`ಆರೋಗ್ಯ ಇಲಾಖೆಯಿಂದ ಹ್ಯಾಪಿ ಡ್ರಾಪ್ ಯೋಜನೆ'

7

`ಆರೋಗ್ಯ ಇಲಾಖೆಯಿಂದ ಹ್ಯಾಪಿ ಡ್ರಾಪ್ ಯೋಜನೆ'

Published:
Updated:

 


ಕುಮಟಾ: `ಸರಕಾರಿ ಆಸ್ಪತ್ರೆಯಲ್ಲಿ ಹೆರಿಗೆಗೆಂದು ದಾಖಲಾಗುವ ಮಹಿಳೆಯರಿಗೆ ಎಲ್ಲ ಸೌಲಭ್ಯ ಕಲ್ಪಿಸಿ ಅವರನ್ನು ಆಸ್ಪತ್ರೆಯ ವಾಹನದಲ್ಲಿಯೇ ಮನೆಗೆ ತಲುಪಿಸುವ ಗುಜರಾತ್ ಮಾದರಿಯ `ಹ್ಯಾಪಿ ಡ್ರಾಪ್' ಯೋಜನೆಯನ್ನು ಆರೋಗ್ಯ ಇಲಾಖೆ ಶೀಘ್ರ ಅನುಷ್ಠಾನಕ್ಕೆ ತರಲಿದೆ' ಎಂದು ಆರೋಗ್ಯ ಸಚಿವ ಅರವಿಂದ ಲಿಂಬಾವಳಿ ಹೇಳಿದರು.

 

ತಾಲ್ಲೂಕಿನ ಮೂರೂರಿನಲ್ಲಿ ಬುಧವಾರ ಮುಕ್ತಾಯಗೊಂಡ ಮೂರೂರು- ಕಲ್ಲಬ್ಬೆ ಉತ್ಸವ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, `ಮೂರೂರಿಗೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮಂಜೂರು ನೀಡಲಾಗಿದೆ. ಅದರ ಕಟ್ಟಡಕ್ಕೂ   ಬೇಕಾಗುವ ಒಂದು  ಕೋಟಿ ರೂಪಾಯಿ ಅನುದಾನವನ್ನೂ ಮಂಜೂರು ಮಾಡಲಾಗಿದೆ. ಆದರೆ ಸ್ಥಳೀಯರು ಆಸ್ಪತ್ರೆಗೆ ಎರಡು ಎಕರೆ ನಿವೇಶನವನ್ನು ಮಾತ್ರ ಒದಗಿಸಬೇಕು' ಎಂದರು.

 

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಲಲಿತಾ ಪಟಗಾರ, ಉದ್ಯಮಿ ಶಶಿಭೂಷಣ ಹೆಗಡೆ, ರವಿಕುಮಾರ ಶೆಟ್ಟಿ ಮಾತನಾಡಿದರು. ತಾಲ್ಲೂಕು ಪಂಚಾಯಿತಿ ಸದಸ್ಯ ರಾಧಾಕೃಷ್ಣ ಗೌಡ, ಪತ್ರಕರ್ತ ವಿಶ್ವೇಶ್ವರ ಭಟ್ಟ, ಡಾ. ಜಿ.ಜಿ.ಹೆಗಡೆ ಮೊದಲಾದವರಿದ್ದರು. ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ರವೀಂದ್ರ ಭಟ್ಟ ಸೂರಿ ನಿರೂಪಿಸಿದರು. ಮೂರೂರು-ಕಲ್ಲಬ್ಬೆ ಉತ್ಸವ ಸಮಿತಿ  ಜಿ.ಎಸ್.ಹೆಗಡೆ ಸ್ವಾಗತಿಸಿದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry