`ಆರೋಗ್ಯ ವೃದ್ಧಿಗೆ ಕಲಾ ಮಾಧ್ಯಮ ಅಗತ್ಯ'

7

`ಆರೋಗ್ಯ ವೃದ್ಧಿಗೆ ಕಲಾ ಮಾಧ್ಯಮ ಅಗತ್ಯ'

Published:
Updated:

ಚಾಮರಾಜನಗರ: `ಹಾಡು, ನೃತ್ಯ ಮುಂತಾದ ಕಲಾ ಮಾಧ್ಯಮಗಳು ಇಲ್ಲದಿದ್ದರೆ ಮನುಷ್ಯನ ಆಯಸ್ಸು ಮತ್ತಷ್ಟು ಕ್ಷೀಣಿಸುತ್ತಿತ್ತು. ಸಾಮಾಜಿಕ ಆರೋಗ್ಯ ಕೂಡ ಹದಗೆಡುತ್ತಿತ್ತು' ಎಂದು ಸಾಹಿತಿ ಪ್ರೊ.ಮಲೆಯೂರು ಗುರುಸ್ವಾಮಿ ಅವರು  ಅಭಿಪ್ರಾಯಪಟ್ಟರು.ನಗರದ ಪೇಟೆಪ್ರೈಮರಿ ಶಾಲಾ ಆವರಣದಲ್ಲಿ ಈಚೆಗೆ ರಾಜ್ ಮೆಲೋಡಿಸ್‌ನಿಂದ ಡಾ.ರಾಜ್‌ಕುಮಾರ್ ಮತ್ತು ಡಾ.ವಿಷ್ಣುವರ್ಧನ್ ಸಂಸ್ಮರಣೆ ಅಂಗವಾಗಿ ನಡೆದ `ಮೆಲ್ಲುಸಿರೇ ಸವಿಗಾನ' ಚಿತ್ರ ಸಂಗೀತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಈಗ ನಗು ಎಲ್ಲರಲ್ಲೂ ಕ್ಷೀಣಿಸುತ್ತಿದೆ. ಸಹನೆ, ಸಂಬಂಧ ದೂರ ಸರಿಯುತ್ತಿವೆ. ಒತ್ತಡದ ಬದುಕು, ಆತಂಕದ ಕ್ಷಣಗಳು ಮನುಷ್ಯನನ್ನು ಆವರಿಸಿಕೊಳ್ಳುತ್ತಿವೆ. ಇದಕ್ಕೆ ನಮ್ಮ ದುರಾಸೆಯೇ ಕಾರಣ ಎಂದರು.ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಾ.ರಾಜು ಮಾತನಾಡಿ, ರಾಜ್ ಮೆಲೋಡಿಸ್ ಕಲಾವಿದರು ಉತ್ತಮವಾಗಿ ಚಿತ್ರ ಸಂಗೀತ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಸಂಘಟಿಸುತ್ತಿದ್ದಾರೆ. ಸಾಹಿತ್ಯ- ಸಂಸ್ಕೃತಿ ಪರವಾದ ಕಾರ್ಯಕ್ರಮಗಳು ಹೆಚ್ಚಾದಷ್ಟು ಮಾನಸಿಕ ಆರೋಗ್ಯ ವೃದ್ಧಿಸುತ್ತದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಹಿರಿಯ ಚಿತ್ರನಟ ಹೊನ್ನವಳ್ಳಿ ಕೃಷ್ಣ, ನಟಿ ರೂಪಿಕಾ, ಗಾಯಕಿ ದಿವ್ಯಾ ಮೈಸೂರು ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಶಾಂತಿಪ್ರಸಾದ್, ರೋಟರಿ ಅಧ್ಯಕ್ಷ ಕಮಲ್‌ರಾಜ್, ಎಂ.ಎಸ್. ಮಾದಯ್ಯ, ಆರ್. ಮಹದೇವ, ಶಿವಕುಮಾರ್, ಕೇಶವಮೂರ್ತಿ, ವೆಂಕಟನಾಗಪ್ಪ ಶೆಟ್ಟಿ, ಪ್ರವೀಣ್, ಮಂಜು ಕೋಡಿ ಉಗನೆ, ಎ.ಎಂ. ನಾಗಮಲ್ಲಪ್ಪ ಹಾಜರಿದ್ದರು. ಕಲಾವಿದರಾದ ಬಿ. ಬಸವರಾಜು, ಲತಾ ಪುಟ್ಟಸ್ವಾಮಿ, ಮಂಜುನಾಥ್, ಮಹಾಲಿಂಗ ಗಿರ್ಗಿ, ದಿವ್ಯಾ ಮೈಸೂರು, ರಾಜ್ ಮೆಲೋಡಿಸ್ ವ್ಯವಸ್ಥಾಪಕ ಜಿ. ರಾಜಪ್ಪ ಅವರಿಂದ ಚಿತ್ರ ಸಂಗೀತ ಕಾರ್ಯಕ್ರಮ ನಡೆಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry