲಾ ರೀತಿಯ ಸರ– ಉಂಗುರಗಳ ಸಂಗ್ರಹ ಇದ್ದು, ಪುರುಷರಿಗೆ ಅಗತ್ಯವಾದ ಆಭರಣಗಳೂ ಇವೆ.ಗ್ರಾಹಕರಿಗೆ ಮುಕ್ತ ಆಯ್ಕೆ

ಗ್ರಾಹಕರಿಗೆಂದೇ ಇಲ್ಲಿ ಡಿಸೈನ್ ಸ್ಟುಡಿಯೊ ಇದೆ. ಗ್ರಾಹಕರ ಅಗತ್ಯ, ಅವರ ಬಜೆಟ್ ಅನ್ನು ಗಮನದಲ್ಲಿಟ್ಟುಕೊಂಡು ಸೂಕ್ತ ಆಯ್ಕೆಗಳನ್ನು ನೀಡಲಾಗುತ್ತದೆ. ಹಾಗೆಂದಮಾತ್ರಕ್ಕೆ ಗುಣಮಟ್ಟದಲ್ಲಿ ಕಡಿಮೆಯಾಗುವ ಭಯ ಇಟ್ಟುಕೊಳ್ಳುವ ಅಗತ್ಯವಿಲ್ಲ ಎನ್ನುತ್ತಾರೆ ದೀಪ್ತಿ. 3ಡಿ ಮೂಲಕ ಗ್ರಾಹಕರಿಗೆ ವಿನ್ಯಾಸದ ಪ್ರತಿ ಹಂತಗಳನ್ನೂ ತೋರಿಸಲಾಗುತ್ತದೆ.ತಮಗೆ ಬೇಕೆಂದ ವಿನ್ಯಾಸವನ್ನೂ ಆರಿಸಿಕೊಳ್ಳಬಹುದು. ಇಷ್ಟವಿಲ್ಲದಿದ್ದರೆ ನಿರಾಕರಿಸಲೂ ಗ್ರಾಹಕರಿಗೆ ಅವಕಾಶವಿದೆ. 30 ಸಾವಿರ ರೂಪಾಯಿಯಿಂದ ಆರಂಭಗೊಂಡು 15 ಲಕ್ಷದವರೆಗೂ ವಜ್ರ, ಚಿನ್ನಾಭರಣಗಳ ಅಪರೂಪದ ಸುಮಾರು 350 ಸಂಗ್ರಹ ಇಲ್ಲಿವೆ.

ಸ್ಥಳ: ನಂ. 3289, 12ನೇ ಮುಖ್ಯರಸ್ತೆ, ಎಚ್‌ಎಎಲ್ 2ನೇ ಹಂತ. ಇಂದಿರಾನಗರ. ಸಂಪರ್ಕಕ್ಕೆ: 08049445300.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry