ಸೋಮವಾರ, ಜೂನ್ 21, 2021
27 °C

ಆಮೀರ್ ಮೆಚ್ಚಿದ ವಿದ್ಯಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಮೀರ್ ಖಾನ್ ವಿದ್ಯಾ ಬಾಲನ್ ಅವರನ್ನು ಹಾಡಿ ಹೊಗಳಿದ್ದಾರೆ. ಅಷ್ಟೇ ಅಲ್ಲ, ಈ ನಟಿಯ ಜೊತೆ ಕೆಲಸ ಮಾಡುವ ಬಯಕೆಯನ್ನೂ ಹೊರಹಾಕಿದ್ದಾರೆ. ಬಾಲಿವುಡ್‌ನ `ಮಿ. ಪರ್ಫೆಕ್ಟ್~ ಎಂದೇ ಗುರುತಾದ ಆಮೀರ್ ಖಾನ್, ವಿದ್ಯಾ ಬಾಲನ್ ಅವರ ಬೆಳವಣಿಗೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.`ಪರಿಣಿತಾ~ ಚಿತ್ರದ ಲೊಲಿತಾ ಪಾತ್ರ, ಆರ್.ಕೆ.ಬಾಲ್ಕಿ ಅವರ `ಪಾ~ ಚಿತ್ರದ ಅಮ್ಮ, ಇಷ್ಕಿಯಾ ಚಿತ್ರದಲ್ಲಿ ನಾಸಿರುದ್ದಿನ್ ಶಾ ಅವರೊಂದಿಗಿನ ಅಭಿನಯ ಎಲ್ಲವೂ ಅದ್ಭುತವಾಗಿವೆ. `ಡರ್ಟಿ ಪಿಕ್ಷರ್~ನ ಖ್ಯಾತಿ, `ಕಹಾನಿ~ ಚಿತ್ರದ ಯಶಸ್ಸು ಎಲ್ಲವನ್ನೂ ನೋಡಿ, ಅಳೆದು ತೂಗಿ, ಬಾಲಿವುಡ್ ಬಾಲನ್‌ಗೆ ಎರಡನೆಯ ಆಮೀರ್ ಖಾನ್, ಮಿಸ್ ಫರ್ಫೆಕ್ಟ್ ಎಂದೆಲ್ಲ ಬಣ್ಣಿಸಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಆಮೀರ್ ಖಾನ್, `ವಿದ್ಯಾಜೀ ಅವರನ್ನು ವಿದ್ಯಾ ಹೆಸರಿನಿಂದಲೇ ಕರೆಯಬೇಕು.ಅತ್ಯಂತ ಸುಂದರಿ. ಅದ್ಭುತ ನಟಿ. ಅವರೊಂದಿಗೆ ಕೆಲಸ ಮಾಡಲು ಇಷ್ಟಪಡುತ್ತೇನೆ~ ಎಂದೆಲ್ಲ ಹೇಳಿದ್ದಾರೆ. ಸುಜಯ್ ಘೋಷ್ ನಿರ್ದೇಶನದ `ಕಹಾನಿ~ ಚಿತ್ರವನ್ನಿನ್ನೂ ನೋಡಿಲ್ಲ. ಆದರೆ ವಿಮರ್ಶೆಯನ್ನು ನೋಡಿದರೆ, ವಿದ್ಯಾ ಚೆನ್ನಾಗಿಯೇ ಅಭಿನಯಿಸಿರಬೇಕು ಎಂದೂ ಗುಣಗಾನ ಮಾಡಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.