ಆರೋಪಿಯ ಮಗನನ್ನೇ ವರಿಸಲು ಪಂಚಾಯಿತಿ ತೀರ್ಪು

7
ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ

ಆರೋಪಿಯ ಮಗನನ್ನೇ ವರಿಸಲು ಪಂಚಾಯಿತಿ ತೀರ್ಪು

Published:
Updated:

ಜೈಪುರ: ಆರು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪಿಯ ಮಗನಿಗೇ ಆಕೆಯನ್ನು ಮದುವೆ ಮಾಡಿ ಎಂದು ಇಲ್ಲಿನ ಜಾತಿ ಪಂಚಾಯಿತಿ ಗುರುವಾರ ವಿಚಿತ್ರ ತೀರ್ಪು ನೀಡಿದೆ. ಜೈಪುರದ ಕೋಟಾ ಜಿಲ್ಲೆಯ ಕೇಶವಪುರದಲ್ಲಿ ಈ ಘಟನೆ ನಡೆದಿದೆ.ಕೈಲಾಶ್ ಎಂಬಾತ  ಪಕ್ಕದ ಮನೆಯ ಆರು ವರ್ಷದ ಬಾಲಕಿಯನ್ನು ಕೆಲವು ದಿನಗಳ ಹಿಂದೆ ಕೊಠಡಿಯಲ್ಲಿ ಕೂಡಿ ಹಾಕಿ ಅತ್ಯಾಚಾರ ಎಸಗಿದ್ದ. ದೋಬಿ ಕೆಲಸ ಮಾಡುತ್ತಿದ್ದ ಎರಡೂ ಕುಟುಂಬದವರೂ ಒಂದೇ ಜಾತಿಗೆ ಸೇರಿದ್ದು, ಬಾಲಕಿ ಬಟ್ಟೆ ಕೊಡಲು ಹೋದಾಗ ಆತ ಅತ್ಯಾಚಾರ ಎಸಗಿದ್ದಾನೆ.ಬಾಲಕಿ ಕುಟುಂಬದವರು ಜಾತಿ ಪಂಚಾಯಿತಿಗೆ ದೂರು ನೀಡಿದ್ದರು. ಆರೋಪಿಯ 8 ವರ್ಷದ ಮಗನ ಜತೆ ಬಾಲಕಿಯ ಮದುವೆ ಮಾಡುವಂತೆ  ಜಾತಿ ಪಂಚಾಯಿತಿ ತೀರ್ಪು ಹೊರಡಿಸಿದೆ. ಇದನ್ನು ಆರೋಪಿ ಹಾಗೂ ಬಾಲಕಿಯ ಪೋಷಕರು ವಿರೋಧಿಸಿದ್ದರು.

ಪಂಚಾಯಿತಿ ತೀರ್ಮಾನದ ನಂತರ ಎರಡೂ ಕುಟುಂಬದ ಮಧ್ಯೆ ರಾಜಿ ಸಂಧಾನ ನಡೆಯುತ್ತಿದ್ದಾಗಲೇ ಬಾಲಕಿ ಮೇಲೆ ಕೈಲಾಶ್ ಮತ್ತೊಮ್ಮೆ ಅತ್ಯಾಚಾರ ಎಸಗಿದ್ದಾನೆ.ನಂತರ ಕೆಲವು ಸಾಮಾಜಿಕ ಕಾರ್ಯಕರ್ತರು ಹಾಗೂ ಬಾಲಕಿಯ ಕುಟುಂಬದವರು ಮಹಾವೀರ ನಗರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆತನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry