ಆಯುರ್ವೇದ: ಕೌನ್ಸೆಲಿಂಗ್ ಮುಂದಕ್ಕೆ

7

ಆಯುರ್ವೇದ: ಕೌನ್ಸೆಲಿಂಗ್ ಮುಂದಕ್ಕೆ

Published:
Updated:

ಬೆಂಗಳೂರು: ಪ್ರಸಕ್ತ ಶೈಕ್ಷಣಿಕ ವರ್ಷದ ಸ್ನಾತಕೋತ್ತರ ಆಯುರ್ವೇದ ಕೋರ್ಸ್ ಪ್ರವೇಶಕ್ಕೆ ಶುಕ್ರವಾರ ನಡೆಯಬೇಕಿದ್ದ ಎರಡನೆಯ ಸುತ್ತಿನ ಕೌನ್ಸೆಲಿಂಗ್ ಮುಂದೂಡುವಂತೆ ಹೈಕೋರ್ಟ್ ಗುರುವಾರ ನಿರ್ದೇಶನ ನೀಡಿದೆ.ಈ ಕೋರ್ಸ್‌ನ ಪ್ರವೇಶ ಪರೀಕ್ಷೆಯ ಪ್ರಶ್ನೆಪತ್ರಿಕೆ ದೋಷಪೂರಿತವಾಗಿತ್ತು ಎಂದು ದೂರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹುಲುವಾಡಿ ಜಿ. ರಮೇಶ್ ಅವರು, ಹೊಸದಾಗಿ ಕೌನ್ಸೆಲಿಂಗ್ ನಡೆಸಬೇಕು~ ಎಂದು ಸೂಚಿಸಿದ್ದಾರೆ. ಮುಂದೂಡಿಕೆ: `ಸ್ನಾತಕೋತ್ತರ ಆಯುರ್ವೇದ ಕೋರ್ಸ್‌ನ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಮೊದಲ ಸುತ್ತಿನ ಕೌನ್ಸೆಲಿಂಗ್ ಮುಗಿದಿದೆ. ಕೋರ್ಟ್ ಆದೇಶ ಬಂದಿರುವ ಕಾರಣ ಶುಕ್ರವಾರ ನಡೆಯಬೇಕಿದ್ದ 2ನೇ ಸುತ್ತಿನ ಕೌನ್ಸೆಲಿಂಗ್ ಮುಂದೆ ಹೋಗಿದೆ.ಸ್ನಾತಕೋತ್ತರ ಹೋಮಿಯೋಪಥಿ ಕೋರ್ಸ್‌ನ 2ನೇ ಸುತ್ತಿನ ಕೌನ್ಸೆಲಿಂಗ್ ಪ್ರಕ್ರಿಯೆಯನ್ನೂ ಮುಂದೂಡಿದ್ದೇವೆ~ ಎಂದು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿ ಕುಲಸಚಿವ ಡಾ.ಡಿ. ಪ್ರೇಮಕುಮಾರ್ `ಪ್ರಜಾವಾಣಿ~ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry