ಆಮ್ ಆದ್ಮಿ ಕಾರ್ಯಕರ್ತರ ಮೇಲೆ ಹಲ್ಲೆ

7

ಆಮ್ ಆದ್ಮಿ ಕಾರ್ಯಕರ್ತರ ಮೇಲೆ ಹಲ್ಲೆ

Published:
Updated:

ಬೆಂಗಳೂರು: ಸದಸ್ಯತ್ವ ಅಭಿಯಾನದ ಪ್ರಚಾರದಲ್ಲಿ ತೊಡಗಿದ್ದ ಆಮ್‌ ಆದ್ಮಿ ಪಕ್ಷದ ಕಾರ್ಯಕರ್ತರ ಮೇಲೆ ಅಪರಿಚಿತ ವ್ಯಕ್ತಿಗಳು ಹಲ್ಲೆ ನಡೆಸಿರುವ ಘಟನೆ ನಗರದ ಬೆಳ್ಳಂದೂರು ಹೊರ ವರ್ತುಲ ರಸ್ತೆಯ ಸೆಂಟ್ರಲ್‌ ಮಾಲ್‌ ಬಳಿ ಶನಿವಾರ ಸಂಜೆ ನಡೆದಿದೆ.‘ಸದಸ್ಯತ್ವ ಅಭಿಯಾನಕ್ಕಾಗಿ ನಾಲ್ಕು ಮಂದಿ ಕಾರ್ಯಕರ್ತರು ಸೆಂಟ್ರಲ್‌ ಮಾಲ್‌ ಬಳಿ ಸಂಜೆ 5 ಗಂಟೆ ಸುಮಾರಿಗೆ ಪ್ರಚಾರ ನಡೆಸುತ್ತಿದ್ದೆವು. ಈ ವೇಳೆ ಅಲ್ಲಿಗೆ ಬಂದ ವ್ಯಕ್ತಿಯೊಬ್ಬ ಪ್ರಚಾರ ಮಾಡದಂತೆ ಬೆದರಿಕೆ ಹಾಕಿದ.ಅಲ್ಲಿಂದ ತೆರಳಿದ ಆತ ಸ್ವಲ್ಪ ಸಮಯದ ಬಳಿಕ ಐವರ ಜತೆಗೆ ಬಂದ. ಅವರೆಲ್ಲ ಸೇರಿ ನಮ್ಮ ಮೇಲೆ ಹಲ್ಲೆ ನಡೆಸಿದರು’ ಎಂದು ಘಟನೆಯಲ್ಲಿ ಗಾಯಗೊಂಡಿರುವ ಪಂಕಜ್‌ ತಿಳಿಸಿದರು.ಘಟನೆ ಸಂಬಂಧ ಎಚ್‌ಎಸ್‌ಆರ್‌ ಲೇಔಟ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದೇವೆ’ ಎಂದು ಪಕ್ಷದ ಕಾರ್ಯಕರ್ತ ರೋಹಿತ್‌ ರಂಜನ್‌ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry