ಆರತಕ್ಷತೆ ಬಳಿಕ ವರ ಆತ್ಮಹತ್ಯೆ: ನಿಲ್ಲದ ಮದುವೆ

7

ಆರತಕ್ಷತೆ ಬಳಿಕ ವರ ಆತ್ಮಹತ್ಯೆ: ನಿಲ್ಲದ ಮದುವೆ

Published:
Updated:

ಮೈಸೂರು: ಆರತಕ್ಷತೆ ಬಳಿಕ ನಾಪತ್ತೆಯಾಗಿದ್ದ ವರ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಬೆನ್ನಲ್ಲೇ ಅದೇ ಮುಹೂರ್ತಕ್ಕೆ ಬೇರೆ ಯುವಕನೊಂದಿಗೆ ಯುವತಿಯ ಮದುವೆಯಾದ ಸಿನಿಮೀಯ ಘಟನೆ ನಗರದಲ್ಲಿ ನಡೆದಿದೆ.ಎಚ್.ಡಿ.ಕೋಟೆ ತಾಲ್ಲೂಕು ಹಳ್ಳದಮನುಗನಹಳ್ಳಿ ನಿವಾಸಿ ಮಂಜುನಾಥ್ ಅಲಿಯಾಸ್ ಮಂಜು (24) ಆತ್ಯಹತ್ಯೆ ಮಾಡಿಕೊಂಡವರು. ಇವರು ಮರಗೆಲಸ ವೃತ್ತಿ  ಮಾಡುತ್ತ್ದ್ದಿದರು. ಇವರ ಮದುವೆ ನಗರದ ಹಿನಕಲ್ ನಿವಾಸಿ, ಶಿಕ್ಷಕಿ ಗೀತಾ ಅವರೊಂದಿಗೆ ನಿಶ್ಚಯವಾಗಿತ್ತು.ವಿ.ವಿ ಮೊಹಲ್ಲಾದ ಕಾಳಿದಾಸ ರಸ್ತೆಯಲ್ಲಿರುವ ಶ್ರೀರಾಮ ಮಂದಿರದಲ್ಲಿ ಫೆ. 23 ಮತ್ತು 24ರಂದು ಇವರಿಬ್ಬರ ಮದುವೆಗೆ ಸಕಲ ಏರ್ಪಾಟು ಮಾಡಲಾಗಿತ್ತು. ಗುರುವಾರ ರಾತ್ರಿ ಗುರು ಹಿರಿಯರ ಸಮ್ಮುಖದಲ್ಲಿ ನಡೆದ ಆರತಕ್ಷತೆಯಲ್ಲಿ ಮಂಜು ಪಾಲ್ಗೊಂಡಿದ್ದರು. ಆದರೆ, ಮಧ್ಯರಾತ್ರಿ ಇದ್ದಕ್ಕಿದ್ದಂತೆ ಕಾಣೆಯಾದರು. ಸಂಬಂಧಿಕರು ಹುಡುಕಾಟ ನಡೆಸಿದರಾದರೂ ಸುಳಿವು ಸಿಕ್ಕಿರಲಿಲ್ಲ.ಬಳಿಕ  ಅವರು ಶುಕ್ರವಾರ ಬೆಳಿಗ್ಗೆ ಮೇಟಗಳ್ಳಿಯ ಬಿ.ಎಂ.ಶ್ರೀ ನಗರದ ರೈಲು ಹಳಿ ಸಮೀಪ ಮರದಲ್ಲಿ   ನೇಣು ಹಾಕಿಕೊಂಡುದು ಪತ್ತೆಯಾಯಿತು.ಮಂಜುನಾಥ್‌ಗೆ ಈ ಮೊದಲೇ ಹೆಬ್ಬಾಳು ನಿವಾಸಿ, ಜಯಾ ಅವರೊಂದಿಗೆ ಅಕ್ರಮ ಸಂಬಂಧವಿತ್ತು ಎನ್ನಲಾಗಿದೆ. ಮದುವೆಯ ಹಿಂದಿನ ದಿನ ಜಯಾ ಕಲ್ಯಾಣ ಮಂಟಪಕ್ಕೆ ಆಗಮಿಸಿ ಮಂಜು ಜೊತೆ ನಗುಮೊಗದಿಂದಲೇ ಓಡಾಡಿಕೊಂಡು ಇದ್ದರು. ಇದನ್ನು ಗಮನಿಸಿದ ವಧುವಿನ ಸಂಬಂಧಿಕರು ಮಂಜುಗೆ ಈ ಬಗ್ಗೆ ಕೇಳಿದರು. ಇದರಿಂದ ಭಯಭೀತರಾದ ಮಂಜು ಕಲ್ಯಾಣ ಮಂಟಪದಿಂದ ನಾಪತ್ತೆಯಾದರು ಎಂದು ಮೇಟಗಳ್ಳಿ ಪೊಲೀಸರು ತಿಳಿಸಿದರು.ಈ ನಡುವೆ ಮದುವೆಗೆ 15 ಲಕ್ಷ ರೂಪಾಯಿ ಖರ್ಚು ಮಾಡಲಾಗಿದೆ. ಅದೆಲ್ಲವನ್ನೂ ವಾಪಸು ಕೊಡಬೇಕು ಎಂದು ವಧುವಿನ ಸಂಬಂಧಿಕರು ಪಟ್ಟು ಹಿಡಿದರು. ಒಂದೆಡೆ ಮಗನನ್ನು ಕಳೆದುಕೊಂಡ ದುಃಖ, ಇನ್ನೊಂದೆಡೆ ವಧುವಿನ ಮನೆಯವರ ಆಕ್ರೋಶಕ್ಕೆ ತುತ್ತಾದ ವರನ ಪೋಷಕರು ಅಂತಿಮವಾಗಿ 4 ಲಕ್ಷ ರೂಪಾಯಿ ಕೊಡಲು ಒಪ್ಪಿಕೊಂಡರು.ಇದಾದ ಬಳಿಕ ಹುಡುಗಿಯ ಸಂಬಂಧಿಕರೊಬ್ಬರು ಹೇಗಾದರೂ ಮಾಡಿ ಇದೇ ದಿನ ಮದುವೆ ಮಾಡಬೇಕು. ಇಲ್ಲವಾದರೆ ಹುಡುಗಿಯ ಬಾಳು ಹಾಳಾಗುತ್ತದೆ ಎಂದು ಸಲಹೆ ನೀಡಿದರು. ಬಳಿಕ ಹುಡುಗಿಯ ಹತ್ತಿರದ ಸಂಬಂಧಿ, ವೃತ್ತಿಯಿಂದ ಮರಗೆಲಸ ಮಾಡುತ್ತಿದ್ದ ಶಿವರಾಜ್ ಮುಂದೆ ಬಂದು ಗೀತಾಳಿಗೆ ಬಾಳು ನೀಡಿದರು.ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೀತಾ, `ಈ ಘಟನೆಯಿಂದ ನಾನು ಮಾನಸಿಕವಾಗಿ ನೊಂದಿದ್ದೇನೆ. ಶಿವರಾಜ್ ಬಾಳು ನೀಡಿರುವುದು ಸಂತಸವಾಗಿದೆ~ ಎಂದರು. ಇದಕ್ಕೆ ದನಿಗೂಡಿಸಿದ ಶಿವರಾಜ್, `ಗೀತಾಳನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ~ ಎಂದು ನಗುತ್ತಲೇ ಭರವಸೆ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry