ಆರೋಪ ಅಲ್ಲಗಳೆದ ಸ್ವತಂತ್ರ ಕುಮಾರ್‌

7

ಆರೋಪ ಅಲ್ಲಗಳೆದ ಸ್ವತಂತ್ರ ಕುಮಾರ್‌

Published:
Updated:

ನವದೆಹಲಿ (ಪಿಟಿಐ): ಕಾನೂನು ತರಬೇತಿ ವಿದ್ಯಾರ್ಥಿನಿ ತಮ್ಮ ಮೇಲೆ ಹೊರಿಸಿರುವ ಲೈಂಗಿಕ ಕಿರುಕುಳದ ಆರೋಪ­ವನ್ನು ಸುಪ್ರೀಂ­ಕೋರ್ಟ್‌ ನಿವೃತ್ತ ಮುಖ್ಯನ್ಯಾಯಮೂರ್ತಿ ಸ್ವತಂತ್ರ ಕುಮಾರ್‌ ಅಲ್ಲಗಳೆದಿದ್ದಾರೆ.ಕುಮಾರ್‌, ಸದ್ಯ ಸುಪ್ರೀಂಕೋರ್ಟ್‌ನ ಹಸಿರು ನ್ಯಾಯ­ಮಂಡಳಿ ಅಧ್ಯಕ್ಷರಾಗಿದ್ದಾರೆ. ‘ಈ ಆರೋಪದಲ್ಲಿ ಹುರುಳಿಲ್ಲ. ಇದರಲ್ಲಿ ಏನೋ ಸಂಚಿದೆ’ ಎಂದು ಅವರು ಶುಕ್ರವಾರ ಮಾಧ್ಯಮಗಳಿಗೆ ಪ್ರತಿಕ್ರಿಯಿ­ಸಿ­ದ್ದರು. ಶನಿವಾರ ಕೂಡ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.ಈ ನಡುವೆ, ದೂರು ನೀಡಿರುವ ವಿದ್ಯಾರ್ಥಿನಿಗೆ ಬೆಂಬಲದ ಮಹಾ­ಪೂರವೇ ಹರಿದುಬಂದಿದೆ. ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಇಂದಿರಾ ಜೈಸಿಂಗ್‌, ಪ್ರಮುಖ ವಕೀಲರಾದ ಕಾಮಿನಿ ಜೈಸ್ವಾಲ್‌, ಹರೀಶ್‌ ಸಾಳ್ವೆ, ವೃಂದಾ ಗ್ರೋವರ್‌, ಮಹಿಳೆಯರ ಹಕ್ಕುಗಳ ಹೋರಾ­­ಟ­ಗಾರ್ತಿ ಕವಿತಾ ಕೃಷ್ಣನ್‌ ಮತ್ತಿತರರು ವಿದ್ಯಾರ್ಥಿನಿಯ ಪರ ನಿಂತಿದ್ದಾರೆ.ಗಂಭೀರ ಪ್ರಕರಣ: ‘ಸುಪ್ರೀಂಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ವಿರುದ್ಧ ಮಾಡಿರುವ ಲೈಂಗಿಕ ಕಿರುಕುಳ ಆರೋಪ ಗಂಭೀರವಾದುದು’ ಎಂದು ಪರಿಸರ ಹಾಗೂ ಪೆಟ್ರೋಲಿಯಂ ಖಾತೆ ಸಚಿವ ಎಂ.ವೀರಪ್ಪ ಮೊಯಿಲಿ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry