ಆಮೆಗತಿಯಲ್ಲಿ ಕಾರ್ಮಿಕರ ನೋಂದಣಿ: ಕೇವಲ 150 ಮಂದಿಗೆ ಸೌಲಭ್ಯ

7

ಆಮೆಗತಿಯಲ್ಲಿ ಕಾರ್ಮಿಕರ ನೋಂದಣಿ: ಕೇವಲ 150 ಮಂದಿಗೆ ಸೌಲಭ್ಯ

Published:
Updated:
ಆಮೆಗತಿಯಲ್ಲಿ ಕಾರ್ಮಿಕರ ನೋಂದಣಿ: ಕೇವಲ 150 ಮಂದಿಗೆ ಸೌಲಭ್ಯ

ಕೋಲಾರ: ರಾಜ್ಯ ಸರ್ಕಾರವು ಕಟ್ಟಡ ಮತ್ತು ಇತರೇ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯನ್ನು ಸ್ಥಾಪಿಸಿ ನಾಲ್ಕೂವರೆ ವರ್ಷವಾಗಿದೆ. ಇನ್ನು ಕೆಲವು ತಿಂಗಳು ಕಳೆದರೆ ಐದನೇ ವರ್ಷಕ್ಕೆ ಮಂಡಳಿ ಕಾಲಿಡಲಿದೆ. ಆದರೆ ಈ ಅವಧಿಯಲ್ಲಿ ಜಿಲ್ಲೆಯಲ್ಲಿ ಮಂಡಳಿಗೆ ನೋಂದಾವಣೆಯಾದ ಕಾರ್ಮಿಕರ ಸಂಖ್ಯೆ ಮಾತ್ರ ನಿರಾಶಾದಾಯಕ. ಮಂಡಳಿ ಸೌಲಭ್ಯವನ್ನು ಪಡೆದ ಕಾರ್ಮಿಕರ ಸಂಖ್ಯೆ ಎರಡು ನೂರನ್ನು ಕೂಡ ದಾಟಿಲ್ಲ.ಇಂಥ ಸನ್ನಿವೇಶದಲ್ಲೆ ಜಿಲ್ಲೆಯ ಕಟ್ಟಡ ಕಾರ್ಮಿಕರು ಕಾಯಕ ಮುಂದುವರಿಸಿದ್ದಾರೆ. ಕಾರ್ಮಿಕರ ನೋಂದಣಿ ಸಂಖ್ಯೆ ಕಡಿಮೆಯಾಗಲು ಮಂಡಳಿ ವತಿಯಿಂದ ಕಾರ್ಮಿಕರಿಗೆ ದೊರಕುವ ಸೌಲಭ್ಯ ಕುರಿತು ಪ್ರಚಾರ ಕೊರತೆ ಮತ್ತು ಅಗತ್ಯ ಆಸಕ್ತಿ ತೋರದಿರುವುದು ಕಾರಣ ಎನ್ನುವುದು ಕಾರ್ಮಿಕ ಮುಖಂಡರ ಅನಿಸಿಕೆ.ಮಂಡಳಿಗೆ ಹೆಸರು ನೋಂದಾಯಿಸುವ ಕೆಲಸವನ್ನು ಕಾರ್ಮಿಕ ಇಲಾಖೆಯೇ ಮಾಡುತ್ತದೆ. ನಗರದ ಪಿಸಿ ಬಡಾವಣೆಯ ಇಲಾಖೆಯ ಜಿಲ್ಲಾ ಅಧಿಕಾರಿ ಕಚೇರಿಯಲ್ಲಿ ಇದುವರೆಗೆ 6 ಸಾವಿರ ಕಟ್ಟಡ ಕಾರ್ಮಿಕರು ಹೆಸರು ನೋಂದಾಯಿಸಿದ್ದಾರೆ. ಒಂದು ವರ್ಷ ಪೂರ್ಣಗೊಂಡ ನೋಂದಾಯಿತರು, ಎರಡು ವರ್ಷ ಪೂರ್ಣಗೊಂಡ ನೋಂದಾಯಿತರು ಸೇರಿ 100ರಿಂದ 150 ಮಂದಿಗೆ ಸೌಲಭ್ಯಗಳನ್ನು ವಿತರಿಸಲಾಗಿದೆ ಎನ್ನುತ್ತಾರೆ ಜಿಲ್ಲಾ ಕಾರ್ಮಿಕ ಅಧಿಕಾರಿ ರೇವಣ್ಣ.ಜಿಲ್ಲೆಯಲ್ಲಿ ಇನ್ನೂ  10 ಸಾವಿರ ಕಟ್ಟಡ ಕಾರ್ಮಿಕರು ನೋಂದಣಿ ಮಾಡಿಸಬೇಕಾಗಿದೆ. ಕಟ್ಟಡ ಮತು ಇತರೆ ನಿರ್ಮಾಣ ಕಾರ್ಮಿಕರು ಅಸಂಘಟಿತರಾಗಿರುವುದರಿಂದ ಅವರ ಅಂಕಿ-ಸಂಖ್ಯೆಯನ್ನು ನಿಖರವಾಗಿ ಹೇಳುವುದು ಕಷ್ಟ. ಇಲಾಖೆ ಅಂದಾಜಿನಂತೆ, ನೋಂದಣಿ ಮಾಡಿಸಿದವರನ್ನು ಹೊರತುಪಡಿಸಿ 10 ಸಾವಿರ ಕಾರ್ಮಿಕರು ಜಿಲ್ಲೆಯಲ್ಲಿ ಇರಬಹುದು ಎನ್ನುತ್ತಾರೆ ಅವರು.ಮಂಡಳಿ ಸ್ಥಾಪನೆಯಾಗಿ ಇನ್ನೂ ಐದು ವರ್ಷ ಆಗಿಲ್ಲ. ಹೀಗಾಗಿ ಐದು ವರ್ಷ ಪೂರ್ಣಗೊಂಡ ನೋಂದಾಯಿತರಿಗೆ ನೀಡಬೇಕಾದ ಸೌಲಭ್ಯಗಳನ್ನು ಇನ್ನೂ ನೀಡಿಲ್ಲ. ಮಂಡಳಿಗೆ ಐದು ವರ್ಷ ತುಂಬುತ್ತಲೇ ಸೌಲಭ್ಯಗಳನ್ನು ನೀಡಲಾಗುವುದು ಎಂದು ಅವರು ಸೋಮವಾರ `ಪ್ರಜಾವಾಣಿ~ಗೆ ತಿಳಿಸಿದರು.ಅಸಮಾಧಾನ: ಅಸಂಘಟಿತ ಕಾರ್ಮಿಕರ ನೋಂದಾವಣೆ ಮತ್ತು ಸೌಲಭ್ಯ ವಿತರಣೆ ನಿಟ್ಟಿನಲ್ಲಿ ಕಾರ್ಮಿಕ ಇಲಾಖೆ ಮತ್ತು ಮಂಡಳಿ ಅಗತ್ಯವಿರುವಷ್ಟು ಬದ್ಧತೆ ತೋರುತ್ತಿಲ್ಲ ಎನ್ನುತ್ತಾರೆ ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘದ ಗೌರವ ಅಧ್ಯಕ್ಷ ಗಾಂಧಿನಗರ ನಾರಾಯಣಸ್ವಾಮಿ. ಸೇತುವೆ, ಮಹಲ್‌ಗಳು, ಮನೆಗಳು, ಸಂಕೀರ್ಣಗಳು ಸೇರಿದಂತೆ ಎಲ್ಲ ಕಟ್ಟಡ ನಿರ್ಮಾಣಗಳಲ್ಲಿ ಕಾರ್ಮಿಕರಾಗಿರುವವರಿಗೆ ಕೆಲಸದ ಭದ್ರತೆಯೇ ಇಲ್ಲ. ಕೆಲಸ ಸಿಕ್ಕಿದರೆ ಮಾತ್ರ ಬದುಕು ನಡೆಯುತ್ತದೆ.ಕೆಲಸದ ಸಂದರ್ಭದಲ್ಲಿ ಅಪಘಾತಗಳು ಸಂಭವಿಸಿದರೆ ಯಾರೂ ಕೇಳುವ ಸ್ಥಿತಿಯಲ್ಲಿ ಇಲ್ಲ. ಮಾಲೀಕರು ಜವಾಬ್ದಾರಿ ಹೊರುವುದಿಲ್ಲ ಎಂಬುದು ಅವರ ಅಸಮಾಧಾನ. ಕರ್ನಾಟಕ ಕಟ್ಟಡ ಮತ್ತು ಇತರೆ ಕಾರ್ಮಿಕರ ಕಲ್ಯಾಣ ಮಂಡಳಿ ಸ್ಥಾಪನೆಯಾಗಿ ನಾಲ್ಕು ವರ್ಷ ಮೀರಿದರೂ, ಮಂಡಳಿಯಲ್ಲಿರುವ ಅನುದಾನ ಬಳಸಿ ಕಾರ್ಮಿಕರ ನೋಂದಣಿ ನಿರೀಕ್ಷಿತ ಕೆಲಸ ನಡೆದಿಲ್ಲ. ಅಸಂಘಟಿತ  ಕಾರ್ಮಿಕರನ್ನು ಸಂಘಟಿಸಿ, ಸೌಲಭ್ಯಗಳನ್ನು ವಿಸ್ತರಿಸುವ ನಿಟ್ಟಿನಲ್ಲಿ ಮಂಡಳಿ ಮತ್ತು ಇಲಾಖೆ ಸೋತಿದೆ ಎಂದು ಅವರು ಆರೋಪಿಸುತ್ತಾರೆ.ನೋಂದಣಿ ನಿಧಾನ: ಅವರ ಆರೋಪಕ್ಕೆ ಪುರಾವೆಯಂತೆ ಕಳೆದ ಫೆಬ್ರುವರಿಯಿಂದ ಇಲ್ಲಿವರೆಗೆ ಎರಡೂವರೆ ತಿಂಗಳ ಅವಧಿಯಲ್ಲಿ ಕಾರ್ಮಿಕರ ನೋಂದಾವಣೆ ಪ್ರಕ್ರಿಯೆ ನಡೆದೇ ಇಲ್ಲ ಎಂಬುದನ್ನು ಅಂಕಿ-ಅಂಶಗಳು ಸ್ಪಷ್ಟಪಡಿಸುತ್ತವೆ. ಕಳೆದ ಫೆ.19ರಂದು ನಗರದಲ್ಲಿ ನಡೆದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಜಿಲ್ಲಾ ಮಟ್ಟದ ಪ್ರಥಮ ಸಮ್ಮೇಳನದಲ್ಲಿ ಪಾಲ್ಗೊಂಡ ಮಂಡಳಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಇಟ್ಟಣಗಿಯವರು ಜಿಲ್ಲೆಯಲ್ಲಿ ಇದುವರೆಗೆ 6 ಸಾವಿರ ಮಂದಿ ಮಾತ್ರ ನೋಂದಣಿ ಮಾಡಿಸಿದ್ದಾರೆ ಎಂದು ತಿಳಿಸಿದ್ದರು. ಅದಾಗಿ ಎರಡೂವರೆ ತಿಂಗಳ ಬಳಿಕ ಜಿಲ್ಲಾ ಕಾರ್ಮಿಕ ಅಧಿಕಾರಿಯೂ ಅದೇ ಮಾಹಿತಿಯನ್ನು ನೀಡಿದ್ದಾರೆ.ಮಂಡಳಿಯಿಂದ ಸಿಗುವ ಸೌಲಭ್ಯಗಳು


* ಕಟ್ಟಡ ಕಾರ್ಮಿಕರು ಮರಣ ಹೊಂದಿದರೆ ಅಂತ್ಯಕ್ರಿಯೆಗೆ ರೂ. 4 ಸಾವಿರ,* ಮೃತ ಕಾರ್ಮಿಕನ ಕುಟುಂಬದ ಸದಸ್ಯರಿಗೆ ಅನುಗ್ರಹ ಧನ ರೂ  

 15 ಸಾವಿರ* ಒಳರೋಗಿ ವೈದ್ಯಕೀಯ ಚಿಕಿತ್ಸೆಗೆ ಸಹಾಯಧನ ರೂ 400 ರಿಂದ 2 ಸಾವಿರ, ಕೆಲಸದ ಅವಧಿಯಲ್ಲಿ ತೀರಿಕೊಂಡರೆ, ಶಾಶ್ವತ ಅಂಗವಿಕಲರಾದರೆ ರೂ 1 ಲಕ್ಷ* ಹೃದ್ರೋಗ, ಮೂತ್ರಪಿಂಡ ಜೋಡಣೆ, ಲಕ್ವ, ಅಸ್ತಮಾ, ಪಿತ್ತಕೋಶ, ಮೆದುಳಿನ ರಕ್ತಸ್ರಾವ, ಕ್ಯಾನ್ಸರ್ ಶಸ್ತ್ರಚಿಕಿತ್ಸೆಗೆ ರೂ.50 ಸಾವಿರ* ಕುಷ್ಠರೋಗ, ಕ್ಯಾನ್ಸರ್, ಲಕ್ವದಿಂದ ಅಂಗವಿಕಲರಾದರೆ, ಅದರ ಪ್ರಮಾಣ ಆಧರಿಸಿ ಸಹಾಯಧನ ರೂ 5 ಸಾವಿರಒಂದು ವರ್ಷಪೂರ್ಣಗೊಳಿಸಿದ ನೋಂದಾಯಿತರಿಗೆ

*
ಮಹಿಳಾ ಕಟ್ಟಡ ಕಾರ್ಮಿಕರಿಗೆ ಹೆರಿಗೆ ಸೌಲಭ್ಯ (ಎರಡು ಬಾರಿ) ರೂ.6 ಸಾವಿರ* ಕಾರ್ಮಿಕರ ಮದುವೆ, ಅವರ ಮಕ್ಕಳ ಮದುವೆಗೆ ರೂ.10 ಸಾವಿರ* ಕಾರ್ಮಿಕರ ಇಬ್ಬರು ಮಕ್ಕಳ ವಿದ್ಯಾಭ್ಯಾಸಕ್ಕೆ 8-9 ನೇ ತರಗತಿಯಲ್ಲಿರುವವರಿಗೆ ವಾರ್ಷಿಕ 1 ಸಾವಿರ* ಎಸ್‌ಎಸ್‌ಎಲ್‌ಸಿ ಪಾಸಾದ ಮಕ್ಕಳಿಗೆ ರೂ.3 ಸಾವಿರ* ಪಿಯುಸಿ ಪಾಸಾದವರಿಗೆ, ಪದವಿ ವಿದ್ಯಾರ್ಥಿಗೆ ರೂ.2 ಸಾವಿರ* ಐಟಿಐ, ಡಿಪ್ಲೊಮಾ ವಿದ್ಯಾರ್ಥಿಗಳಿಗೆ ರೂ.3.6 ಸಾವಿರ* ಸ್ನಾತಕೋತ್ತರ ಪದವಿಯಲ್ಲಿರುವವರಿಗೆ ವಾರ್ಷಿಕ ರೂ.10 ಸಾವಿರ, ಮೆಡಿಕಲ್, ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಪ್ರತಿ ಸೆಮಿಸ್ಟರ್‌ಗೆ ರೂ.5 ಸಾವಿರಎರಡು ವರ್ಷ ವರ್ಷಪೂರ್ಣಗೊಳಿಸಿದ ನೋಂದಾಯಿತರಿಗೆ

*
ಉಪಕರಣ ಖರೀದಿಸಲು ಬಡ್ಡಿ ರಹಿತ ಸಾಲ ರೂ.5 ಸಾವಿರ5 ವರ್ಷ  ಪೂರ್ಣಗೊಳಿಸಿದ ನೋಂದಾಯಿತರಿಗೆ

* ಪಿಂಚಣಿ ಸೇವೆ ತಿಂಗಳಿಗೆ ರೂ.500* ಮನೆ ಖರೀದಿಗೆ, ಕಟ್ಟಡ ಸಾಲ ರೂ.50 ಸಾವಿರ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry