ಮಂಗಳವಾರ, ಮೇ 24, 2022
23 °C

ಆರೋಪ ಮುಕ್ತನಾಗುವೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಾಹೋರ್ (ಐಎಎನ್‌ಎಸ್): `ಸ್ಪಾಟ್ ಫಿಕ್ಸಿಂಗ್~ ಪ್ರಕರಣದಲ್ಲಿ ಏಳು ತಿಂಗಳು ಇಂಗ್ಲೆಂಡ್‌ನಲ್ಲಿ ಜೈಲುವಾಸ ಅನುಭವಿಸಿ ಶುಕ್ರವಾರ ಸ್ವದೇಶಕ್ಕೆ ಹಿಂದಿರುಗಿದ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಸಲ್ಮಾನ್ ಬಟ್ `ಆರೋಪ ಮುಕ್ತನಾಗುವೆ~ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಮೂವತ್ತು ತಿಂಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದ ಸಲ್ಮಾನ್ ಅವರು ಬೇಗ ಬಿಡುಗಡೆಗೊಂಡಿದ್ದಾರೆ. ಇಂಗ್ಲೆಂಡ್ ವಿದೇಶಿ ಕೈದಿಗಳ ವಿಶೇಷ ನಿಯಮದ ಅಡಿಯಲ್ಲಿ ಬೇಗ ಬಿಡುಗಡೆ ಸಾಧ್ಯವಾಗಿದೆ. ಇದರಿಂದ ಬಟ್ ಸಂತಸಗೊಂಡಿದ್ದಾರೆ.`ಬಿಡುಗಡೆ ಆಗಿದ್ದರಿಂದ ನಿರಾಳವಾಗಿದ್ದೇನೆ. ಎರಡು ಮೂರು ದಿನಗಳ ಕಾಲ ಕುಟುಂಬದ ಸದಸ್ಯರೊಂದಿಗೆ ಮಾತ್ರ ಕಾಲ ಕಳೆಯಲು ಉದ್ದೇಶಿಸಿದ್ದೇನೆ. ಆನಂತರ ನಿಮ್ಮ (ಪತ್ರಕರ್ತರ) ಎಲ್ಲ ಪ್ರಶ್ನೆಗಳಿಗೆ ವಿವರವಾಗಿ ಉತ್ತರ ನೀಡುತ್ತೇನೆ. ಅಷ್ಟೇ ಅಲ್ಲ ಸ್ಪಾಟ್ ಫಿಕ್ಸಿಂಗ್‌ನಲ್ಲಿ ನಾನು ಭಾಗಿ ಆಗಿಲ್ಲ ಎನ್ನುವುದನ್ನೂ ನಿಖರವಾಗಿ ವಿವರಿಸುತ್ತೇನೆ~ ಎಂದು ಹೇಳಿದರು.`ಸ್ಪಾಟ್ ಫಿಕ್ಸಿಂಗ್ ಪ್ರಕರಣಕ್ಕೂ ನನಗೂ ಸಂಬಂಧವೇ ಇಲ್ಲ. ನಾನು ಮಾಡಿದ ತಪ್ಪೆಂದರೆ ನನಗೆ ಆಮಿಷವೊಡ್ಡಿದ್ದವರ ಹೆಸರು ಹೇಳಲಿಲ್ಲ. ಶೀಘ್ರದಲ್ಲಿಯೇ ಕಾನೂನು ಸಲಹೆಗಾರರನ್ನು ಸಂಪರ್ಕಿಸಿ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ನನ್ನ ಮೇಲೆ ಹೇರಿರುವ ನಿಷೇಧದಿಂದ ಮುಕ್ತವಾಗಲು ಪ್ರಯತ್ನಿಸುತ್ತೇನೆ~ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.