ಆಯಡಮ್ ಗಿಲ್‌ಕ್ರಿಸ್ಟ್, ಆಸ್ಟ್ರೇಲಿಯಾ ಕ್ರಿಕೆಟಿಗ

7

ಆಯಡಮ್ ಗಿಲ್‌ಕ್ರಿಸ್ಟ್, ಆಸ್ಟ್ರೇಲಿಯಾ ಕ್ರಿಕೆಟಿಗ

Published:
Updated:

ಸಚಿನ್ ‘ಪೆಡಲ್ ಸ್ವೀಪ್’ ನೆನಪು

ವಿಕೆಟ್ ಕೀಪರ್ ಆಗಿದ್ದವನ ಕೆಲಸ ಬ್ಯಾಟ್ಸ್‌ಮನ್ ಎಂಥ ಹೊಡೆತಗಳನ್ನು ಆಯ್ಕೆ ಮಾಡಿಕೊಳ್ಳುತ್ತಾನೆಂದು ಚುರುಕಾಗಿ ಗುರುತಿಸುವುದು. ಆದರೆ ಸಚಿನ್ ತೆಂಡೂಲ್ಕರ್ ಅವರ ಆಟವನ್ನು ಅಷ್ಟೊಂದು ಸುಲಭವಾಗಿ ಗ್ರಹಿಸುವುದು ಖಂಡಿತ ಸಾಧ್ಯವಿರಲಿಲ್ಲ. ಅವರು ಪ್ರತಿಯೊಂದು ಎಸೆತಕ್ಕೆ ಅಚ್ಚರಿಪಡುವ ರೀತಿಯಲ್ಲಿ ಶಾಟ್‌ಗಳನ್ನು ಆಯ್ಕೆ ಮಾಡುವ ರೀತಿಯೇ ಅದ್ಭುತ. ಅದರಲ್ಲಿಯೂ ‘ಪೆಡಲ್ ಸ್ವೀಪ್’ ಪ್ರಯೋಗಿಸಿದ ್ಷಣಗಳು ನನ್ನ ನೆನಪಿನ ಪುಟಗಳಲ್ಲಿ ಅಚ್ಚಳಿಯದೆ ಉಳಿದಿವೆ. ಸಚಿನ್ ಹಿಂದಿನಂತೆ ಈಗಲೂ ಪಂದ್ಯಕ್ಕೆ ಚುರುಕು ನೀಡುವಂಥ ಬ್ಯಾಟ್ಸ್‌ಮನ್ ಆಗಿದ್ದಾರೆ. ಅವರದ್ದು ಇನಿಂಗ್ಸ್‌ಗೆ ಬಲ ಕೊಡುವಂಥ ಆಟ. ಅಂಥ ಬ್ಯಾಟ್ಸ್‌ಮನ್ ಹೇಗೆ ಆಡುತ್ತಾನೆನ್ನುವುದನ್ನು ಹತ್ತಿರದಿಂದ ನೋಡುವ ಅವಕಾಶ ನನಗೆ ಸಾಕಷ್ಟು ಬಾರಿ ಸಿಕ್ಕಿದೆ. ವಿಕೆಟ್ ಕೀಪರ್ ಆದವರು ಮಾತ್ರ ‘ಲಿಟಲ್ ಚಾಂಪಿಯನ್’ ಆಟದ ಸೊಬಗನ್ನು ಅಷ್ಟೊಂದು ಸೂಕ್ಷ್ಮವಾಗಿ ತೀರ ಸನಿಹದಲ್ಲಿ ನಿಂತು ವೀಕ್ಷಿಸಲು ಸಾಧ್ಯವಾಗುತ್ತದೆ. ಅಂಥ ಅದೃಷ್ಟವಂತರಲ್ಲಿ ನಾನೂ ಒಬ್ಬ.ನನಗೆ ಹೆಚ್ಚು ಇಷ್ಟವಾಗಿದ್ದು ಶೇನ್ ವಾರ್ನ್ ಬೌಲಿಂಗ್ ಮಾಡುವಾಗ ಸಚಿನ್ ಅವರಿಗೆ ಎದುರಾಗಿ ಆಡಿದ ಕ್ಷಣಗಳು. ಕ್ರಿಕೆಟ್ ಜೀವನದ ಅನೇಕ ಏರಿಳಿತದ ಸಂದರ್ಭಗಳಲ್ಲಿ ಇಬ್ಬರ ಮುಖಾಮುಖಿ ಆಗಿದೆ. ತೆಂಡೂಲ್ಕರ್ ಅವರಿಗೆ ವಾರ್ನ್ ಎಸೆತಗಳಿಗೆ ಉತ್ತರ ನೀಡುವುದರಲ್ಲಿ ಹೆಚ್ಚು ಸಂತಸ ಸಿಗುತ್ತಿತ್ತು ಎಂದು ಅಂದುಕೊಳ್ಳುತ್ತೇನೆ.

 -ಗೇಮ್‌ಪ್ಲಾನ್ವಿಕೆಟ್ ಕೀಪರ್ ಆಗಿದ್ದವನ ಕೆಲಸ ಬ್ಯಾಟ್ಸ್‌ಮನ್ ಎಂಥ ಹೊಡೆತಗಳನ್ನು ಆಯ್ಕೆ ಮಾಡಿಕೊಳ್ಳುತ್ತಾನೆಂದು ಚುರುಕಾಗಿ ಗುರುತಿಸುವುದು. ಆದರೆ ಸಚಿನ್ ತೆಂಡೂಲ್ಕರ್ ಅವರ ಆಟವನ್ನು ಅಷ್ಟೊಂದು ಸುಲಭವಾಗಿ ಗ್ರಹಿಸುವುದು ಖಂಡಿತ ಸಾಧ್ಯವಿರಲಿಲ್ಲ. ಅವರು ಪ್ರತಿಯೊಂದು ಎಸೆತಕ್ಕೆ ಅಚ್ಚರಿಪಡುವ ರೀತಿಯಲ್ಲಿ ಶಾಟ್‌ಗಳನ್ನು ಆಯ್ಕೆ ಮಾಡುವ ರೀತಿಯೇ ಅದ್ಭುತ. ಅದರಲ್ಲಿಯೂ ‘ಪೆಡಲ್ ಸ್ವೀಪ್’ ಪ್ರಯೋಗಿಸಿದ ್ಷಣಗಳು ನನ್ನ ನೆನಪಿನ ಪುಟಗಳಲ್ಲಿ ಅಚ್ಚಳಿಯದೆ ಉಳಿದಿವೆ. ಸಚಿನ್ ಹಿಂದಿನಂತೆ ಈಗಲೂ ಪಂದ್ಯಕ್ಕೆ ಚುರುಕು ನೀಡುವಂಥ ಬ್ಯಾಟ್ಸ್‌ಮನ್ ಆಗಿದ್ದಾರೆ. ಅವರದ್ದು ಇನಿಂಗ್ಸ್‌ಗೆ ಬಲ ಕೊಡುವಂಥ ಆಟ. ಅಂಥ ಬ್ಯಾಟ್ಸ್‌ಮನ್ ಹೇಗೆ ಆಡುತ್ತಾನೆನ್ನುವುದನ್ನು ಹತ್ತಿರದಿಂದ ನೋಡುವ ಅವಕಾಶ ನನಗೆ ಸಾಕಷ್ಟು ಬಾರಿ ಸಿಕ್ಕಿದೆ. ವಿಕೆಟ್ ಕೀಪರ್ ಆದವರು ಮಾತ್ರ ‘ಲಿಟಲ್ ಚಾಂಪಿಯನ್’ ಆಟದ ಸೊಬಗನ್ನು ಅಷ್ಟೊಂದು ಸೂಕ್ಷ್ಮವಾಗಿ ತೀರ ಸನಿಹದಲ್ಲಿ ನಿಂತು ವೀಕ್ಷಿಸಲು ಸಾಧ್ಯವಾಗುತ್ತದೆ. ಅಂಥ ಅದೃಷ್ಟವಂತರಲ್ಲಿ ನಾನೂ ಒಬ್ಬ.ನನಗೆ ಹೆಚ್ಚು ಇಷ್ಟವಾಗಿದ್ದು ಶೇನ್ ವಾರ್ನ್ ಬೌಲಿಂಗ್ ಮಾಡುವಾಗ ಸಚಿನ್ ಅವರಿಗೆ ಎದುರಾಗಿ ಆಡಿದ ಕ್ಷಣಗಳು. ಕ್ರಿಕೆಟ್ ಜೀವನದ ಅನೇಕ ಏರಿಳಿತದ ಸಂದರ್ಭಗಳಲ್ಲಿ ಇಬ್ಬರ ಮುಖಾಮುಖಿ ಆಗಿದೆ. ತೆಂಡೂಲ್ಕರ್ ಅವರಿಗೆ ವಾರ್ನ್ ಎಸೆತಗಳಿಗೆ ಉತ್ತರ ನೀಡುವುದರಲ್ಲಿ ಹೆಚ್ಚು ಸಂತಸ ಸಿಗುತ್ತಿತ್ತು ಎಂದು ಅಂದುಕೊಳ್ಳುತ್ತೇನೆ.

 -ಗೇಮ್‌ಪ್ಲಾನ್

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry