ಆರೋಗ್ಯ ಶಿಬಿರ

7

ಆರೋಗ್ಯ ಶಿಬಿರ

Published:
Updated:

ವಿಕ್ರಂ ಆಸ್ಪತ್ರೆ

ಮಿಲ್ಲರ್ಸ್ ರಸ್ತೆಯ ವಿಕ್ರಂ ಆಸ್ಪತ್ರೆಯಲ್ಲಿ  ಶನಿವಾರ ಬೆಳಿಗ್ಗೆ 10 ರಿಂದ ಸಂಜೆ 5ರ ವರೆಗೆ ವೃದ್ಧಾಪ್ಯ ಸಂಬಂಧಿ ರೋಗಗಳು, ಪ್ರಾಸ್ಟೇಟ್ ಮತ್ತು 50 ವರ್ಷ ಮೇಲ್ಪಟ್ಟ ಪುರುಷರಿಗಾಗಿ ಮೂತ್ರಕೋಶ ಸಂಬಂಧಿ ತೊಂದರೆಗಳ ಉಚಿತ ತಪಾಸಣೆ ಹಮ್ಮಿಕೊಳ್ಳಲಾಗಿದೆ. ತಜ್ಞ ವೈದ್ಯರಾದ ಡಾ. ಕುದೂರು ಎನ್. ಮಂಜುನಾಥ್, ಡಾ. ರಮೇಶ್, ಡಾ.ಪ್ರಮೋದ್ ಸತ್ಯ ಮತ್ತಿತರರು ಆರೋಗ್ಯ ತಪಾಸಣೆ ಮಾಡಲಿದ್ದಾರೆ.  ಇದಲ್ಲದೇ, ಮಧ್ಯಾಹ್ನ 3 ರಿಂದ 3.30 ರ ತನಕ ಪಥ್ಯಾಹಾರ ಕುರಿತು ತಜ್ಞರಿಂದ ಉಪನ್ಯಾಸ ಕೂಡಾ ಏರ್ಪಡಿಸಲಾಗಿದೆ.

ನೋಂದಣಿಗೆ: 98450 66883, 99000 14825, 4500 4500.ನೋವಾ ಸೆಂಟರ್

ನೋವಾ ಮೆಡಿಕಲ್ ಸೆಂಟರ್, ಕೋರಮಂಗಲದ ಕೇಂದ್ರದಲ್ಲಿ ಭಾನುವಾರ ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 1.30ರವರೆಗೆ ಉಚಿತ ಆರೋಗ್ಯ ಶಿಬಿರ ಏರ್ಪಡಿಸಿದೆ. ಮಂಡಿ, ಭುಜ, ಪಾದದ ಕೀಲು, ಕ್ರೀಡೆಗಳಿಂದಾಗುವ ಗಾಯಗಳಿಗೆ ಸಂಬಂಧಿಸಿದಂತೆ ಉಚಿತ ತಪಾಸಣೆ, ಸಲಹೆ ನೀಡಲಾಗುವುದು.

ಶಿಬಿರದಲ್ಲಿ ಮೂಳೆಯ ಸಾಂದ್ರತೆಯನ್ನು ಸಹ ಅಳೆಯಲಾಗುವುದು. ಪಾಲ್ಗೊಳ್ಳುವವರು ಮೊದಲೇ ಹೆಸರು ನೋಂದಾಯಿಸಿಕೊಳ್ಳಬೇಕು. ದೂ: 4348 5555.

ಸ್ಥಳ: ನೋವಾ ಮೆಡಿಕಲ್ ಸೆಂಟರ್ಸ್‌, ಒಪಸ್, 143, 1ನೇ ಕ್ರಾಸ್, 5ನೇ ಬ್ಲಾಕ್, ಕೋರಮಂಗಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry