ಶುಕ್ರವಾರ, ಜೂನ್ 18, 2021
27 °C

ಆರೋಗ್ಯ ಮೂಲಭೂತ ಹಕ್ಕಾಗಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಆರೋಗ್ಯದ ಹಕ್ಕು ಮೂಲಭೂತ ಹಕ್ಕುಗಳಲ್ಲಿ  ಒಂದಾದಾಗ ಮಾತ್ರ ಸರ್ವರಿಗೂ ಆರೋಗ್ಯವನ್ನು ಒದಗಿಸಿಕೊಡಬಹುದಾಗಿದೆ.  ಇದಕ್ಕಾಗಿ ಸಂವಿಧಾನಕ್ಕೆ ತಿದ್ದುಪಡಿ ತರಬೇಕೆಂದು ಮಾಜಿ ಸಚಿವ ಎಚ್. ಎಂ. ರೇವಣ್ಣ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.ಕೃಷ್ಣಯ್ಯನ ಪಾಳ್ಯದಲ್ಲಿ  ನಡೆದ ಸ್ವಾಮಿ ವಿವೇಕಾನಂದ ಶಾಲಾ ವಾರ್ಷಿಕೋತ್ಸವ, ಉಚಿತ ಆರೋಗ್ಯ ತಪಾಸಣೆ ಶಿಬಿರ ಮತ್ತು ಔಷಧಿ ವಿತರಣೆ ಹಾಗೂ ಗಣ್ಯರಿಗೆ ಏರ್ಪಡಿಸಲಾಗಿದ್ದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು ಜಾಗತೀಕರಣ ನೀತಿ ಭಾರತದ ಆರೋಗ್ಯ ಕ್ಷೇತ್ರವನ್ನು ಪಾಳುಗೆಡವಿದೆ ಎಂದು ಅಭಿಪ್ರಾಯಪಟ್ಟರು.ಬಡವರಿಗಾಗಿ ಉಚಿತ ಆರೋಗ್ಯ ತಪಾಸಣೆ ಮತ್ತು ಔಷಧಿ ವಿತರಿಸುವ ಕಾರ್ಯಕ್ರಮಗಳು ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗುತ್ತಿದೆ.  ಇಲ್ಲಿ ಬಹುಶಃ ವಲಸೆ ಬಂದು ನೆಲೆಸಿರುವವರೇ ಹೆಚ್ಚಾಗಿರುವುದರಿಂದ ಇವರು ಆರೋಗ್ಯ ಮಾತ್ರವಲ್ಲದೆ ಇತರೆ ರೀತಿಯ ಸವಲತ್ತುಗಳಿಂದಲೂ ವಂಚಿತರಾಗಿರುತ್ತಾರೆಂದು ವಿಷಾದಿಸಿದರು.ಇದಕ್ಕೂ ಮುನ್ನ ನಡೆದ ಆರೋಗ್ಯ ತಪಾಸಣಾ ಶಿಬಿರವನ್ನು ಚಿತ್ರನಟಿ ಹಾಗೂ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷೆ ಜಯಮಾಲಾ ಉದ್ಘಾಟಿಸಿದರು. ಸಮಾರಂಭದಲ್ಲಿ  ಡಿ.ಸಿ.ಸಿ. ಮಾಜಿ ಸದಸ್ಯ. ಕೆ. ಲಕ್ಷ್ಮೀಪತಿ, ಪ್ರಜಾವಾಣಿ ಪತ್ರಿಕೆಯ ಸುದ್ದಿ ಸಂಪಾದಕ ಗಂಗಾಧರ ಮೊದಲಿಯಾರ್, ಪತ್ರಕರ್ತ ಕೆ.ವಿ. ಪ್ರಭಾಕರ್, ಸಹಾಯಕ ಔಷಧ ನಿಯಂತ್ರಕ ಸುರೇಶ್ ಕೆಂಪಯ್ಯ, ಇನ್ವ್ವಿಷನ್ ಮೆಡಿಸೈನ್ಸ್‌ನ ಮುಖೇಶ್ , ಬಿಜೆಪಿ  ಎಸ್.ಟಿ. ಮೋರ್ಚಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ.ವಿ. ನಾಗೇಂದ್ರ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯ ಡಾ. ಬಿ.ಕೆ. ರವಿ. ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ ಛಲವಾದಿ ನಾರಾಯಣಸ್ವಾಮಿ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.