ಬುಧವಾರ, ಮೇ 18, 2022
25 °C

ಆರೋಗ್ಯ ಕ್ಷೇತ್ರದಲ್ಲಿ ರಾಜ್ಯದ ಹೂಡಿಕೆ ನಗಣ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: . `ಆರೋಗ್ಯ ಕ್ಷೇತ್ರದಲ್ಲಿ ರಾಜ್ಯದ ಹೂಡಿಕೆ ತೀರಾ ನಗಣ್ಯ ಪ್ರಮಾಣದಲ್ಲಿದೆ. ಪ್ರಸ್ತುತ ಕೇವಲ ಶೇ 0.9ರಷ್ಟು ಸಾರ್ವಜನಿಕ ಹಣವನ್ನು ಆರೋಗ್ಯ ಕ್ಷೇತ್ರಕ್ಕೆ ಮೀಸಲಿಡಲಾಗಿದೆ. 2015ರ ವೇಳೆಗೆ ಇದನ್ನು ಶೇ 2ರಿಂದ 3ಕ್ಕೆ ಹೆಚ್ಚಿಸುವ ಗುರಿ ಹೊಂದಲಾಗಿದೆ~ ಎಂದು ಭಾರತೀಯ ಕುಟುಂಬ ಕಲ್ಯಾಣ ಸಂಸ್ಥೆಯ (ಎಫ್‌ಪಿಎ ಇಂಡಿಯಾ) ಬೆಂಗಳೂರು ಶಾಖೆ ಅಧ್ಯಕ್ಷ ಕೆ.ಎಸ್.ಅನಂತಸುಬ್ಬರಾವ್ ತಿಳಿಸಿದರು.`ವಿಶ್ವಸಂಸ್ಥೆಯ ಶತಮಾನದ ಅಭಿವೃದ್ಧಿ ಗುರಿ- ತಾಯಿ ಆರೋಗ್ಯ ಸುಧಾರಣೆ~ ವಿಚಾರವಾಗಿ ಸಂಸ್ಥೆ ನಗರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಬೆಂಗಳೂರು ವಲಯದ ಸಂಸದರು ಮತ್ತು ಶಾಸಕರ ಸಮರ್ಥನಾ ಸಭೆಯಲ್ಲಿ ಅವರು ಮಾತನಾಡಿದರು.ಶಾಸಕ ರೋಷನ್ ಬೇಗ್, `ವಿಧಾನಸೌಧದ ಸುತ್ತಮುತ್ತ ಇರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳೇ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಇನ್ನು ಕರ್ನಾಟಕದ ಕುಗ್ರಾಮಗಳಲ್ಲಿರುವ ಜನರ ಪಾಡು ಹೇಳತೀರದು~ ಎಂದರು.ಮಾಜಿ ಸಚಿವೆ ರಾಣಿ ಸತೀಶ್ ಮಾತನಾಡಿ, `ಋತುಮತಿಯಾದ ವಿದ್ಯಾರ್ಥಿನಿಯರು ಶಾಲೆಗೆ ತೆರಳಲು ಹಿಂಜರಿಯುತ್ತಾರೆ. ಇಂತಹ ವಿದ್ಯಾರ್ಥಿನಿಯರಿಗೆ ಸರ್ಕಾರವೇ ಕೆಲವು ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಬೇಕು. ಶೌಚಾಲಯ ವ್ಯವಸ್ಥೆಯನ್ನು ಕಲ್ಪಿಸಬೇಕು~ ಎಂದರು.ಶಾಸಕ ನೆ.ಲ.ನರೇಂದ್ರಬಾಬು ಮಾತನಾಡಿದರು. ಸಂಸ್ಥೆ ಅಖಿಲ ಭಾರತ ಅಧ್ಯಕ್ಷೆ ಸುಜಾತಾ ನಟರಾಜನ್, ಗೌರವ ಕಾರ್ಯದರ್ಶಿ ಮಧುರಾ ಅಶೋಕ್ ಕುಮಾರ್ ಇತರರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.