ಆರೋಗ್ಯ ಇಲಾಖೆಗೆ ನಿರ್ದೇಶಕರ ನೇಮಕ

7

ಆರೋಗ್ಯ ಇಲಾಖೆಗೆ ನಿರ್ದೇಶಕರ ನೇಮಕ

Published:
Updated:

ಬೆಂಗಳೂರು: ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ ನಿರ್ದೇಶಕಿ ಡಾ.ಎ.ಆರ್.ಅರುಣಾ ಅವರನ್ನು ವರ್ಗಾಯಿಸಿ, ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಸ್ಥೆಯ ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿದೆ.ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದಲ್ಲಿ ಪ್ರಸ್ತುತ ಜಂಟಿ ನಿರ್ದೇಶಕರಾಗಿರುವ ಡಾ.ಜಿ.ಎಸ್.ವೆಂಕಟೇಶ್ ಅವರನ್ನು ನಿರ್ದೇಶಕರನ್ನಾಗಿ (ಹಂಗಾಮಿ) ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.ವೈದ್ಯಕೀಯ ಕೋರ್ಸ್‌ಗಳ ಪ್ರವೇಶ ಮೇಲ್ವಿಚಾರಣೆ ಮತ್ತು ದೂರುಗಳ ವಿಚಾರಣೆಗಾಗಿ ವಿಶ್ರಾಂತ ಕುಲಪತಿ ಡಾ.ಸುಧಾರಾವ್ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿತ್ತು. ಅವರು ರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿ ಆ ಸ್ಥಾನಕ್ಕೆ ಮತ್ತೊಬ್ಬ ಅರ್ಹ ವ್ಯಕ್ತಿಯನ್ನು ನೇಮಕ ಮಾಡಲಾಗುವುದು ಎಂಬುದಾಗಿ ವೈದ್ಯಕೀಯ ಶಿಕ್ಷಣ ಸಚಿವ ಎಸ್.ಎ.ರಾಮದಾಸ್ ಹೇಳಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry