ಆರಕ್ಕೇರದ ಮಿನಿಶಾ

7

ಆರಕ್ಕೇರದ ಮಿನಿಶಾ

Published:
Updated:

ಬಾಲಿವುಡ್‌ನ ಮುಂಚೂಣಿಗೆ ಬರಲು ಒದ್ದಾಡುತ್ತಿರುವ ನಟಿಯರಲ್ಲಿ ಮಿನಿಶಾ ಲಂಬಾ ಕೂಡ ಒಬ್ಬಳು. ಕನ್ನಡದ ‘ಕಾಂಟ್ರ್ಯಾಕ್ಟ್’ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ ನಂತರ ಆಕೆ ಮತ್ತೆ ಬಾಲಿವುಡ್ ಕಡೆಗೆ ಮುಖ ಮಾಡಿದ್ದಾಳೆ. ಮತ್ತೆ ಅಲ್ಲಿ ಎರಡನೇ ನಾಯಕಿಯ ಪಾತ್ರ ಸಿಕ್ಕಿದೆ.ಶಿರಿಶ್ ಕುಂದೇರ್ ನಿರ್ದೇಶನದ ‘ಜೋಕರ್’ ಚಿತ್ರದಲ್ಲಿ ಶ್ರೇಯಸ್ ತಲಪಾಡೆಗೆ ಜೋಡಿಯಾಗುವ ಅವಕಾಶ ಅದು. ಆದರೆ ಚಿತ್ರದ ಪ್ರಧಾನ ಪಾತ್ರದಲ್ಲಿ ಅಕ್ಷಯ್ ಕುಮಾರ್ ಮತ್ತು ಸೋನಾಕ್ಷಿ ಸಿನ್ಹಾ ಇದ್ದಾರೆ.ಕಳೆದ ವರ್ಷ ಬಿಡುಗಡೆಯಾದ ಅವಳ ‘ವೆಲ್ ಡನ್ ಅಬ್ಬಾ’ ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆಗಳು ಸಿಕ್ಕಿದ್ದರೂ ಕೂಡ ಅವಳ ಗ್ರಾಫ್ ಏರದೇ ಇರುವುದನ್ನು ಬಾಲಿವುಡ್ ದುರಾದೃಷ್ಟ ಎನ್ನುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry