ಆರ್ಚರಿ: ಎರಡನೇ ಸ್ಥಾನದಲ್ಲಿ ಭಾರತ

ಬುಧವಾರ, ಜೂಲೈ 17, 2019
26 °C

ಆರ್ಚರಿ: ಎರಡನೇ ಸ್ಥಾನದಲ್ಲಿ ಭಾರತ

Published:
Updated:

ನವದೆಹಲಿ (ಪಿಟಿಐ): ದೀಪಿಕಾ ಕುಮಾರಿ ಅವರ ಅಮೋಘ ಪ್ರದರ್ಶನದ ನೆರವಿನಿಂದ ಭಾರತ ತಂಡದವರು ಟರ್ಕಿಯ ಅಂಟಲ್ಯಾದಲ್ಲಿ ನಡೆಯುತ್ತಿರುವ ವಿಶ್ವಕಪ್ ಆರ್ಚರಿ (ಎರಡನೇ ಹಂತ) ಚಾಂಪಿಯನ್‌ಷಿಪ್‌ನ ಮೊದಲ ಸುತ್ತಿನ ಅಂತ್ಯಕ್ಕೆ ಎರಡನೇ ಸ್ಥಾನ ಕಾಪಾಡಿಕೊಂಡಿದ್ದಾರೆ.ರಾಂಚಿಯ ದೀಪಿಕಾ 1354 ಸ್ಕೋರ್ ಗಳಿಸಿದರು. ಹಾಗಾಗಿ ತಂಡ ವಿಭಾಗದಲ್ಲಿ ಭಾರತದ ಮಹಿಳೆಯರು 4005 ಪಾಯಿಂಟ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ದಕ್ಷಿಣ ಕೊರಿಯಾ ಮೊದಲ ಸ್ಥಾನದಲ್ಲಿದೆ. ಈ ತಂಡ 4099 ಪಾಯಿಂಟ್ ಕಲೆಹಾಕಿದೆ. 3999 ಪಾಯಿಂಟ್ ಹೊಂದಿರುವ ಚೀನಾ ಮೂರನೇ ಸ್ಥಾನದಲ್ಲಿದೆ.ವೈಯಕ್ತಿಕ ವಿಭಾಗದಲ್ಲಿ ದೀಪಿಕಾ ಈಗ ನಾಲ್ಕನೇ ಸ್ಥಾನದಲ್ಲಿದ್ದಾರೆ. ಭಾರತದ ಇನ್ನುಳಿದ ಸ್ಪರ್ಧಿಗಳಾದ ಎಲ್.ಬೊಂಬಾಯಾಲ ದೇವಿ (1334 ಪಾಯಿಂಟ್) 11ನೇ ಸ್ಥಾನ ಹಾಗೂ ಚೆಕ್ರೊವಲು ಸ್ವರೊ (1317) 30ನೇ ಸ್ಥಾನದಲ್ಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry