ಆರೋಗ್ಯ ಶಿಬಿರ

ಶನಿವಾರ, ಜೂಲೈ 20, 2019
23 °C

ಆರೋಗ್ಯ ಶಿಬಿರ

Published:
Updated:

ಸ್ತನ ಮತ್ತು ಪ್ಲಾಸ್ಟಿಕ್ ಸರ್ಜರಿ

ಕೋರಮಂಗಲದ ನೋವಾ ಮೆಡಿಕಲ್ ಸೆಂಟರ್ಸ್‌ ಭಾನುವಾರ ಮತ್ತು ಸೋಮವಾರ ಸ್ತನ ತಪಾಸಣೆ ಮತ್ತು ಪ್ಲಾಸಿಕ್ಟ್ ಚಿಕಿತ್ಸಾ ಸಲಹಾ ಶಿಬಿರ ಹಮ್ಮಿಕೊಂಡಿದೆ. ಸ್ತನದಲ್ಲಿ ನೋವು, ಊತ, ಗಂಟು ಕಾಣಿಸಿಕೊಳ್ಳುವುದು, ಸ್ತನ ವಿರೂಪಗೊಳ್ಳುವುದು, ಸ್ತನದ ತೊಟ್ಟು ಸೋರುವಿಕೆ ಇತ್ಯಾದಿ ಸಮಸ್ಯೆಗಳಿದ್ದಲ್ಲಿ ಇಲ್ಲಿ ತಜ್ಞರಿಂದ ಸಲಹೆ ಪಡೆಯಬಹುದು. ಮಹಿಳೆಯರ ಸ್ತನ ಸೌಂದರ್ಯ ಹೆಚ್ಚಿಸಲು, ಪುರುಷರ ಸ್ತನ ಗಾತ್ರ ತಗ್ಗಿಸಲು ಕಾಸ್ಮೆಟಿಕ್ ಶಸ್ತ್ರಚಿಕಿತ್ಸೆಯ ಸೌಲಭ್ಯವೂ ಇದೆ. ಆಸಕ್ತರು 149 ರೂಪಾಯಿ ಪಾವತಿಸಿ ಹೆಸರು ನೋಂದಾಯಿಸಿಕೊಳ್ಳಬಹುದು. ಸ್ಥಳ: ನೋವಾ ಮೆಡಿಕಲ್ ಸೆಂಟರ್ಸ್‌, ಓಪಸ್, 143, 1ನೇ ಕ್ರಾಸ್, 5ನೇ ಬ್ಲಾಕ್, ಕೋರಮಂಗಲ. ಬೆಳಿಗ್ಗೆ 9ರಿಂದ ಮಧ್ಯಾಹ್ನ 2. ಮಾಹಿತಿಗೆ: 4348 5555ಮಳೆಗಾಲದ ಕಾಯಿಲೆಗೆ ಹೋಮಿಯೋಪತಿ


ನಗರದಲ್ಲೂ ಮುಂಗಾರು ಮೋಡಗಳ ಕಣ್ಣಾಮುಚ್ಚಾಲೆ ಪ್ರಾರಂಭವಾಗಿದೆ. ಬೇಸಿಗೆಯ ಬಿಸಿಲ ತಾಪದಿಂದ ಮುಕ್ತಿ ಕಂಡುಕೊಳ್ಳಲು ಎಲ್ಲರೂ ಮಳೆಯನ್ನು ನಿರೀಕ್ಷಿಸುವುದು ಸಹಜ. ಆದರೆ ಮಳೆಗಾಲ ಮಾತ್ರ ಚಳಿ ಮತ್ತು ಬೇಸಿಗೆ ಕಾಲಕ್ಕಿಂತ ಹೆಚ್ಚು ರೋಗ ಬಾಧಿಸುವ ಋತುಮಾನ. ಅಲ್ಲದೆ, ಹಲವು ರೋಗ ರುಜಿನಗಳನ್ನು ಹೊತ್ತುಕೊಂಡು ಬರುವ ಕಾಲಮಾನ.ಆಸ್ತಮಾ, ಕಫ, ಕೆಮ್ಮು, ಅಲರ್ಜಿ, ಬ್ರಾಂಕ್ರೈಟಿಸ್ ಸೇರಿದಂತೆ ಶ್ವಾಸಕೋಶ ಸಂಬಂಧಿ ಕಾಯಿಲೆಗಳು ಮಳೆಗಾಲದಲ್ಲಿ ಹೆಚ್ಚಾಗಿ ಕಾಡುವುದಲ್ಲದೆ ಉಲ್ಬಣಿಸುತ್ತವೆ ಕೂಡಾ. ಈ ಹಿನ್ನೆಲೆಯಲ್ಲಿ ನಂದಿ ಹೋಮಿಯೋಪತಿ ಚಿಕಿತ್ಸಾಲಯ ಭಾನುವಾರ ಉಚಿತ ಆರೋಗ್ಯ ಚಿಕಿತ್ಸಾ ಶಿಬಿರ ಆಯೋಜಿಸಿದೆ. ಇಲ್ಲಿ ತಜ್ಞ ವೈದ್ಯರು ಲಭ್ಯರಿರುತ್ತಾರೆ.ಸ್ಥಳ: ನಂದಿ ಹೋಮಿಯೋಪತಿ, ಗಾಂಧಿ ಬಜಾರ್. ಬೆಳಿಗ್ಗೆ 9 ರಿಂದ ಸಂಜೆ 5. ಮಾಹಿತಿಗೆ: ಡಾ. ಬಿ ಎಸ್ ಹೂಗಾರ್ 2660 3328, 98869 20889.ರಾಜನ್ ಸೆಂಟರ್ ಕಿವಿ ತಪಾಸಣೆ

ರಾಜನ್ ಸ್ಪೀಚ್ ಅಂಡ್ ಹಿಯರಿಂಗ್ ಸೆಂಟರ್ ಅಪ್ಪಂದಿರ ದಿನದ ಅಂಗವಾಗಿ ಸೋಮವಾರ ದಿಂದ ಗುರುವಾರದವರೆಗೆ ಉಚಿತ ಶ್ರವಣ ತಪಾಸಣೆ ಹಮ್ಮಿಕೊಂಡಿದೆ.

ಇಲ್ಲಿ ಉಚಿತ ಕಿವಿ ತಪಾಸಣೆ, ಸಮಾಲೋಚನೆ ನಡೆಸಲಾಗುವುದು. ಈ ಅವಧಿಯಲ್ಲಿ ಅವಶ್ಯಕತೆ ಇರುವವರಿಗೆ ಡಿಜಿಟಲ್ ಶ್ರವಣ ಉಪಕರಣಗಳನ್ನು ರಿಯಾಯ್ತಿ ದರದಲ್ಲಿ ನೀಡಲಾಗುವುದು.ಸ್ಥಳ: ಕೋರಮಂಗಲ, ರೆಸಿಡೆನ್ಸಿ ರಸ್ತೆ, ಮಲ್ಲೇಶ್ವರಂ ಹಾಗೂ ಇಂದಿರಾನಗರದಲ್ಲಿರುವ ಕ್ಲಿನಿಕ್‌ಗಳಲ್ಲಿ ಈ ಸೌಲಭ್ಯವಿದೆ. ಮಾಹಿತಿಗೆ: 4151 0404.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry