ಆರನೇ ವಿಶ್ವಕಪ್ ಸಚಿನ್ ಸಾಧನೆ

7

ಆರನೇ ವಿಶ್ವಕಪ್ ಸಚಿನ್ ಸಾಧನೆ

Published:
Updated:
ಆರನೇ ವಿಶ್ವಕಪ್ ಸಚಿನ್ ಸಾಧನೆ

ಕರಾಚಿ (ಪಿಟಿಐ): ಕ್ರಿಕೆಟ್ ಜೀವನದಲ್ಲಿ ಆರನೇ ವಿಶ್ವಕಪ್ ಆಡುವ ಮೂಲಕ ತಮ್ಮ ದಾಖಲೆ ಸರಿಗಟ್ಟಿದ ಭಾರತದ ಸಚಿನ್ ತೆಂಡೂಲ್ಕರ್ ಅವರನ್ನು ಪಾಕಿ ಸ್ತಾನದ ಮಾಜಿ ಕ್ರಿಕೆಟಿಗ ಜಾವೇದ್ ಮಿಯಾಂದಾದ್ ಅಭಿನಂದಿಸಿದ್ದಾರೆ.ಬಾಂಗ್ಲಾದೇಶ ವಿರುದ್ಧ ಶೇರ್-ಎ-ಬಾಂಗ್ಲಾ ಕ್ರೀಡಾಂಗಣದಲ್ಲಿ ಸಚಿನ್ ಅವರು ಆಡುವ ಮೂಲಕ ಆರನೇ ವಿಶ್ವಕಪ್‌ನಲ್ಲಿ ಕಾಣಿಸಿಕೊಂಡ ಸಾಧನೆಯ ಶ್ರೇಯಕ್ಕೆ ಪಾತ್ರರಾದರು.ಆ ಮೂಲಕ ಮಿಯಾಂದಾದ್ ದಾಖಲೆಗೆ ಸಮನಾಗಿ ನಿಂತರು.ಪಾಕಿಸ್ತಾನದ ಜಾವೇದ್ ಅವರು ಈವರೆಗೆ ಅತಿ ಹೆಚ್ಚು ಬಾರಿ ವಿಶ್ವಕಪ್‌ನಲ್ಲಿ ಆಡಿದ ದಾಖಲೆ ಹೊಂದಿದ್ದರು.ಅವರು 1975, 1979, 1983, 1987, 1992 ಹಾಗೂ 1996ರ ವಿಶ್ವಕಪ್‌ನಲ್ಲಿ ಆಡಿದ್ದರು. ಈಗಾಗಲೇ ಐದು ವಿಶ್ವಕಪ್‌ಗಳಲ್ಲಿ ಆಡಿದ್ದ ಸಚಿನ್ ಅವರು ಮತ್ತೊಂದು ಮೈಲಿಗಲ್ಲು ಮುಟ್ಟಿದ್ದಾರೆ. 1992,1996, 1999, 2003 ಹಾಗೂ 2007ರಲ್ಲಿ ತೆಂಡೂಲ್ಕರ್ ಭಾರತ ತಂಡದಲ್ಲಿ ಕಾಣಿಸಿಕೊಂಡಿದ್ದರು. 2011ರ ವಿಶ್ವಕಪ್ ಅವರಿಗೆ ಆರನೆಯದ್ದಾಗಿದೆ.‘ಸಚಿನ್ ನನ್ನ ದಾಖಲೆ ಸರಿಗಟ್ಟಿದ್ದಕ್ಕೆ ಹೆಮ್ಮೆಯ ಅನುಭವ.ಏಕೆಂದರೆ ಇಂಥದೊಂದು ಸಾಧನೆ ಮಾಡುವುದು ಸುಲಭವಲ್ಲ. ದೀರ್ಘ ಕಾಲ ತಂಡದಲ್ಲಿ ಉಳಿಯುವುದೇ ಕಷ್ಟ.ಅಂಥದರಲ್ಲಿ ಇಷ್ಟೊಂದು ವಿಶ್ವಕಪ್‌ನಲ್ಲಿ ಆಡುವುದು ಹಿರಿಮೆ. ಇದಕ್ಕಾಗಿ ನಾನು ಭಾರತದ ಬ್ಯಾಟ್ಸ್‌ಮನ್‌ಗೆ ಹೃದಯ ಪೂರ್ವಕವಾಗಿ ಅಭಿನಂದನೆ ಸಲ್ಲಿಸುತ್ತೇನೆ’ ಎಂದು ಮಿಯಾಂದಾದ್ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.
.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry