ಮಂಗಳವಾರ, ಅಕ್ಟೋಬರ್ 22, 2019
26 °C

ಆರೋಗ್ಯವೇ ಭಾಗ್ಯ ದಿನಾಚರಣೆ: ಮಕ್ಕಳಿಗೆ ಕ್ರೀಡಾ ಸ್ಪರ್ಧೆ

Published:
Updated:
ಆರೋಗ್ಯವೇ ಭಾಗ್ಯ ದಿನಾಚರಣೆ: ಮಕ್ಕಳಿಗೆ ಕ್ರೀಡಾ ಸ್ಪರ್ಧೆ

ನೆಲಮಂಗಲ: `ನಿಮ್ಮ ಮಕ್ಕಳು ನಿಮ್ಮವರಲ್ಲ, ನಿಮ್ಮಡನಿದ್ದರೂ ನಿಮಗಷ್ಟೇ ಸಂಬಂಧಪಟ್ಟವರಲ್ಲ, ಅವರು ಅವರದೇ ಕನಸಲ್ಲಿ ಬದುಕಲಿ~ ಎಂದು ಲಯನ್ಸ್ ಸಂಸ್ಥೆ ಮಾಜಿ ಅಧ್ಯಕ್ಷ ಬಿ.ಸುರೇಶ್ ಆಳ್ವ ತಿಳಿಸಿದರು.ಸ್ಥಳೀಯ ಹರ್ಷ ಸಮೂಹ ಸಂಸ್ಥೆಯ ಯೂರೊ ಕಿಡ್ಸ್ ವತಿಯಿಂದ ಏರ್ಪಡಿಸಿದ್ದ ಆರೋಗ್ಯವೇ ಭಾಗ್ಯ ದಿನಾಚರಣೆಯ ಒಲಂಪಿಕ್ಸ್ ಜ್ಯೋತಿಯನ್ನು ಸ್ವೀಕರಿಸಿ ಮಾತನಾಡಿ ಮಕ್ಕಳಿಗೆ ನಿಮ್ಮ ಪ್ರೀತಿಯನ್ನು ಕೊಡಬಹುದು ಆಲೋಚನೆಗಳನ್ನಲ್ಲ ಎಂದರು. ದಿನಾಚರಣೆ ಬಗ್ಗೆ ಮಾಸ್ಟರ್ ಎಸ್.ಆರ್.ಯಶಸ್, ಹಂಸಶೇಖ್ ಭಟ್ ಮಾತನಾಡಿದರು. ಎಲ್.ಮೋಹಿತ್ ಸಂದೇಶ ವಾಚಿಸಿದರು. ಕ್ರೀಡಾ ವಿಜೇತರಿಗೆ ಸಂಸ್ಥೆ ಅಧ್ಯಕ್ಷ ಶಿವಕುಮಾರ್ ಪ್ರಶಸ್ತಿ ಪತ್ರ ವಿತರಿಸಿದರು.ಅತ್ಯುತ್ತಮ ಪ್ರದರ್ಶನ ನೀಡಿದ ವಿದ್ಯಾರ್ಥಿಗಳಿಗೆ ಗಿರಿಜಾ ಶಿವಕುಮಾರ್ ನಗದು ಬಹುಮಾನ ವಿತರಿಸಿದರು.ಮುಖ್ಯಶಿಕ್ಷಕಿ ಪೂರ್ಣಿಮಾ ಪ್ರತಿಭಾನ್ವಿತರನ್ನು ಪರಿಚಯಿಸಿದರು. ವಿವಿಧ ಸ್ಪರ್ಧೆಗಳನ್ನು ಮಕ್ಕಳಿಗೆ, ಪಾಲಕರಿಗೆ ಏರ್ಪಡಿಸಲಾಗಿತ್ತು.

 

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

Post Comments (+)