ಆರೋಪ ಮುಕ್ತನಾಗುವ ವಿಶ್ವಾಸ: ಆಸಿಫ್

7

ಆರೋಪ ಮುಕ್ತನಾಗುವ ವಿಶ್ವಾಸ: ಆಸಿಫ್

Published:
Updated:

ಕರಾಚಿ (ಐಎಎನ್‌ಎಸ್): ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಭಾಗಿಯಾಗಿದ್ದಾರೆಂದು ಇಂಗ್ಲೆಂಡ್ ಪೊಲೀಸರು ತಮ್ಮ ವಿರುದ್ಧ ಕ್ರಿಮಿನಲ್ ಆರೋಪ ಪಟ್ಟಿ ದಾಖಲು ಮಾಡಿದ್ದರ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಪಾಕಿಸ್ತಾನದ ವೇಗಿ ಮೊಹಮ್ಮದ್ ಆಸಿಫ್ ‘ಖಂಡಿತವಾಗಿ ಆರೋಪ ಮುಕ್ತವಾಗುತ್ತೇನೆ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಆಸಿಫ್ ಮಾತ್ರವಲ್ಲ ಪಾಕ್ ಟೆಸ್ಟ್ ತಂಡದ ಮಾಜಿ ನಾಯಕ ಸಲ್ಮಾನ್ ಬಟ್ ಹಾಗೂ ಯುವ ವೇಗದ ಬೌಲರ್ ಮೊಹಮ್ಮದ್ ಅಮೇರ್ ಅವರ ವಿರುದ್ಧವೂ ಆರೋಪ ಪಟ್ಟಿ ದಾಖಲಾಗಿದೆ. ಈ ಮೂವರು ಕ್ರಿಕೆಟಿಗರು ಈಗಾಗಲೇ ಐಸಿಸಿಯಿಂದ ನಿಷೇಧಕ್ಕೊಳಗಾಗಿದ್ದಾರೆ.ವಿಶ್ವಕಪ್ ಕ್ರಿಕೆಟ್‌ನಲ್ಲಿ ಆಡುತ್ತಿಲ್ಲ ಎನ್ನುವ ‘ನೋವು ಸಹನೀಯವಲ್ಲ’ ಎಂದಿರುವ ಆಸಿಫ್ ‘ವಿಶ್ವಕಪ್ ಪಂದ್ಯಗಳನ್ನು ಟೆಲಿವಿಷನ್‌ನಲ್ಲಿ ತಪ್ಪದೇ ನೋಡುತ್ತಿದ್ದೇನೆ. ನಮ್ಮ ತಂಡದವರು ಬುಧವಾರ ಕೀನ್ಯಾ ವಿರುದ್ಧ ಆಡಿದ ಪಂದ್ಯ ವೀಕ್ಷಿಸಿದೆ.ನಮ್ಮವರ ಆಟವನ್ನು ನೋಡುವುದು ಸಂತಸ. ಆದರೆ ನಮ್ಮವರು ಆಡುವಾಗ ನಾನು ತಂಡದಿಂದ ಹೊರಗೆ ಉಳಿದಿರುವುದು ಭಾರಿ ನೋವುಂಟು ಮಾಡಿದೆ. ಇಂಥದೊಂದು ದೊಡ್ಡ ಟೂರ್ನಿಯಲ್ಲಿ ಆಡುವ ಕನಸು ಹೊಂದಿದ್ದೆ’ ಎಂದು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry