ಸೋಮವಾರ, ಜೂನ್ 21, 2021
29 °C
ಶಕ್ತಿಮಿಲ್ ಸಾಮೂಹಿಕ ಅತ್ಯಾಚಾರ ಪ್ರಕರಣ

ಆರೋಪಿಗಳ ಹೇಳಿಕೆ ದಾಖಲು ಪೂರ್ಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ (ಪಿಟಿಐ): ಇಲ್ಲಿನ ಶಕ್ತಿ ಮಿಲ್ ಆವರಣದಲ್ಲಿ ಪತ್ರಿಕಾಛಾಯಾಗ್ರಾಹಕಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ಆರೋಪಿಗಳ ಹೇಳಿಕೆಗಳನ್ನು ಮುಂಬೈ ಸೆಷನ್ಸ್ ನ್ಯಾಯಾಲಯ ಗುರುವಾರ ದಾಖಲಿಸಿಕೊಂಡಿತು.ಅಪರಾಧ ದಂಡಸಂಹಿತೆ (ಸಿಆರ್‌ಪಿಸಿ) 313ರ ಪ್ರಕಾರ ನಾಲ್ವರು ಆರೋಪಿಗಳ ಹೇಳಿಕೆ­ಗಳ  ದಾಖಲು  ಪೂರ್ಣ­ಗೊಳಿಸ­­ಲಾಗಿದೆ ಎಂದು ಸರ್ಕಾರದ ವಿಶೇಷ ಅಭಿಯೋ­ಜಕ ಉಜ್ವಲ್‌ ನಿಕ್ಕಂ ತಿಳಿಸಿದ್ದಾರೆ.ಆರೋಪಿಗಳಿಗೆ ನ್ಯಾಯಾಲಯ 970 ಪ್ರಶ್ನೆಗಳನ್ನು ಕೇಳಿತು ಎಂದು ಆರೋಪಿ­ಗಳ ಪರ ವಕೀಲ ಪ್ರಕಾಶ್ ಸಾಲ್ಸಿಂಗಿ­ಕರ್‌ ಅವರು ಮಾಹಿತಿ ನೀಡಿದ್ದಾರೆ.

ಸಿಆರ್‌ಪಿಸಿ 313ರ ಪ್ರಕಾರ, ಆರೋಪಿ­ಗಳಿಗೆ ತಮ್ಮ ವಿರುದ್ಧ ಮಾಡಿರುವ ಆರೋಪದ ಕುರಿತು ವಿವರಿಸಲು ಅವಕಾಶವಿದೆ. ಕಳೆದ ವರ್ಷ ಆಗಸ್ಟ್‌ 22ರಂದು ಸಹೋದ್ಯೋಗಿ­ಯೊಂದಿಗೆ ವರದಿಗಾಗಿ ಶಕ್ತಿ ಮಿಲ್‌ ಆವರಣಕ್ಕೆ ತೆರಳಿದ್ದ 22 ವರ್ಷದ ಪತ್ರಿಕಾಛಾಯಾಗ್ರಾಹಕಿ ಮೇಲೆ ಐವರು ಸಾಮೂಹಿಕ ಅತ್ಯಾ­ಚಾರ ನಡೆಸಿದ್ದರು. ಆರೋಪಿ­ಗಳಲ್ಲಿ ಒಬ್ಬ ಬಾಲಾರೋಪಿಯೂ ಸೇರಿದ್ದಾನೆ.ಅತ್ಯಾಚಾರ, ಅಸಹಜ ಲೈಂಗಿಕ ಕ್ರಿಯೆ ಮತ್ತು ಇತರ ಆರೋಪಗಳಡಿ ಆರೋಪಿ­ಗಳ ವಿರುದ್ಧ  ಸೆಪ್ಟೆಂಬರ್ 19­ರಂದು ಮುಂಬೈ ಅಪರಾಧ ವಿಭಾಗದ ಪೊಲೀಸರು 600 ಪುಟಗಳಷ್ಟು ಪ್ರಕ­ರಣ ದಾಖಲಿಸಿದ್ದರು.ಐವರು ಆರೋಪಿಗಳ ಪೈಕಿ ಮೂವರು ಆರೋಪಿಗಳು ಈ ಹಿಂದೆ 18 ವರ್ಷದ ಟೆಲಿಫೋನ್‌ ಆಪರೇಟರ್‌ ಮೇಲೆ ಅತ್ಯಾಚಾರ ನಡೆಸಿದ್ದರು ಎಂದು ದೂರು ದಾಖಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.