ಬುಧವಾರ, ಏಪ್ರಿಲ್ 14, 2021
24 °C

ಆಯೋಗದಿಂದಲೇ ಆರ್‌ಟಿಐಗೆ ಅಪಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): `ದೇಶದಲ್ಲಿನ ಪ್ರಸ್ತುತ ಆಡಳಿತ ವ್ಯವಸ್ಥೆಯಲ್ಲಿ ಮಾಹಿತಿ ಹಕ್ಕು ಕಾಯ್ದೆಗೆ ಮಾಹಿತಿ ಆಯೋಗದಿಂದಲೂ ಅಪಾಯವಿದೆ~ ಎಂದು ಕೇಂದ್ರೀಯ ಮಾಹಿತಿ ಆಯೋಗ (ಸಿಐಸಿ) ದ ಆಯುಕ್ತ ಶೈಲೇಶ್ ಗಾಂಧಿ ಅಭಿಪ್ರಾಯಪಟ್ಟಿದ್ದಾರೆ.ನಾಲ್ಕು ವರ್ಷ ಸೇವೆ ಸಲ್ಲಿಸಿದ ಬಳಿಕ ಶುಕ್ರವಾರ ನಿವೃತ್ತಿಯಾಗುತ್ತಿರುವ 65 ವರ್ಷದ ಗಾಂಧಿ ಸುದ್ದಿಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಆಯೋಗದ ಹುಳುಕುಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ.

`ಮಾಹಿತಿ ಹಕ್ಕು ಕಾಯ್ದೆ ಮುಖ್ಯವಾಗಿ ಮೂರು ಗಂಡಾಂತರಗಳನ್ನು ಎದುರಿಸುತ್ತಿದ್ದು, ಸರ್ಕಾರ, ನ್ಯಾಯಾಂಗ ಪ್ರಕ್ರಿಯೆ ಮತ್ತು ಅತಿ ಹೆಚ್ಚು ಅಪಾಯ ಮಾಹಿತಿ ಆಯೋಗಗಳಿಂದಲೇ ಇದೆ~ ಎಂದಿದ್ದಾರೆ.`ಆಯೋಗದಲ್ಲಿ ಈಗಾಗಲೇ ಕಡಿಮೆ ಎಂದರೆ ಎರಡು-ಮೂರು ವರ್ಷಗಳು ಮತ್ತು ದೀರ್ಘ ಅಂದರೆ 7 ವರ್ಷಗಳ ಹಳೆಯದಾದ ಪ್ರಕರಣಗಳು ವಿಲೇವಾರಿಯಾಗದೇ ಕೊಳೆಯುತ್ತಿವೆ. ಈ ಬಾಕಿ ಉಳಿಯುವಿಕೆ ಮುಂದಿನ ಐದು ವರ್ಷಗಳವರೆಗೂ ಮುಂದುವರಿಯಲಿದೆ. ಇದರಿಂದ ಸಾಮಾನ್ಯ ಜನರು ಬೇಸತ್ತು ನ್ಯಾಯಿಕ ಮತ್ತು ಭಾಗಶಃ ನ್ಯಾಯಿಕ ವ್ಯವಸ್ಥೆಯಿಂದ ವಿಮುಖರಾಗುತ್ತಾರೆ~ ಎಂದು ಅವರು ಆತಂಕ  ವ್ಯಕ್ತಪಡಿಸಿದ್ದಾರೆ.`ಹೀಗಾದರೆ ಮಾಹಿತಿ ಹಕ್ಕು ಕಾಯ್ದೆ ಸತ್ತಂತೆ. ಮುಂದೆ ಹೆಸರಿಗೆ ಮಾತ್ರ ಆಯೋಗ ಮತ್ತು ಆಯುಕ್ತರು ಇರುವಂತಾಗುತ್ತದೆ. ಇದು ಅತ್ಯಂತ ಕಳವಳಕಾರಿ ಸಂಗತಿ~ ಎಂದರು. ಹುದ್ದೆಯಿಂದ ನಿರ್ಗಮಿಸುತ್ತಿರುವ ಗಾಂಧಿ ಸಿಐಸಿಯಲ್ಲಿ ನಾಗರಿಕ ಸನ್ನದು, ದಾಖಲೆಗಳ ಗಣಕೀಕರಣ, ಕಾಗದ ರಹಿತ ಕಚೇರಿಯಾಗಿ ಮಾಡಿದ್ದಾರೆ. ಆದರೆ ಆಯೋಗದಲ್ಲಿಯೇ  ಅವರಿಗೆ ಹೆಚ್ಚು ಸಹಕಾರ ಸಿಗಲಿಲ್ಲ ಎಂಬ ವಿಷಾದವಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.