ಆರ್ಚರಿ: ಗುರಿ ತಪ್ಪಿದ ದೀಪಿಕಾ ಕುಮಾರಿ

ಭಾನುವಾರ, ಮೇ 26, 2019
32 °C

ಆರ್ಚರಿ: ಗುರಿ ತಪ್ಪಿದ ದೀಪಿಕಾ ಕುಮಾರಿ

Published:
Updated:

ಲಂಡನ್ (ಪಿಟಿಐ): ಒಲಿಂಪಿಕ್ಸ್ ಆರ್ಚರಿಯಲ್ಲಿ ಭಾರತದ ಏಕೈಕ ಭರವಸೆಯಾಗಿ ಕಣದಲ್ಲಿ ಉಳಿದುಕೊಂಡಿದ್ದ ದೀಪಿಕಾ ಕುಮಾರಿ ಅವರು ಮಹಿಳೆಯರ ವೈಯಕ್ತಿಕ ವಿಭಾಗದಲ್ಲಿ ಬುಧವಾರ ನಡೆದ ಮೊದಲ ಸುತ್ತಿನ ಸ್ಪರ್ಧೆಯಲ್ಲಿ ಇಂಗ್ಲೆಡ್‌ನ ಆಮಿ ಅಲಿವರ್ ವಿರುದ್ಧ ಸೋಲು ಅನುಭವಿಸಿದರು.

 

ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆದ ಮಹಿಳೆಯರ ವೈಯಕ್ತಿಕ ವಿಭಾಗದ ಮೊದಲ ಸುತ್ತಿನ ಸ್ಪರ್ಧೆಯಲ್ಲಿ ದೀಪಿಕಾ ಕುಮಾರಿ ಅವರ ವಿರುದ್ಧ 6-2ರಲ್ಲಿ ಆಮಿ ಅವರು ಅನಾಯಾಸವಾಗಿ ಗೆಲುವು ಪಡೆದರು.

 

ಎರಡು ವರ್ಷದ ಹಿಂದೆ ನಡೆದ ದೆಹಲಿ ಕಾಮನ್‌ವೆಲ್ತ್‌ನಲ್ಲಿ ಎರಡು ಸ್ವರ್ಣ ಪದಕ ಗಳಿಸಿರುವ ದೀಪಿಕಾ ಅವರ ಗುರಿಗೆ ಒಲಿಂಪಿಕ್ಸ್ ಪದಕ ತಪ್ಪುವುದರೊಂದಿಗೆ ಭಾರತದ ಆರ್ಚರಿ ತಂಡದವರ ಪದಕದ ಕನಸು ಭಗ್ನಗೊಂಡಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry