ಸೋಮವಾರ, ಜೂನ್ 21, 2021
29 °C

ಆಯತಪ್ಪಿ ಮನೆ ಮೇಲೆ ಬಿದ್ದ ತೇರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಯತಪ್ಪಿ ಮನೆ ಮೇಲೆ ಬಿದ್ದ ತೇರು

ಆನೇಕಲ್: ತಾಲ್ಲೂಕಿನ ಹುಸ್ಕೂರು ಮದ್ದೂರಮ್ಮ ಜಾತ್ರೆ ಮುಗಿಸಿಕೊಂಡು ಸ್ವಗ್ರಾಮಕ್ಕೆ ಹಿಂದಿರುಗುತ್ತಿದ್ದ ಕಗ್ಗಲೀಪುರ ಗ್ರಾಮದ ಕುರ್ಜು (ತೇರು) ಆಯತಪ್ಪಿ ಮನೆಯೊಂದರ ಮೇಲೆ ಬಿದ್ದ ಘಟನೆ ಹುಸ್ಕೂರಿನಲ್ಲಿ ಮಂಗಳವಾರ ಸಂಭವಿಸಿದೆ.ಘಟನೆಯಿಂದ ಮನೆಯ ಮೇಲ್ಛಾವಣಿಯ ಸಿಮೆಂಟ್ ಶೀಟ್‌ಗಳು ಪುಡಿಪುಡಿಯಾಗಿವೆ. ಯಾವುದೇ ಗಂಭೀರ ಅಪಾಯ ಸಂಭವಿಸಿಲ್ಲ ಎಂದು ಹೆಬ್ಬಗೋಡಿ ಠಾಣೆಯ ಪಿಎಸ್‌ಐ ಶಶಿಧರ್ ತಿಳಿಸಿದರು. ಹುಸ್ಕೂರು ಮದ್ದೂರಮ್ಮ ಜಾತ್ರೆಗೆ ನವ ಗ್ರಾಮಗಳಿಂದ ತೇರುಗಳು ಶನಿವಾರ ಬಂದಿದ್ದವು. ಶನಿವಾರದಿಂದ ಸೋಮವಾರದವರೆಗೆ ದೇವಾಲಯದ ಆವರಣದಲ್ಲಿದ್ದ ಎಲ್ಲ ತೇರುಗಳು ಮಂಗಳವಾರ ಸ್ವಗ್ರಾಮಗಳಿಗೆ ತೆರಳಿದವು.ಕಗ್ಗಲೀಪುರ ಗ್ರಾಮಕ್ಕೆ ಸೇರಿದ 90ಅಡಿ ಎತ್ತರವಿದ್ದ ತೇರು ಹುಸ್ಕೂರು ದಾಟಿ ಸ್ವಲ್ಪ ದೂರ ಸಾಗುತ್ತಿದ್ದಂತಯೆ ರಥದ ಚಕ್ರಕ್ಕೆ ಮರದ ಅಚ್ಚು ನೀಡುವ ವ್ಯಕ್ತಿಯ ಅಜಾಗರೂಕತೆಯಿಂದಾಗಿ ಚಕ್ರವು ಹಳ್ಳಕ್ಕೆ ಸರಿಯಿತು. ಸಮೀಪದಲ್ಲೇ ಇದ್ದ ಮನೆಯ ಮೇಲೆ ರಥವು ಬಿದ್ದು ಮನೆಯ ಶೀಟ್‌ಗಳು ಪುಡಿಪುಡಿಯಾದವು.ಮನೆಯಲ್ಲಿದ್ದವರು ತೇರು ನೋಡಲು ಮನೆಯಿಂದ ಹೊರಗಡೆ ಬಂದಿದ್ದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಗ್ರಾಮಸ್ಥರು ತಿಳಿಸಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೆನಿವಾಸ್, ದೇವಾಲಯ ಸಮಿತಿಯ ಅಧ್ಯಕ್ಷ ಪಾಪಣ್ಣ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದರು. ಹಾನಿಗೊಳಗಾದ ಮನೆಗೆ ಪರಿಹಾರ ನೀಡುವುದಾಗಿ ಕಂದಾಯ ಇಲಾಖೆಯ ಅಧಿಕಾರಿಗಳು ತಿಳಿಸಿದರು.   

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.