ಗುರುವಾರ , ಏಪ್ರಿಲ್ 15, 2021
24 °C

ಆರಾಧ್ಯ ಸರಳ ಹುಟ್ಟುಹಬ್ಬ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾಧ್ಯಮದಲ್ಲಿ ಬಹುಚರ್ಚಿತ ಶಿಶು ಆರಾಧ್ಯ ಬಚ್ಚನ್. ಹುಟ್ಟಿದ, ನಾಮಕರಣವಾದ ಫೋಟೊಗಳಿಗಾಗಿ ಮಾಧ್ಯಮದವರು ಹುಡುಕಾಡಿದ್ದೇ ಹುಡುಕಾಡಿದ್ದು.

ಅದು ಸಿಗದೇಹೋದಾಗ ಕಾಡಿದ್ದು, ಬೇಡಿದ್ದೂ ಆಯಿತು. ಬಿಗ್ ಬೇಬಿಯ ಮುದ್ದಿನ ಮಗ ಅಭಿ ಮತ್ತು ಐಶ್ ದಂಪತಿಯ ಬೇಬಿ ಆರಾಧ್ಯಾಗೆ ಇದೀಗ ಒಂದು ವರ್ಷದ ಸಂಭ್ರಮ.

ನ.16ರಂದು ಜನಿಸಿದ ಈ ಸೆಲೆಬ್ರಿಟಿ ಮಗುವಿನ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಲಾಗುತ್ತದೆ ಎಂದು ಅಮ್ಮ ಐಶ್ವರ್ಯ ರೈ ಹೇಳಿದ್ದಾರೆ.

ಕಳೆದ ವರ್ಷ ನ.11ರಂದು ಈ ಮಗು ಜನಿಸಲಿದೆ ಎಂದು ಬಹುತೇಕ ಜನರು ಬೆಟ್ ಕಟ್ಟಿದ್ದರು. 11.11.11ರಂದೇ ಜನಿಸಲಿದೆ. ಅದಕ್ಕಾಗಿಯೇ ಅಮಿತಾಬ್ ಪರಿವಾರ ಕಾಯುತ್ತಿದೆ ಎಂದೆಲ್ಲ ಬೆಟ್ಟಿಂಗ್ ಕಟ್ಟಲಾಗಿತ್ತು. ಆದರೆ ಸಹಜ ಹೆರಿಗೆಯಲ್ಲಿ ಈ ಮಗು 16ರಂದು ಜನಿಸಿತು.ಕಳೆದ ತಿಂಗಳಷ್ಟೇ ತನ್ನಜ್ಜನ 71ನೇ ಹುಟ್ಟುಹಬ್ಬವನ್ನು ಆಚರಿಸಿರುವ ಆರಾಧ್ಯ, ತನ್ನಮ್ಮನ ಹುಟ್ಟುಹಬ್ಬದಂದು ಕ್ಯಾಮೆರಾ ಕ್ಲಿಕ್‌ಗಳಿಗೆ ಎದುರಾಗಿದ್ದಳು. ಇದೀಗ ಆರಾಧ್ಯ ಮೊದಲ ಹುಟ್ಟುಹಬ್ಬ ಕೇವಲ ಕೌಟುಂಬಿಕ ಆಚರಣೆಯಾಗಲಿದೆ. ಮನೆಯವರನ್ನು ಹೊರತುಪಡಿಸಿದರೆ ಐಶ್ ಅಪ್ಪ, ಅಮ್ಮ ಮಾತ್ರ ಶುಭಕೋರಲು ಬರಲಿದ್ದಾರಂತೆ. ಯಾವುದೇ ಧಾಮ್ ಧೂಮ್ ಇಲ್ಲದೆ ಆರಾಧ್ಯ ತನ್ನ ಮೊದಲ ಹುಟ್ಟುಹಬ್ಬ ಆಚರಿಸಲಿದ್ದಾಳೆ.ಈ ವಯಸ್ಸಿನಲ್ಲಿ ಅವಳಿಗೇನೂ ಅರ್ಥವಾಗದು. ನಮ್ಮ ಆಚರಣೆಗಳ್ಯಾವುವೂ ಅವಳಿಗೆ ಕಿರಿಕಿರಿ ಎನಿಸಬಾರದಲ್ಲ ಎನ್ನುವ ಕಾಳಜಿ ಆರಾಧ್ಯಳ ಅಪ್ಪನದ್ದಂತೆ. ಅಭಿಷೇಕ್ ಬಚ್ಚನ್‌ನ ಪ್ರೀತಿ ಮತ್ತು ಕಾಳಜಿಯನ್ನು ಅಜ್ಜ ಅಮಿತಾಬ್ ಸಹ ಗೌರವಿಸಿದ್ದಾರೆ. ಸಿಹಿಯುಂಡು, ಆರತಿ ಬೆಳಗಿಸಿಕೊಂಡು ಈ ಪುಟಾಣಿ ತನ್ನ ಎರಡನೆಯ ವರ್ಷಕ್ಕೆ ಕಾಲಿಡಲಿದ್ದಾಳೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.