ಬುಧವಾರ, ಜನವರಿ 22, 2020
24 °C

ಆಯುಷ್ ವೈದ್ಯರಿಗೆ ಔಷಧ ಪೂರೈಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನದ ಅಡಿಯಲ್ಲಿ ಕರ್ನಾಟಕದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸುಮಾರು 550 `ಆಯುಷ್~ ವೈದ್ಯರಿಗೆ ಸುಮಾರು 14 ತಿಂಗಳಿಂದ ಔಷಧಿ ಪೂರೈಕೆ ಆಗಿಲ್ಲ.ಆಯುಷ್ ವೈದ್ಯರು ಅಲೋಪಥಿ ಔಷಧಿಗಳನ್ನು ಬಳಸಲು ಅನುಮತಿ ಇಲ್ಲ. ಇದರಿಂದಾಗಿ ಸಾವಿರಾರು ಬಡರೋಗಿಗಳು ಔಷಧವಿಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ.

 

ದೀರ್ಘಾವಧಿ ಖಾಯಿಲೆಗಳಾದ ರಕ್ತದೊತ್ತಡ, ಮಾನಸಿಕ ಒತ್ತಡ, ಅಸ್ತಮಾ ಮುಂತಾದವುಗಳಿಗೆ ಆಯುಷ್‌ನಲ್ಲಿ ಪರಿಣಾಮಕಾರಿಯಾದ ಚಿಕಿತ್ಸೆಇದೆ. ಬಡ ರೋಗಿಗಳು ಆಯುಷ್ ವೈದ್ಯರ ಚಿಕಿತ್ಸೆ ಮತ್ತು ಔಷಧಿಯನ್ನೇ ಅವಲಂಬಿಸಿದ್ದಾರೆ. ಸರ್ಕಾರ ತಕ್ಷಣವೇ ಔಷಧ ಪೂರೈಕೆಗೆ ಕ್ರಮ ಕೈಗೊಳ್ಳಬೇಕು.

ಪ್ರತಿಕ್ರಿಯಿಸಿ (+)