ಆರ್ಚಕರ ವೇತನ ಹೆಚ್ಚಳ: ಶೀಘ್ರ ತೀರ್ಮಾನ

ಸೋಮವಾರ, ಮೇ 20, 2019
28 °C

ಆರ್ಚಕರ ವೇತನ ಹೆಚ್ಚಳ: ಶೀಘ್ರ ತೀರ್ಮಾನ

Published:
Updated:

ಕೆಂಗೇರಿ: ಮುಜರಾಯಿ ದೇವಾಲಯಗಳ ಆರ್ಚಕರ ವೇತನ ಹೆಚ್ಚಳದ ಬಗ್ಗೆ ಸದ್ಯದಲ್ಲೇ ತೀರ್ಮಾನ ತೆಗೆದಕೊಳ್ಳಲಾಗುವುದು ಎಂದು ಮುಜರಾಯಿ ಸಚಿವ ಕೋಟ ಶ್ರಿನಿವಾಸ ಪೂಜಾರಿ ಹೇಳಿದರು.ನಾಗದೇವನಹಳ್ಳಿಯ ಶ್ರಿಸತ್ಯಸಾಯಿ ಮಹಿಳಾ ಚಾರಿಟಬಲ್ ಟ್ರಸ್ಟ್ ಆಯೋಜಿಸಿದ್ದ ಕೃಷ್ಣ ಜನ್ಮಾಷ್ಟಮಿಯ ಕೃಷ್ಣ ವೇಷ ಸ್ಪರ್ಧೆಯಲ್ಲಿ ಬಹುಮಾನ ವಿತರಿಸಿ ಮಾತನಾಡಿದರು. ಮುಜರಾಯಿ ದೇವಸ್ಥಾನಗಳ ಜಾಗ ಸಂರಕ್ಷಣೆ ಕುರಿತಂತೆ ಶೀಘ್ರ ಸಭೆ ಕರೆಯಲಾಗುತ್ತಿದ್ದು ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದರು.ಕಾರ್ಯಕ್ರಮ ಉದ್ಘಾಟಿಸಿದ ಮತ್ತಿಕೆರೆ ಚೌಡೇಶ್ವರಿ ದೇವಸ್ಥಾನದ ಧರ್ಮದರ್ಶಿ ಅನಂತರಾಮ್, `ಹಿಂದೂ ದೇವಸ್ಥಾನಗಳಲ್ಲಿ ಶುಚಿತ್ವ ಕಾಪಾಡಬೇಕು. ಅಲ್ಲಿನ ಹುಂಡಿ ಹಣ ಆ ದೇವಸ್ಥಾನದ ಅಭಿವೃದ್ಧಿಗೆ ಬಳಕೆಯಾಗಬೇಕು~ ಎಂದು ಸಚಿವರಲ್ಲಿ ಮನವಿ ಮಾಡಿದರು.ಸಮಾರಂಭದಲ್ಲಿ ಮಹೇಂದ್ರ ಮನೋತ್, ಶರವಣನ್, ಸುಧೀಂದ್ರಕುಮಾರ್, ಕೆಂಚನೂರು ಶಂಕರ, ಕೃಷ್ಣಾನಂದ ಮಾವಿನ ಕುರ್ವೇ ಉದಯ ಧರ್ಮಸ್ಥಳ, ಪದ್ಮಾ ಕೆ. ಭಟ್ ಉಪಸ್ಥಿತರಿದ್ದರು. ಸರಳಾ ನಿರೂಪಿಸಿದರು. ಪದ್ಮಾ ಕೆ. ಭಟ್ ಸ್ವಾಗತಿಸಿದರು. ಸುಭಾಷ್ ಶೆಟ್ಟಿ ವಂದಿಸಿದರು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry