ಆರೋಪಪಟ್ಟಿ ವಿಳಂಬ

ಗುರುವಾರ , ಜೂಲೈ 18, 2019
22 °C

ಆರೋಪಪಟ್ಟಿ ವಿಳಂಬ

Published:
Updated:

ನವದೆಹಲಿ (ಪಿಟಿಐ): ಲಂಚ ಪ್ರಕರಣ ಸಂಬಂಧ ರೈಲ್ವೆ ಮಂಡಳಿ ಸದಸ್ಯರ ವಿರುದ್ಧದ ವಿಚಾರಣೆಗೆ ರೈಲ್ವೆ ಸಚಿವಾಲಯ ಅನುಮತಿ ನೀಡಬೇಕಿರುವ ಹಿನ್ನೆಲೆಯಲ್ಲಿ ಜುಲೈ 3ರ ನಿಗದಿತ ಅವಧಿಯೊಳಗೆ ಸಿಬಿಐ ಆರೋಪ ಪಟ್ಟಿ ಸಲ್ಲಿಸುವುದು ಅಸಾಧ್ಯ ಎಂದು ಮೂಲಗಳು ತಿಳಿಸಿವೆ.ಇಲಾಖೆಯಲ್ಲಿ ನಡೆದ ಲಂಚ ಪ್ರಕರಣದಲ್ಲಿ ಮಾಜಿ ರೈಲ್ವೆ ಸಚಿವ ಪವನ್ ಕುಮಾರ್ ಬನ್ಸಲ್ ಅವರ ಅಳಿಯ ವಿಜಯ ಸಿಂಗ್ಲ ಮತ್ತು ಇತರರನ್ನು ಸಿಬಿಐ ಬಂಧಿಸಿತ್ತು. ಬಳಿಕ ಬನ್ಸಲ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry