ಆರೋಗ್ಯ ಶಿಬಿರಗಳು ಬಡವರಿಗೆ ಉಪಯುಕ್ತ

7

ಆರೋಗ್ಯ ಶಿಬಿರಗಳು ಬಡವರಿಗೆ ಉಪಯುಕ್ತ

Published:
Updated:

ದೊಡ್ಡಬಳ್ಳಾಪುರ: `ಜನಸಾಮಾನ್ಯರಿಗೆ  ಆರೋಗ್ಯ ದುಬಾರಿಯಾಗುತ್ತಿರುವ ಇಂದಿನ ದಿನಗಳಲ್ಲಿ ಆರೋಗ್ಯ ತಪಾಸಣೆ ಶಿಬಿರಗಳು ಹೆಚ್ಚು ಉಪಯುಕ್ತ~ ಎಂದು ರಾಜ್ಯ ರೇಷ್ಮೆ ಮಾರಾಟ ಮಂಡಲಿ ಅಧ್ಯಕ್ಷ ಕೆ.ಎಂ.ಹನುಮಂತರಾಯಪ್ಪ ಹೇಳಿದರು.ನಗರದ ಗಾಯತ್ರಿ ಪೀಠ ಮಿತ್ರ ಬಳಗ ಟ್ರಸ್ಟ್ ಹಾಗೂ ಶಂಕರ ನೇತ್ರಾಲಯದ ಸಹಯೋಗದೊಂದಿಗೆ ನಗರದ ಸಿನಿಮಾ ರಸ್ತೆಯಲ್ಲಿರುವ ಶ್ರೀಪಾಲ್ ಕಾಂಪ್ಲೆಕ್ಸ್‌ನಲ್ಲಿ ನಡೆದ ಉಚಿತ ನೇತ್ರ ತಪಾಸಣಾ ಶಿಬಿರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.`ಸಂಘಟನೆಗಳು ಸಾಮಾನ್ಯ ಕಾರ್ಯಕ್ರಮಗಳಿಗೆ ಮಾತ್ರ ಸೀಮಿತವಾಗದೆ ಸಾಮಾಜಿಕ ಕಳಕಳಿಯೊಂದಿಗೆ, ಜನ ಸಾಮಾನ್ಯರಿಗೆ ಉಪಯುಕ್ತವಾಗುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದರು.ಜಿಲ್ಲಾ ಬಿಜೆಪಿ ಸಂಘಟನಾ ಕಾರ್ಯದರ್ಶಿ ಕಾಂತರಾಜ್ ಮಾತನಾಡಿ, `ಸದಾ ಕಾಲ ಸ್ಮರಣೀಯವಾಗಿ ನೀಡಬಹುದಾದದ್ದು ವಿದ್ಯೆ ಮತ್ತು ಆರೋಗ್ಯ ಮಾತ್ರ. ಆದರೆ ಇಂಥ ಒಳ್ಳೆಯ ಕಾರ್ಯಗಳನ್ನು ಕೈಗೊಳ್ಳುವ ಆರಂಭದ ಹೆಜ್ಜೆಗಳಲ್ಲಿ ನಾನಾ ತೊಡಕುಗಳು ಎದುರಾಗುವುದು ಸಹಜ~ ಎಂದರು.ಕಾರ್ಯಕ್ರಮದಲ್ಲಿ ನಗರ ಬಿಜೆಪಿ ಕಾರ್ಯದರ್ಶಿ ಡಿ.ಎಲ್.ಸತ್ಯನಾರಾಯಣ್,ಬಿಜೆಪಿ ಮುಖಂಡ ನಾಗೇಶ್, ಶಿಬಿರದ ಪ್ರಾಯೋಜಕ ಎಚ್.ಎಸ್.ಶಂಕರಪ್ಪ, ಟ್ರಸ್ಟ್ ಅಧ್ಯಕ್ಷ ಎಂ.ಆರ್.ಶ್ರೀನಿವಾಸ್, ಕಾರ್ಯದರ್ಶಿ ರಮೇಶ್, ಯೋಗ ನಟರಾಜ್, ಶ್ರೀಗಾಯತ್ರಿ ಪೀಠ ಯುವ ಬಳಗದ ಅಧ್ಯಕ್ಷ ಶಂಕರ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry