ಆರೋಪಿ ಬಂಧನಕ್ಕೆ ಆಗ್ರಹಿಸಿ ವಿವಿಧೆಡೆ ಧರಣಿ

7

ಆರೋಪಿ ಬಂಧನಕ್ಕೆ ಆಗ್ರಹಿಸಿ ವಿವಿಧೆಡೆ ಧರಣಿ

Published:
Updated:

ಮಾಲೂರು: ಪತ್ನಿ ಹಾಗೂ ಮಗಳನ್ನು ಕೊಂದ ಆರೋಪಿಯನ್ನು ಬಂಧಿಸುವಂತೆ ಒತ್ತಾಯಿಸಿ ಭಾರತ ಕಮ್ಯೂನಿಸ್ಟ್ ಪಕ್ಷ (ಸಿಪಿಎಂ) ಕಾರ್ಯಕರ್ತರು ಗುರುವಾರ ಪಟ್ಟಣದ ತಾಲ್ಲೂಕು ಕಚೇರಿ ಎದುರು ಧರಣಿ ನಡೆಸಿದರು.ಶ್ರೀನಿವಾಸಪುರ ತಾಲ್ಲೂಕಿನ ಶಾಕತ್ತೂರು ಗ್ರಾಮದ ಎಸ್.ಕೆ.ಸಂತೋಷ್‌ಕುಮಾರ್ ವರದಕ್ಷಿಣೆ ಕಿರುಕುಳ ನೀಡಿ. ಜು. 10ರಂದು ಪತ್ನಿ ವೀಣಾ ಮತ್ತು ಮಗಳು ದೀಪ್ತಿಯನ್ನು ಹಾಡಹಗಲೇ ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದು, ಆರೋಪಿಯನ್ನು ಬಂಧಿಸಲು  ಪೊಲೀಸ್‌ರು ವಿಫಲವಾಗಿದ್ದಾರೆ ಎಂದು ಕಾರ್ಯದರ್ಶಿ ಬಿ.ವಿ.ಸಂಪಂಗಿ ಆರೋಪಿಸಿದರು.ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಅನಿರ್ಧಿಷ್ಟಾವಧಿ ಧರಣಿ ನಡೆಸುತ್ತಿದ್ದರೂ, ಆರೋಪಿಯನ್ನು  ಇದುವರೆಗೂ ಬಂಧಿಸಿಲ್ಲ ಎಂದು ಟೀಕಿಸಿದರು.ಸಿಪಿಎಂ ಮುಖಂಡರಾದ ಲೋಕೇಶ್ವರಿ, ಲಕ್ಷ್ಮಮ್ಮ, ಎ.ಚೌಡಮ್ಮ, ಗೌರಮ್ಮ, ಶ್ರೀನಿವಾಸ್, ಪಶುಪತಿ, ಪಾರ್ವತಮ್ಮ, ಶಂಕರ್, ಜನಾರ್ಧನ್, ಮುನಿಸ್ವಾಮಿಗೌಡ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry