ಶುಕ್ರವಾರ, ಜೂನ್ 25, 2021
30 °C
ಮತ್ತೆ 2,500 ಗೋಡೆ ಗಡಿಯಾರ ವಶ

ಆಮಿಷ: ರಾಮಚಂದ್ರ ರೆಡ್ಡಿ ವಿರುದ್ಧ ಪ್ರಕರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಳ್ಳಾರಿ: ಚುನಾವಣೆ ಹಿನ್ನೆಲೆಯಲ್ಲಿ ಮತದಾರರಿಗೆ ಆಮಿಷ ಒಡ್ಡಲು ಗೋಡೆ ಗಡಿಯಾರ, ಸೀರೆ ಮತ್ತಿತರ ವಸ್ತುಗಳನ್ನು ಸಂಗ್ರಹಿಸಿದ್ದ ಆಂಧ್ರದ ರಾಯದುರ್ಗ ವಿಧಾನಸಭೆ ಕ್ಷೇತ್ರದ ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ಕಾಪು ರಾಮಚಂದ್ರ ರೆಡ್ಡಿ ಅವರ ವಿರುದ್ಧ ಬಳ್ಳಾರಿ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.ಗುರುವಾರ ರಾತ್ರಿ ನಗರದಲ್ಲಿರುವ ರೆಡ್ಡಿ ನಿವಾಸದ ಮೇಲೆ ದಾಳಿ ನಡಸಿ, ಒಂದು ಸಾವಿರ ಸೀರೆಗಳು, ಕ್ರಿಕೆಟ್‌ ಬ್ಯಾಟ್‌, ಸ್ಟಂಪ್‌, ಅಡುಗೆ ಕುಕ್ಕರ್‌ ಹಾಗೂ ₨ 43 ಲಕ್ಷ ಮೌಲ್ಯದ ಮೂರು ಚೆಕ್‌ಗಳನ್ನು ವಶಪಡಿಸಿ­ಕೊಂಡಿದ್ದ ಪೊಲೀಸರು, ಅವರ ವಿರುದ್ಧ ಐಪಿಸಿ ಸೆಕ್ಷನ್‌– 188ರ ಅಡಿ ಪ್ರಕರಣ ದಾಖಲಿಸಿದ್ದಾರೆ.ಶುಕ್ರವಾರ ರಾಯದುರ್ಗಕ್ಕೆ ತೆರಳಿದ್ದ ಪೊಲೀಸರು ಅವರನ್ನು ಬಂಧಿಸಲು ಮುಂದಾಗಿದ್ದರು. ಆದರೆ, ಅನಾ­ರೋಗ್ಯ ಕಾರಣದಿಂದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿ­ರುವುದರಿಂದ ಬಂಧನ ಸಾಧ್ಯವಾಗಿಲ್ಲ ಎಂದು ಡಿವೈಎಸ್‌ಪಿ ರುದ್ರಮುನಿ ತಿಳಿಸಿದ್ದಾರೆ.ನಗರದಲ್ಲಿರುವ ಇಂದಿರಾ ಟ್ರಾವೆಲ್ಸ್‌ ಕಚೇರಿ ಮೇಲೆ ಗುರುವಾರ ಸಂಜೆ ದಾಳಿ ನಡೆಸಿ ಒಟ್ಟು 680 ಗೋಡೆ ಗಡಿಯಾರ ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರ್ತಿ ಎಂಬುವವರ ವಿರುದ್ಧ ಐಪಿಸಿ ಸೆಕ್ಷನ್‌ 177–ಇ ಅಡಿ ಪ್ರಕರಣ ದಾಖಲಿಸ­ಲಾಗಿದೆ. ಗೋಡೆ ಗಡಿಯಾರಗಳು ಗುಜರಾತ್‌ನಲ್ಲಿ ತಯಾರಾಗಿರುವ ಕುರಿತು ಮಾಹಿತಿ ಲಭಿಸಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಚೇತನ್‌ಸಿಂಗ್‌ ರಾಥೋರ್‌ ತಿಳಿಸಿದ್ದಾರೆ.ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಯದುರ್ಗ ಪೊಲೀಸರು ರಾಮ­ಚಂದ್ರ­ರೆಡ್ಡಿ ಅವರನ್ನು ಗುರುವಾರ ಮಧ್ಯರಾತ್ರಿ ಬಂಧಿಸಿದ್ದರು.

ಶುಕ್ರವಾರ ಅವರು ನ್ಯಾಯಾಲಯದಲ್ಲಿ ಜಾಮೀನು ಪಡೆದಿದ್ದಾರೆ.ಬೆಂಗಳೂರಿನ ಕಲಾಸಿಪಾಳ್ಯದಲ್ಲಿ ಇಂದಿರಾ ಟ್ರಾವೆಲ್ಸ್‌ಗೆ ಸೇರಿದ ಗೋದಾಮಿನಲ್ಲಿ ರೆಡ್ಡಿ ಅವರಿಗೆ ಸೇರಿವೆ ಎನ್ನಲಾದ 2500 ಗೋಡೆ ಗಡಿಯಾರಗಳನ್ನು ಪೊಲೀಸರು ಶುಕ್ರವಾರ ವಶಪಡಿಸಿಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.