ಗುರುವಾರ , ನವೆಂಬರ್ 14, 2019
19 °C
ಬಿಎಸ್‌ಆರ್‌ಸಿ ಅಭ್ಯರ್ಥಿ ಸೇರಿ 27 ಅಭ್ಯರ್ಥಿಗಳ ನಾಮಪತ್ರ ವಾಪಸ್

ಆರು ಕ್ಷೇತ್ರ: 71 ಅಭ್ಯರ್ಥಿಗಳು ಕಣದಲ್ಲಿ

Published:
Updated:

ಹಾವೇರಿ: ನಾಮಪತ್ರ ವಾಪಸ್ಸು ಪಡೆಯಲು ಕೊನೆಯ ದಿನವಾದ ಶನಿವಾರ ಜಿಲ್ಲೆಯ ಆರು ವಿಧಾನಸಭೆ ಕ್ಷೇತ್ರಗಳ 98 ಅಭ್ಯರ್ಥಿಗಳ ಪೈಕಿ 27 ಅಭ್ಯರ್ಥಿಗಳು ನಾಮಪತ್ರ ವಾಪಸ್ಸು ಪಡೆದಿದ್ದು, 71 ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ.ಹಾನಗಲ್ ಕ್ಷೇತ್ರದ ಬಿಎಸ್‌ಆರ್‌ಕಾಂಗ್ರೆಸ್ ಅಭ್ಯರ್ಥಿ ಹಾಗೂ 26 ಜನ ಪಕ್ಷೇತರ ಅಭ್ಯರ್ಥಿಗಳು ನಾಮಪತ್ರ ವಾಪಸ್ ಪಡೆಯುವ ಮೂಲಕ ಕಣದಿಂದ ಹಿಂದೆ ಸರಿದಿದ್ದಾರೆ.ಹಾವೇರಿ ಮೀಸಲು ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿದ 15 ಅಭ್ಯರ್ಥಿಗಳ ಪೈಕಿ ಐದು ಅಭ್ಯರ್ಥಿಗಳು ನಾಮಪತ್ರ ವಾಪಸ್ಸು ಪಡೆದು 10 ಅಭ್ಯರ್ಥಿಗಳಲ್ಲಿ ಕಣದಲ್ಲಿ ಉಳಿದರೆ, ರಾಣೆಬೆನ್ನೂರ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿದ 16 ಅಬ್ಯರ್ಥಿಗಳಲ್ಲಿ ಇಬ್ಬರು ಅಭ್ಯರ್ಥಿಗಳು ನಾಮಪತ್ರ ವಾಪಸ್ಸು ಪಡೆದು 14 ಅಭ್ಯರ್ಥಿಗಳು ಅಂತಿಮ ಕಣದಲ್ಲಿ ಉಳಿದಿದ್ದಾರೆ.ಹಾನಗಲ್ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿದ 18 ಅಭ್ಯರ್ಥಿಗಳಲ್ಲಿ 11 ಅಭ್ಯರ್ಥಿಗಳು ನಾಮಪತ್ರ ವಾಪಸ್ಸು ಪಡೆದು 7 ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದರೆ, ಬ್ಯಾಡಗಿ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿದ 17 ಅಭ್ಯರ್ಥಿಗಳ ಪೈಕಿ ನಾಲ್ವರು ಅಭ್ಯರ್ಥಿಗಳು ನಾಮಪತ್ರ ವಾಪಸ್ಸು ಪಡೆದ ಪರಿಣಾಮ 13 ಅಭ್ಯರ್ಥಿಗಳು ಕಣದಲ್ಲಿದ್ದಾರೆ.ಶಿಗ್ಗಾವಿ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿದ 15 ಅಭ್ಯರ್ಥಿಗಳಲ್ಲಿ ನಾಲ್ವರು ನಾಮಪತ್ರ ವಾಪಸ್ಸು ಪಡೆದಿದ್ದು, 11 ಅಭ್ಯರ್ಥಿಗಳು ಅಂತಿಮ ಕಣದಲ್ಲಿ ಉಳಿದರೆ, ಹಿರೇಕೆರೂರ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿದ 17 ಅಭ್ಯರ್ಥಿಗಳಲ್ಲಿ ಒಬ್ಬ ಅಭ್ಯರ್ಥಿ ನಾಮಪತ್ರ ವಾಪಸ್ಸು ಪಡೆದಿದ್ದರಿಂದ 16 ಅಭ್ಯರ್ಥಿಗಳು ಅಂತಮ ಹಣಾಹಣಿಗೆ ಕಣದಲ್ಲಿ ಉಳಿದುಕೊಂಡಿದ್ದಾರೆ.ಮಾಜಿ ಸಚಿವರಾದ ಸಿ.ಎಂ.ಉದಾಸಿ, ಬಸವರಾಜ ಬೊಮ್ಮಾಯಿ, ಕೆ.ಬಿ.ಕೋಳಿವಾಡ, ಬಸವರಾಜ ಶಿವಣ್ಣನವರ, ಶಾಸಕ ಬಿ.ಸಿ.ಪಾಟೀಲ, ಮಾಜಿ ಉಪಸಭಾಪತಿ ಮನೋಹರ ತಹಸೀಲ್ದಾರ್, ಮಾಜಿ ಶಾಸಕರಾದ ನೆಹರೂ ಓಲೇಕಾರ, ಜಿ.ಶಿವಣ್ಣ, ಶಿವರಾಜ ಸಜ್ಜನರ, ಯು.ಬಿ.ಬಣಕಾರ, ಸಯ್ಯದ್ ಅಜ್ಜಂಪೀರ್ ಖಾದ್ರಿ, ಬಿ.ಎಚ್. ಬನ್ನಿಕೋಡ ಅವರು ಸೇರಿದಂತೆ 71 ಜನರು ಅದೃಷ್ಠ ಪರೀಕ್ಷೆಗೆ ಮುಂದಾಗಿದ್ದಾರೆ.ಅಂತಿಮ ಕಣದಲ್ಲಿರುವವರು: ಹಾವೇರಿ ಮೀಸಲು ವಿಧಾನಸಭಾ ಕ್ಷೇತ್ರದ ಒಟ್ಟು 10 ಅಭ್ಯರ್ಥಿಗಳಲ್ಲಿ ಕಾಂಗ್ರೆಸ್‌ನ ರುದ್ರಪ್ಪ ಲಮಾಣಿ, ಕೆಜೆಪಿ ನೆಹರೂ ಓಲೇಕಾರ, ಬಿಜೆಪಿ ಡಾ. ಮಲ್ಲೇಶಪ್ಪ ಹರಿಜನ, ಜೆಡಿಎಸ್‌ನ ಪರಮೇಶಪ್ಪ ಮೇಗಳಮನಿ, ಬಿಎಸ್‌ಆರ್ ಕಾಂಗ್ರೆಸ್‌ನ ಕರಿಯಲ್ಲಪ್ಪ ಭಜಂತ್ರಿ, ಬಿಎಸ್‌ಪಿಯ ಶಂಕರಪ್ಪ ಕುನ್ನೂರ, ಜೆಡಿಯುನ ಶಂಕರ ಅಲ್ಲಿಪುರ, ಪಕ್ಷೇತರರಾಗಿ ಡಾ. ಸಂಜಯ ಡಾಂಗೆ, ಮೋತಿಲಾಲ್ ದೊಡ್ಡಮನಿ, ಸಂಜಯಗಾಂಧಿ ಸಂಜೀವಣ್ಣನವರ ಕಣದಲ್ಲಿ ಉಳಿದಿದ್ದಾರೆ.ರಾಣೆಬೆನ್ನೂರ ವಿಧಾನಸಭಾ ಕ್ಷೇತ್ರದ ಒಟ್ಟು 14 ಅಭ್ಯರ್ಥಿಗಳಲ್ಲಿ ಕಾಂಗ್ರೆಸ್‌ನ ಕೆ.ಬಿ. ಕೋಳಿವಾಡ, ಕೆಜೆಪಿಯ ಜಿ. ಶಿವಣ್ಣ, ಬಿಜೆಪಿಯ ಅರುಣಕುಮಾರ ಪೂಜಾರ, ಜೆಡಿಎಸ್‌ನ ಮಂಜುನಾಥ ಗೌಡಶಿವಣ್ಣನವರ, ಬಿಎಸ್‌ಆರ್ ಕಾಂಗ್ರೆಸ್‌ನ ಕೊಟ್ರಪ್ಪ ಕೋರಿ, ಬಿಎಸ್‌ಪಿಯ ಉಮೇಶ ಗುರುಲಿಂಗಪ್ಪಗೌಡ್ರ, ಎಸ್‌ಪಿಯ ರುದ್ರೇಶ ಹಡಗಲಿ, ಜೆಡಿಯುನ ಬಿ.ಎ. ಸುನೀಲ, ಪಕ್ಷೇತರರಾಗಿ ಆರ್. ಶಂಕರ್, ಗಂಗಾಧರ ಹಾದಿಮನಿ, ಬಿ.ಎಂ. ಜಯದೇವ, ಪ್ರಕಾಶ ಜೈನ್, ಬಸಪ್ಪ ಬಣಕಾರ, ಹನಮಂತಪ್ಪ ಕಬ್ಬಾರ ಅಂತಿಮ ಕಣದಲ್ಲಿದ್ದಾರೆ.ಹಾನಗಲ್ ವಿಧಾನಸಭಾ ಕ್ಷೇತ್ರದ ಒಟ್ಟು 7 ಅಭ್ಯರ್ಥಿಗಳಲ್ಲಿ ಕಾಂಗ್ರೆಸ್‌ನ ಮನೋಹರ ತಹಸೀಲ್ದಾರ್, ಕೆಜೆಪಿಯ ಸಿ.ಎಂ.ಉದಾಸಿ, ಬಿಜೆಪಿಯ ಬಸವರಾಜ ಹಾದಿಮನಿ, ಜೆಡಿಎಸ್‌ನ ಬಿ.ಕೆ. ಮೋಹನಕುಮಾರ, ಬಿಎಸ್‌ಪಿಯ ಕೃಷ್ಣಾ ಲಮಾಣಿ, ಪಕ್ಷೇತರರಾಗಿ ರಾಮು ಯಳ್ಳೂರ, ಸಿದ್ದಪ್ಪ ಪೂಜಾರ ಕಣದಲ್ಲಿರುವ ಅಭ್ಯರ್ಥಿಗಳಾಗಿದ್ದಾರೆ.ಬ್ಯಾಡಗಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಬಸವರಾಜ ಶಿವಣ್ಣನವರ, ಕೆಜೆಪಿಯ ಶಿವರಾಜ ಸಜ್ಜನರ, ಬಿಜೆಪಿಯ ವಿರೂಪಾಕ್ಷಪ್ಪ ಬಳ್ಳಾರಿ, ಜೆಡಿಎಸ್‌ನ ಭರಮಪ್ಪ ಕಾರಗಿ, ಬಿಎಸ್‌ಆರ್ ಕಾಂಗ್ರೆಸ್‌ನ ದಾದಾಫೀರ್ ಬೂಶಿ, ಬಿಎಸ್‌ಪಿಯ ಬಸವಂತಪ್ಪ ಗೋಣೆಮ್ಮನವರ, ಎಸ್‌ಜೆಪಿ ಬಸವಂತಪ್ಪ ಹುಲ್ಲತ್ತಿ,  ಪಕ್ಷೇತರರಾಗಿ ಬಿ.ಎಂ.ಜಯದೇವಮಠದ, ದೇವಪ್ಪ ಹುಳಿಕೆಲ್ಲಪ್ಪನವರ,  ಶಿವಕುಮಾರ ತಳವಾರ, ಶಿವಣ್ಣ ಹೂಗಾರ, ರುದ್ರಯ್ಯ ಸಾಲಿಮಠ, ಹಾಲಪ್ಪ ತಿಮ್ಮೇನಹಳ್ಳಿ ಅಂತಿಮ ಸ್ಪರ್ಧೆಯಲ್ಲಿದ್ದಾರೆ.ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಕ್ಷೇತ್ರ ಒಟ್ಟು 11 ಅಭ್ಯರ್ಥಿಗಳಲ್ಲಿ ಬಿಜೆಪಿಯ ಬಸವರಾಜ ಬೊಮ್ಮಾಯಿ, ಕಾಂಗ್ರೆಸ್‌ನ ಸೈಯದ್‌ಅಜ್ಜಂಪೀರ್ ಖಾದ್ರಿ, ಕೆಜೆಪಿಯ ಬಾಪುಗೌಡ ಪಾಟೀಲ, ಜೆಡಿಎಸ್‌ನ ಸುಮಂಗಲಾ ಮೈಸೂರ, ಬಿಎಸ್‌ಪಿಯ ಓಂಕಾರ ಕೃಷ್ಣಾಜಿ, ಎನ್‌ಸಿಪಿಯ ನಂದನ ತಾಂಬೆ, ಜೆಡಿಯುನ ಅಶೋಕ ಮೈಸೂರ, ಆರ್‌ಸಿಪಿಯ ನಾಗನಗೌಡ ಮರಿಗೌಡ್ರ, ಪಕ್ಷೇತರರಾಗಿ ಪುಟ್ಟಪ್ಪ ಅಗಡಿ, ಸುರೇಶ ಕುನ್ನೂರ, ಮದನ ಹಿಟ್ಟಣಗಿ ಕಣದಲ್ಲಿದ್ದಾರೆ.ಹಿರೇಕೆರೂರ ವಿಧಾನಸಭಾ ಕ್ಷೇತ್ರದ ಒಟ್ಟು 16 ಅಭ್ಯರ್ಥಿಗಳಲ್ಲಿ ಕಾಂಗ್ರೆಸ್‌ನ ಬಿ.ಸಿ. ಪಾಟೀಲ, ಕಜೆಪಿಯ ಯು.ಬಿ. ಬಣಕಾರ, ಬಿಜೆಪಿಯ ಪಾಲಾಕ್ಷಗೌಡ ಪಾಟೀಲ, ಜೆಡಿಎಸ್‌ನ ಡಿ.ಎಂ. ಸಾಲಿ, ಬಿಎಸ್‌ಆರ್ ಕಾಂಗ್ರೆಸ್‌ನ ಎಚ್.ಎಂ. ಅಶೋಕ, ಬಿಎಸ್‌ಪಿಯ ಸುಲೇಮಾನ ಬಳಿಗಾರ, ಎಲ್‌ಪಿಯ ಸಂಪತ್ತಕುಮಾರ ಮುತ್ತಳ್ಳಿ, ಪಕ್ಷೇತರರಾಗಿ ಬಿ.ಎಚ್. ಬನ್ನಿಕೋಡ, ಪಿ.ಡಿ. ಬಸವನಗೌಡ್ರ, ಎಸ್.ಎಸ್. ಕುಸಗೂರ, ಚಂದ್ರಶೇಖರ ಬಾರಂಗಿ, ದಾದಾಫೀರ್‌ಸಾಬ ಕೂಲಂಬಿ, ನೀಲಪ್ಪ ಈಟೇರ, ಶಿವಪ್ಪ ಬೇವಿನಹಳ್ಳಿ, ಮಾರುತಿ ಮಣಕೂರ, ರಾಜೇಶ ಜೋಳದ ಅಂತಿಮ ಕಣದಲ್ಲಿದ್ದಾರೆ.

ಪ್ರತಿಕ್ರಿಯಿಸಿ (+)