ಶುಕ್ರವಾರ, ನವೆಂಬರ್ 22, 2019
21 °C

ಆರೋಪ ಸಾಬೀತಾದರೆ ರಾಜಕೀಯ ಸನ್ಯಾಸ: ಟೈಟ್ಲರ್

Published:
Updated:

ನವದೆಹಲಿ (ಪಿಟಿಐ):  ದೇಶದಲ್ಲಿ 1984ರಲ್ಲಿ ನಡೆದ  ಸಿಖ್ ವಿರೋಧಿ ದಂಗೆಯಲ್ಲಿ ತಮ್ಮ  ಪಾತ್ರವಿದೆ ಎಂಬ ಆರೋಪ ಸಾಬೀತಾದರೆ ರಾಜಕಾರಣದಿಂದ ದೂರ ಸರಿಯುವುದಾಗಿ ಕಾಂಗ್ರೆಸ್ ಮುಖಂಡ  ಜಗದೀಶ್ ಟೈಟ್ಲರ್ ಹೇಳಿದ್ದಾರೆ.`ಪ್ರಕರಣದ ಸಾಕ್ಷಿಗಳು ಸಾಕಷ್ಟು ಬಾರಿ ತಮ್ಮ ಹೇಳಿಕೆಗಳನ್ನು ಬದಲಾಯಿಸಿದ್ದಾರೆ. ನಾನು ಸುಳ್ಳು ಪತ್ತೆ ಪರೀಕ್ಷೆಗೆ ಒಳಪಡಲು ಸಿದ್ಧ. ಧೈರ್ಯವಿದ್ದರೆ  ಅವರು (ಸಾಕ್ಷಿಗಳು) ಪರೀಕ್ಷೆಗೆ ಒಳಪಡಲಿ' ಎಂದು ಟೈಟ್ಲರ್ ಸವಾಲು ಹಾಕಿದ್ದಾರೆ.`ನ್ಯಾಯಾಲಯ ನನ್ನ ಮೇಲೆ  ಆರೋಪ ಸಿದ್ಧಪಡಿಸಿದರೆ  ಆ ಕ್ಷಣವೇ ಪಕ್ಷ ನೀಡಿರುವ ಎಲ್ಲ ಸ್ಥಾನ ಗಳನ್ನು ತ್ಯಜಿಸುತ್ತೇನೆ. ಪಕ್ಷಕ್ಕೂ ಮುಖ ತೋರಿಸು ವುದಿಲ್ಲ. ನನ್ನಿಂದಾಗಿ ಪಕ್ಷಕ್ಕೆ ಮುಜುಗರವಾಗುವುದ ಬೇಡ. ವ್ಯಕ್ತಿಗಿಂತ ಪಕ್ಷ ದೊಡ್ಡದು ಎಂದು ನಾನು ಭಾವಿಸಿದ್ದೇನೆ' ಎಂದು ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)