ಆರೋಗ್ಯ ವಿ.ವಿ.ಗೆ ಸಚಿವ ಖಾದರ್‌ ಸಹೋದರನ ನೇಮಕ

7

ಆರೋಗ್ಯ ವಿ.ವಿ.ಗೆ ಸಚಿವ ಖಾದರ್‌ ಸಹೋದರನ ನೇಮಕ

Published:
Updated:

ಬೆಂಗಳೂರು: ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲ­ಯದ ಸಿಂಡಿಕೇಟ್‌ ಸದಸ್ಯರನ್ನಾಗಿ ಡಾ.ಯು.ಟಿ.ಇಫ್ತಿಕಾರ್‌ ಅವರನ್ನು ನೇಮಕ ಮಾಡಿ ರಾಜ್ಯಪಾಲರು ಆದೇಶ ಹೊರಡಿಸಿದ್ದಾರೆ.ಡಾ.ಪ್ರದೀಪ್‌ ಶೆಟ್ಟಿ ಅವರ ರಾಜೀ­ನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್‌ ಸಹೋದರ ಡಾ.ಯು.ಟಿ.ಇಫ್ತಿಕಾರ್‌ ಅವರನ್ನು ನೇಮಕ ಮಾಡಲಾಗಿದೆ.ವೃತ್ತಿಯಲ್ಲಿ ವೈದ್ಯರಾಗಿರುವ ಇಫ್ತಿಕಾರ್‌ ಅವರು ಮಂಗಳೂರಿನ ಎಂ.ವಿ.ಶೆಟ್ಟಿ ಕಾಲೇಜಿನಲ್ಲಿ ಪ್ರಾಧ್ಯಾ­ಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.­ಶ್ರೀಪ್ರಕಾಶ್‌ ಅವರು ಮಾಡಿದ್ದ ಶಿಫಾರಸು ಆಧರಿಸಿ ರಾಜ್ಯಪಾಲರು ನೇಮಕ ಮಾಡಿದ್ದಾರೆ ಎಂದು ರಾಜಭವನದ ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry