ಶನಿವಾರ, ನವೆಂಬರ್ 23, 2019
17 °C

`ಆರೋ'ದಿಂದ ಬೇಸಿಗೆ ಸಂಗ್ರಹ

Published:
Updated:
`ಆರೋ'ದಿಂದ ಬೇಸಿಗೆ ಸಂಗ್ರಹ

ಪುರುಷ ಮತ್ತು ಮಹಿಳೆಯರ ವಸ್ತ್ರಗಳ ಜನಪ್ರಿಯ ಬ್ರ್ಯಾಂಡ್ `ಆರೋ' ತನ್ನ ಬೇಸಿಗೆ ಸಂಗ್ರಹವನ್ನು ಬಿಡುಗಡೆ ಮಾಡಿದೆ. ಈ ಬೇಸಿಗೆಯಲ್ಲಿ ಪುರುಷರಿಗಾಗಿ `ಆರೋ' ನೀಲಿ, ತಿಳಿ ಹಸಿರು ಮತ್ತು ಗುಲಾಬಿ ಬಣ್ಣದ ಅಂಗಿಗಳನ್ನು ಮಾರುಕಟ್ಟೆಗೆ ತಂದಿದೆ. ಈ ಅಂಗಿಗಳು ಬೆವರನ್ನು ಹೀರಿಕೊಂಡು ಬೇಸಿಗೆಯಲ್ಲಿಯೂ ಹಿತಾನುಭವ ನೀಡುತ್ತವೆಯಂತೆ. ಇವುಗಳ ಜತೆಗೆ  ಟೇಪರ್ಡ್‌ ಫಿಟ್‌ನ ಟ್ರೌಷರ್, ಲೈನೆನ್ ಜಾಕೆಟ್‌ಗಳ ದೊಡ್ಡ ಸಂಗ್ರಹವೂ ಇಲ್ಲಿದೆ.  ನಾವಿಕರಿಂದ ಸ್ಫೂರ್ತಿ ಪಡೆದ ಪ್ರಿಂಟೆಡ್ ಶರ್ಟ್‌ಗಳು ಮತ್ತು ಫ್ಲಾಗ್ ಕಲರ್ ಟಿ-ಶರ್ಟ್ ಹಾಗೂ ಅಂಗಿಗಳೂ ಇಲ್ಲಿವೆ. ಇವುಗಳ ಜೊತೆಗೆ ಸ್ಮಾರ್ಟ್ ಕ್ಯಾಶುಯಲ್, ಹತ್ತಿಯ ಉಡುಪುಗಳು, ಟಾಪ್ಸ್, ಪ್ಯಾಂಟ್‌ಗಳು, ಲೈನೆನ್ ಜಾಕೆಟ್, ಜಂಪ್‌ಸೂಟ್‌ಗಳು ಲಭ್ಯ. ಆರೋ ಹೊರತಂದಿರುವ ಬೇಸಿಗೆ ಸಂಗ್ರಹ ಎಲ್ಲ ಆರೋ ಮಳಿಗೆಗಳಲ್ಲಿ ಸಿಗುತ್ತವೆ.

ಪ್ರತಿಕ್ರಿಯಿಸಿ (+)