ಭಾನುವಾರ, ಜೂನ್ 20, 2021
21 °C

ಆರೋಗ್ಯ ಜೀವನ ವಿಧಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರ: ಸಪ್ತಗಿರಿ ಪ್ರಿಂಟರ್ಸ್‌ ಅಂಡ್ ಪಬ್ಲಿಷರ್ಸ್‌, ಮಂಜುನಾಥ ನಗರ, ಬೆಂಗಳೂರು. ಬೆಲೆ: ರೂ 75.

ಆಧುನಿಕ ಜೀವನ ಶೈಲಿಯಿಂದಾಗಿ ಇಂದು ಸಣ್ಣ-ಸಣ್ಣ ಕಾಯಿಲೆಗಳೆಲ್ಲ ದೊಡ್ಡ ಸಮಸ್ಯೆಗಳಾಗಿ ಕಾಣುತ್ತಿವೆ. ಚಿಕ್ಕ-ಪುಟ್ಟ ಆತಂಕ, ಒತ್ತಡ, ಕೋಪೋದ್ರೇಕದಂತಹ ಭಾವನೆಗಳು ಮಾನಸಿಕ ಆಘಾತವನ್ನುಂಟು ಮಾಡುವ ತೊಡುಕುಗಳಾಗುತ್ತಿವೆ.

 

ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಆರೋಗ್ಯದ ಕಾಳಜಿ ಹೇಗೆ, ಆರೋಗ್ಯಕರ ಜೀವನ ವಿಧಾನ ಹೇಗೆ ಎಂಬ ಬಗ್ಗೆ ಲೇಖಕ ಎ. ಶಿವಾನಂದ ಈ ಪುಸ್ತಕದಲ್ಲಿ ಪರಿಹಾರ ಸೂಚಿಸಲು ಯತ್ನಿಸಿದ್ದಾರೆ.ಜೀವನ ಪದ್ಧತಿ, ಪೌಷ್ಟಿಕ ಆಹಾರ, ಹವ್ಯಾಸಗಳು, ಮನೆ ಔಷಧಿ ಬಗ್ಗೆ ವಿವಿಧ ಗ್ರಂಥಗಳ ಅಧ್ಯಯನ ಮಾಡಿ ಈ ವಿಷಯಗಳನ್ನು  ಎಲ್ಲರ ಗ್ರಹಿಕೆಗೂ ನಿಲುಕುವಂತೆ ಸರಳವಾಗಿ ನಿರೂಪಿಸಿದ್ದಾರೆ.ಹವ್ಯಾಸಿ ಆಪ್ತ ಸಮಾಲೋಚಕರಾಗಿ ಸೇವೆ ಸಲ್ಲಿಸುತ್ತಿರುವ  ಶಿವಾನಂದ್ ನೆಮ್ಮದಿಯ ಜೀವನ ನಡೆಸುವ ವಿಧಾನ, ಉತ್ತಮ ಆರೋಗ್ಯಕ್ಕಾಗಿ ಮಿತ ಆಹಾರ, ಮನೆ ಔಷಧ, ಮಕ್ಕಳಿಗೆ ಆಹಾರ, ಉಲ್ಲಾಸಕ್ಕೆ ಉತ್ತಮ ಹವ್ಯಾಸ, ನಾರಿನಾಂಶವುಳ್ಳ ಆಹಾರ ಮುಂತಾದ ವಿಷಯಗಳನ್ನು ಚರ್ಚಿಸಿದ್ದಾರೆ.ವಿವಿಧ ಹಣ್ಣು-ತರಕಾರಿಗಳ ಮಹತ್ವ, ಆರೋಗ್ಯದ ಮೇಲೆ ಅವುಗಳಿಂದ ಉಂಟಾಗುವ ಪರಿಣಾಮ ಹಾಗೂ ಅವುಗಳಲ್ಲಿ ಅಡಕವಾಗಿರುವ ಪೌಷ್ಟಿಕಾಂಶಗಳ ಬಗ್ಗೆ ಇಲ್ಲಿ ಮಾಹಿತಿ ಇದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.