ಆರೋಗ್ಯವಂತ ಮೂಗು ಉತ್ತಮ ಸಂಬಂಧ ಸೂಚಕ!

7

ಆರೋಗ್ಯವಂತ ಮೂಗು ಉತ್ತಮ ಸಂಬಂಧ ಸೂಚಕ!

Published:
Updated:

ಲಂಡನ್ (ಐಎಎನ್‌ಎಸ್): ಆರೋಗ್ಯವಂತ ಮೂಗು ಸುಖಕರ ಮತ್ತು ದೀರ್ಘಕಾಲಿನ ಸಂಬಂಧವನ್ನು ಸೂಚಿಸುತ್ತದೆ ಎಂದು ಬ್ರಿಟಿಷ್ ಮಾಧ್ಯಮ ವರದಿಗಳ ಅಧ್ಯಯನ ತಿಳಿಸಿವೆ.ಪುರುಷ ಅಥವಾ ಮಹಿಳೆ ಯಾರೇ ಆಗಿರಲಿ ವಾಸನೆ ಕಂಡು ಹಿಡಿಯುವಲ್ಲಿ ವಿಫಲವಾದವರು ಜೀವನದಲ್ಲಿ ಅಭದ್ರತೆಯನ್ನು ಎದುರಿಸುತ್ತಾರೆ ಎಂಬ ಅಂಶವು ಆಘ್ರಾಣ ಶಕ್ತಿ ಇರುವ ಹಾಗೂ ಇಲ್ಲದಿರುವ 18ರಿಂದ 46 ವರ್ಷ ವಯಸ್ಸಿನವರ ಮೇಲೆ ನಡೆಸಿದ ವಿವಿಧ ಅಧ್ಯಯನದಿಂದ ತಿಳಿದುಬಂದಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.ಸಂಬಂಧಗಳ ವಿಷಯದಲ್ಲಿ ಪುರುಷರ ಮೇಲೆ ಆಘ್ರಾಣ ಶಕ್ತಿ ಹೆಚ್ಚಿನ ಪರಿಣಾಮ ಬೀರುತ್ತದೆ. ಆದರೆ ಮಹಿಳೆಯರಿಗೆ ಅಪವಾದ ಎಂಬಂತೆ ಆಘ್ರಾಣ ಶಕ್ತಿಯ ಕೊರತೆ ಅವರಲ್ಲಿ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಅಧ್ಯಯನ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry