ಆಯುಷ್ ವೈದ್ಯರಿಂದ ಅನಿರ್ದಿಷ್ಟಾವಧಿ ಧರಣಿ

ಭಾನುವಾರ, ಜೂಲೈ 21, 2019
26 °C

ಆಯುಷ್ ವೈದ್ಯರಿಂದ ಅನಿರ್ದಿಷ್ಟಾವಧಿ ಧರಣಿ

Published:
Updated:

ಬೆಂಗಳೂರು:  `ಆಯುಷ್ ವೈದ್ಯರ ಬೇಡಿಕೆಯನ್ನು ಈಡೇರಿಸುವಂತೆ ಒತ್ತಾಯಿಸಿ ಜುಲೈ 20ರಿಂದ ಅನಿರ್ದಿಷ್ಟಾವಧಿ ಧರಣಿಯನ್ನು ನಡೆಸಲಾಗುವುದು~ ಎಂದು ಭಾರತೀಯ ಆಯುಷ್ ಪ್ರತಿಷ್ಠಾನದ ಡಾ.ಎಸ್. ಪಾಟೀಲ್ ಹೇಳಿದರು.ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಆಯುಷ್‌ನ ವಿವಿಧ ಬೇಡಿಕೆಗಳನ್ನು ಈಡೇರಿಸಲು ಮೇ 30 ರಂದು ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಆದರೆ. ಇದುವರೆಗೂ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ. ಆದ್ದರಿಂದ  ಈ ಧರಣಿಯನ್ನು ಕೈಗೊಳ್ಳುವುದು ಅನಿವಾರ್ಯವಾಗಿದೆ~ ಎಂದರು.`ಆಯುಷ್ ವೈದ್ಯ ಪದ್ಧತಿ ಮತ್ತು ಅಲೋಪತಿ ಪದ್ಧತಿಗಳ ಪಠ್ಯಕ್ರಮವು ಸಾಮಾನ್ಯವಾಗಿ ಒಂದೇ ತೆರನಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳಲ್ಲಿಯೇ ಓದಿ ಪದವೀಧರರಾಗಿದ್ದಾರೆ. ಅವರಂತೆಯೇ ಆಯುಷ್ ವೈದ್ಯರ ಸೇವೆಯು ಅಮೂಲ್ಯವಾಗಿದೆ. ಅದನ್ನು ಸರ್ಕಾರ ತಿಳಿದುಕೊಳ್ಳಬೇಕು~ ಎಂದು ಹೇಳಿದರು.ಗೋಷ್ಠಿಯಲ್ಲಿ ಡಾ.ರಾಜಶೇಖರ್, ಡಾ.ಆನಂದ ಕಿರಿಸಾಳ ಮತ್ತಿತರರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry