ಆಯುಕ್ತ ಚಿದಾನಂದ ವಿರುದ್ಧ ಮತ್ತೊಂದು ದೂರು ದಾಖಲು

5
ರಾಮನಗರ–ಚನ್ನಪಟ್ಟಣದ ಅಭಿವೃದ್ಧಿ ಪ್ರಾಧಿಕಾರದ ಹಗರಣ

ಆಯುಕ್ತ ಚಿದಾನಂದ ವಿರುದ್ಧ ಮತ್ತೊಂದು ದೂರು ದಾಖಲು

Published:
Updated:

ರಾಮನಗರ: ರಾಮನಗರ–ಚನ್ನ ಪಟ್ಟಣ ನಗರಾಭಿವೃದ್ಧಿ ಪ್ರಾಧಿಕಾರ ದಲ್ಲಿ (ಆರ್‌ಸಿಯು ಡಿಎ) ಚಿದಾನಂದ ಅವರು ಆಯುಕ್ತ ರಾಗಿದ್ದಾಗ ನಿರ್ಮಿ ಸಿದ ಬಡಾವಣೆ, ಕೈಗೊಂಡ ಕಾಮ ಗಾರಿ ಹಾಗೂ ಅಭಿವೃದ್ಧಿ ಕೆಲಸಗಳೆಲ್ಲ ವನ್ನೂ ತನಿಖೆ   ಪ್ರಾಧಿ ಕಾರದ ಹಾಲಿ ಆಯುಕ್ತ ಜೆ.ಜಿ. ಪದ್ಮ ನಾಭ ಅವರು ಐಜೂರು ಪೊಲೀಸ್‌ ಠಾಣೆಯಲ್ಲಿ ಶುಕ್ರವಾರ ದೂರು ದಾಖಲಿಸಿದ್ದಾರೆ.ನಗರಾಭಿವೃದ್ಧಿ ಸಚಿವ ವಿನಯ್‌ ಕುಮಾರ್‌ ಸೊರಕೆ ಅವರ ನಿರ್ದೇಶನ ಹಾಗೂ ಇಲಾಖೆಯ ಕಾರ್ಯದರ್ಶಿ ಅವರ ಸೂಚನೆ ಮೇರೆಗೆ ಈ ದೂರನ್ನು ಹಾಲಿ ಆಯುಕ್ತರು ನೀಡಿದ್ದಾರೆ ಎಂದು ಗೊತ್ತಾಗಿದೆ.ಪ್ರಾಧಿಕಾರ ಕೈಗೊಂಡಿರುವ ಜೀಗೇನ ಹಳ್ಳಿ ಬಡಾವಣೆ, ಹೆಲ್ತ್ ಸಿಟಿ ಬಡಾ ವಣೆ, ಚನ್ನಪಟ್ಟಣದಲ್ಲಿನ ಬಡಾವಣೆ, ಅವುಗಳಿಗೆ ಬೇಕಾದ ಭೂಮಿಯ ಸ್ವಾಧೀನ, ಕಾಮಗಾರಿ, ನಿವೇಶನ ಹಂಚಿಕೆ ಸೇರಿದಂತೆ ಪ್ರತಿಯೊಂದನ್ನೂ ತನಿಖೆ ನಡೆಸುವಂತೆ ದೂರಿನಲ್ಲಿ ತಿಳಿಸ ಲಾಗಿದೆ.ಖಾಸಗಿ ಬಡಾವಣೆಗಳ ನಿರ್ಮಾಣಕ್ಕೆ ಪ್ರಾಧಿಕಾರ ನೀಡಿರುವ ಅನುಮತಿ, ಅವುಗಳೊಂದಿನ ಒಡಂ ಬಡಿಕೆಯನ್ನೂ ಒಳಗೊಂಡಂತೆ ತನಿಖೆ ನಡೆಸುವಂತೆ ದೂರಿನಲ್ಲಿ ಕೋರ ಲಾಗಿದೆ.ಈಗಾಗಲೇ ಪ್ರಾಧಿಕಾರದ ರೂ. 15.90 ಕೋಟಿ ದುರುಪಯೋಗಕ್ಕೆ ಸಂಬಂಧಿಸಿ ದಂತೆ ಐಜೂರು ಠಾಣೆ ಯಲ್ಲಿ ದೂರು ದಾಖಲಾಗಿತ್ತು. ಇದನ್ನು ಸರ್ಕಾರ ಸಿಬಿಐ ತನಿಖೆಗೆ ವಹಿಸಿದೆ. ಹಾಗಾಗಿ ಈಗ ಬಂದಿರುವ ಎರಡನೇ ದೂರಿಗೆ ಪ್ರತ್ಯೇಕ ಎಫ್‌ಐ ಆರ್‌ ಹಾಕಬೇಕಾದ ಅಗತ್ಯ ವಿಲ್ಲ. ಮೊದಲು ನೀಡಿದ್ದ ದೂರಿನ ಜತೆಗೆ ಇದನ್ನೂ ಹೆಚ್ಚುವರಿಯಾಗಿ ಸೇರಿಸಲಾ ಗುವುದು. ಅದಾಗ್ಯೂ ಪ್ರಾಧಿಕಾರದಲ್ಲಿ ನಡೆದಿರುವ ಪ್ರತಿ ಹಣಕಾಸಿನ ವ್ಯವ ಹಾರವನ್ನು ಸಿಬಿಐ ತನಿಖೆಗೆ ಒಳಪ ಡಿಸಲಿದ್ದು, ಅದರಲ್ಲಿ ಇದೂ ಬರಲಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry