ಆರ್.ಎಸ್.ಹೂಗಾರ ನಿಧನ

7

ಆರ್.ಎಸ್.ಹೂಗಾರ ನಿಧನ

Published:
Updated:
ಆರ್.ಎಸ್.ಹೂಗಾರ ನಿಧನ

ಧಾರವಾಡ: ಕಾರ್ಪೊರೇಷನ್ ಬ್ಯಾಂಕ್ ಮಾಜಿ ಅಧ್ಯಕ್ಷ ರಾಮಪ್ಪ ಸಿದ್ರಾಮಪ್ಪ ಹೂಗಾರ (73) ಮುಂಬೈನಲ್ಲಿ ಬುಧವಾರ ಹೃದಯಾಘಾತದಿಂದ ನಿಧರಾದರು.ಪತ್ನಿ, ಇಬ್ಬರು ಪುತ್ರಿಯರು ಇದ್ದಾರೆ. ಹೂಗಾರ 1996ರಿಂದ 99ರವರೆಗೆ ಕಾರ್ಪೊರೇಷನ್ ಬ್ಯಾಂಕ್ ಅಧ್ಯಕ್ಷರಾಗಿದ್ದ ಉತ್ತರ ಕರ್ನಾಟಕದ ಮೊದಲ ವ್ಯಕ್ತಿ. ನವಲಗುಂದ ತಾಲ್ಲೂಕಿನ ಅಣ್ಣಿಗೇರಿ ಗ್ರಾಮದವರಾದ ಹೂಗಾರ, ನಿಂಗಮ್ಮ ಹೂಗಾರ ದತ್ತಿ ಸಂಸ್ಥೆಯಡಿ 10 ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿದ್ದಾರೆ. ಗುರುವಾರ ಮಧ್ಯಾಹ್ನ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry