ಮಂಗಳವಾರ, ಜೂನ್ 22, 2021
24 °C

ಆರನೇ ಏಷ್ಯನ್ ಮಹಿಳಾ ಬಾಕ್ಸಿಂಗ್: ಭಾರತಕ್ಕೆ ದ್ವಿತೀಯ ಸ್ಥಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆರನೇ ಏಷ್ಯನ್ ಮಹಿಳಾ ಬಾಕ್ಸಿಂಗ್: ಭಾರತಕ್ಕೆ ದ್ವಿತೀಯ ಸ್ಥಾನ

ನವದೆಹಲಿ (ಐಎಎನ್‌ಎಸ್): ಐದು ಬಾರಿಯ ವಿಶ್ವ ಚಾಂಪಿಯನ್ ಭಾರತದ ಮೇರಿ ಕೋಮ್ ಹಾಗೂ ಎಲ್.ಸರಿತಾ ದೇವಿ ಮಂಗೋಲಿಯದ ಉಲಾಬಾತರ್‌ನಲ್ಲಿ ನಡೆದ ಆರನೇ ಏಷ್ಯನ್ ಮಹಿಳಾ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.ಮೇರಿ ಭಾನುವಾರ ಕೊನೆಗೊಂಡ 51 ಕೆ.ಜಿ.ವಿಭಾಗದ ಫೈನಲ್‌ನಲ್ಲಿ 14-8 ಪಾಯಿಂಟ್‌ಗಳಿಂದ ಹಾಲಿ ಚಾಂಪಿಯನ್ ಚೀನಾದ ರೆನ್ ಕಾನ್‌ಕಾನ್ ಅವರನ್ನು ಸೋಲಿಸಿದರು. ಸರಿತಾ 60 ಕೆ.ಜಿ.ವಿಭಾಗದ ಫೈನಲ್‌ನಲ್ಲಿ 16-9 ಪಾಯಿಂಟ್‌ಗಳಿಂದ ತಜಕಿಸ್ತಾನದ ಕೋರಿವಾ ಮವ್‌ಜುನಾ ಅವರನ್ನು ಮಣಿಸಿದರು.ಈ ಚಾಂಪಿಯನ್‌ಷಿಪ್‌ನಲ್ಲಿ ಭಾರತದವರು ಎರಡನೇ ಸ್ಥಾನ ಪಡೆದರು. ಎರಡು ಚಿನ್ನ, ನಾಲ್ಕು ಬೆಳ್ಳಿ ಹಾಗೂ ಹಾಗೂ ಎರಡು ಕಂಚಿನ ಪದಕ ಜಯಿಸಿದರು. ಪಿಂಕಿ ಜಂಗ್ರೊ (60 ಕೆ.ಜಿ.), ಸೋನಿಯಾ ಲಾಥರ್ (58 ಕೆ.ಜಿ.), ಮೋನಿಕಾ ಶಾನ್ (69 ಕೆ.ಜಿ) ಹಾಗೂ ಪೂಜಾ ರಾಣಿ (75 ಕೆ.ಜಿ.) ರನ್ನರ್ ಅಪ್ ಸ್ಥಾನ ಪಡೆದರು. ಚೀನಾ ಮೊದಲ ಸ್ಥಾನ ಗಳಿಸಿತು.ಫೈನಲ್‌ನಲ್ಲಿ ಮಂಗೋಲಿಯದ ತುಮುರ್‌ಹುಯಾಗ್ ಎದುರು ಜಂಗ್ರೊ, ಚೀನಾದ ಕೆ ಜಿಯಾ ಲಿಯು ವಿರುದ್ಧ ಲಾಥರ್, ಡಾಂಗ್ ಮೀ ವಾಂಗ್ ಎದುರು ಶಾನ್, ಏಷ್ಯನ್ ಚಾಂಪಿಯನ್ ಜಿಂಜಿ ಲೀ ವಿರುದ್ಧ ರಾಣಿ ಪರಾಭವಗೊಂಡರು.  ಲಂಡನ್ ಒಲಿಂಪಿಕ್ಸ್‌ಗೆ ಈ ಬಾರಿ ಮಹಿಳೆಯರ ಬಾಕ್ಸಿಂಗ್‌ಗೂ ಅವಕಾಶ ನೀಡಲಾಗಿದೆ. ಮೇರಿ ಈ ಹಿಂದೆ 48 ಕೆ.ಜಿ.ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದರು. ಆದರೆ ಒಲಿಂಪಿಕ್ಸ್‌ನಲ್ಲಿ 51 ಕೆ.ಜಿ ಇರುವ ಕಾರಣ ಈಗ ಈ ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದಾರೆ. ಅವರಿನ್ನೂ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಬೇಕಾಗಿದೆ. ಅದಕ್ಕಾಗಿ ಚೀನಾದಲ್ಲಿ ಮೇ 9ರಿಂದ 20ರವರೆಗೆ ಅರ್ಹತಾ ಸುತ್ತಿನ ಚಾಂಪಿಯನ್‌ಷಿಪ್ ಜರುಗಲಿದೆ.`ಇಲ್ಲಿ ನಾವು ಉತ್ತಮ ಪ್ರದರ್ಶನ ತೋರಿದ್ದೇವೆ. ಒಲಿಂಪಿಕ್ಸ್ ವಿಭಾಗದ ಮೂರು ಸ್ಪರ್ಧೆಗಳಲ್ಲಿ ನಮ್ಮ ಬಾಕ್ಸರ್‌ಗಳು ಚಿನ್ನ ಹಾಗೂ ಬೆಳ್ಳಿ ಪದಕ ಗೆದ್ದಿದ್ದಾರೆ. ಹಾಗಾಗಿ ಇದೊಂದು ದೊಡ್ಡ ಸಾಧನೆ~ ಎಂದು ಭಾರತ ಅಮೆಚೂರ್ ಬಾಕ್ಸಿಂಗ್ ಫೆಡರೇಷನ್‌ನ ಕಾರ್ಯದರ್ಶಿ ಪಿ.ಕೆ.ಮುರುಳೀಧರನ್ ರಾಜ ನುಡಿದಿದ್ದಾರೆ. ಒಲಿಂಪಿಕ್ಸ್‌ನಲ್ಲಿ 51 ಕೆ.ಜಿ, 60 ಕೆ.ಜಿ. ಹಾಗೂ 75 ಕೆ.ಜಿ. ವಿಭಾಗದಲ್ಲಿ ಸ್ಪರ್ಧೆಗಳು ನಡೆಯಲಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.