ಆರೋಗ್ಯ ವಿವಿ ಬ್ಯಾಸ್ಕೆಟ್‌ಬಾಲ್: ಫಾದರ್ ಮುಲ್ಲರ್ ಕಾಲೇಜಿಗೆ ಪ್ರಶಸ್ತಿ

7

ಆರೋಗ್ಯ ವಿವಿ ಬ್ಯಾಸ್ಕೆಟ್‌ಬಾಲ್: ಫಾದರ್ ಮುಲ್ಲರ್ ಕಾಲೇಜಿಗೆ ಪ್ರಶಸ್ತಿ

Published:
Updated:

ಮೈಸೂರು: ಪ್ರಬಲ ಸವಾಲು ಎದುರಾದರೂ ಸಮರ್ಥ ಹೋರಾಟ ನಡೆಸಿದ ಮಂಗಳೂರಿನ ಫಾದರ್ ಮುಲ್ಲರ್ ವೈದ್ಯಕೀಯ ಮತ್ತು ಸಂಶೋಧನಾ ಮಹಾವಿದ್ಯಾಲಯದ ಪುರುಷರ ತಂಡವು ಭಾನುವಾರ ಮುಕ್ತಾಯವಾದ ರಾಜೀವಗಾಂಧೀ ಆರೋಗ್ಯ ವಿಶ್ವವಿದ್ಯಾಲಯದ ಮೈಸೂರು ವಲಯ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್ ಗೆದ್ದುಕೊಂಡಿತು.ಜೆ.ಕೆ. ಮೈದಾನದಲ್ಲಿ ನಡೆದ ಫೈನಲ್‌ನಲ್ಲಿ ಫಾದರ್ ಮುಲ್ಲರ್ ಕಾಲೇಜು ತಂಡವು 48-41ರಿಂದ ಆತಿಥೇಯ ಮೈಸೂರು ವೈದ್ಯಕೀಯ ಕಾಲೇಜು (ಎಂಎಂಸಿ) ತಂಡದ ವಿರುದ್ಧ ಜಯಿಸಿತು.ಫಾದರ್ ಮುಲ್ಲರ್ ಕಾಲೇಜಿನ ರೋಷನ್ 24, ಎಂಎಂಸಿಯ ನಿಶ್ಚಲ್ 20 ಪಾಯಿಂಟ್ಸ್ ಗಳಿಸಿ ತಮ್ಮ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಫಾದರ್ ಮುಲ್ಲರ್ ಕಾಲೆಜು 33-14ರಿಂದ ಬೆಳ್ಳೂರಿನ ಬಿ.ಜಿ. ನಗರದ ಎಐಎಂಎಸ್ ವಿರುದ್ಧ ಜಯಿಸಿದರೆ, ಇನ್ನೊಂದು ನಾಲ್ಕರ ಘಟ್ಟದ ಪಂದ್ಯದಲ್ಲಿ ಎಂಎಂಸಿ 42-06ರಿಂದ ಆದಿಚುಂಚನಗಿರಿ ವೈದ್ಯಕೀಯ ಕಾಲೇಜು ವಿರುದ್ಧ ಜಯ ಪಡೆದು ಪ್ರಶಸ್ತಿ ಹಂತ ಪ್ರವೇಶಿಸಿತ್ತು.ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಎಂಎಂಸಿ ನಿರ್ದೇಶಕಿ ಡಾ. ಗೀತಾ ಅವಧಾನಿ ಪ್ರಶಸ್ತಿ ವಿತರಿಸಿದರು. ಡಾ. ಚಂದ್ರಶೇಖರ್ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry