ಶುಕ್ರವಾರ, ಮೇ 14, 2021
32 °C

ಆರ್ಚರಿ: ಪ್ರೀ ಕ್ವಾರ್ಟರ್‌ಗೆ ರಾಹುಲ್, ಡೋಲಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲ್ಕತ್ತ (ಪಿಟಿಐ): ರಾಹುಲ್ ಬ್ಯಾನರ್ಜಿ ಮತ್ತು ಡೋಲಾ ಒಳಗೊಂಡಂತೆ ಭಾರತದ ಐವರು ಸ್ಪರ್ಧಿಗಳು ಟರ್ಕಿಯ ಅಂತಾಲ್ಯದಲ್ಲಿ ನಡೆಯುತ್ತಿರುವ ವಿಶ್ವಕಪ್ ಆರ್ಚರಿ `ಸ್ಟೇಜ್-2' ಕೂಟದ ರಿಕರ್ವ್ ವಿಭಾಗದಲ್ಲಿ ಪ್ರೀ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು.ಪುರುಷರ ವಿಭಾಗದಲ್ಲಿ ರಾಹುಲ್ ಮತ್ತು ಅತಾನು ದಾಸ್ ಹಾಗೂ ಮಹಿಳೆಯರ ವಿಭಾಗದಲ್ಲಿ ಡೋಲಾ, ಲೈಶ್‌ರಾಮ್ ಬೊಂಬ್ಯಾಲ ದೇವಿ ಮತ್ತು ರಿಮಿಲ್ ಬಿರುಲಿ ತಮ್ಮ ಪಂದ್ಯಗಳಲ್ಲಿ ಗೆಲುವು ಪಡೆದು ಹದಿನಾರರ ಘಟ್ಟ ಪ್ರವೇಶಿಸಿದರು ಎಂದು ಇಲ್ಲಿಗೆ ಬಂದ ಮಾಹಿತಿ ತಿಳಿಸಿದೆ.ಆದರೆ ಪ್ರಮುಖ ಸ್ಪರ್ಧಿಗಳಾದ ಜಯಂತ್ ತಾಲೂಕ್ದರ್ ಮತ್ತು ದೀಪಿಕಾ ಕುಮಾರಿ ಎರಡನೇ ಸುತ್ತಿನಲ್ಲೇ ಸೋತು ಹೊರಬಿದ್ದರು. ದೀಪಿಕಾ 2-6 ರಲ್ಲಿ ಭಾರತದವರೇ ಆದ ರಿಮಿಲ್ ಎದುರು ಪರಾಭಗೊಂಡರು. ಜಯಂತ್ 2-6 ರಲ್ಲಿ ಫ್ರಾನ್ಸ್‌ನ ಥಾಮಸ್ ಆಬೆರ್ಟ್ ಕೈಯಲ್ಲಿ ಸೋತರು.ಬೊಂಬ್ಯಾಲ ದೇವಿ ಎರಡನೇ ಸುತ್ತಿನ ಪಂದ್ಯದಲ್ಲಿ 6-4 ರಲ್ಲಿ ಅಮೆರಿಕದ ಹೆದರ್ ಕೋಲ್ ಎದುರೂ, ಡೋಲಾ 6-5 ರಲ್ಲಿ ಅಮೆರಿಕದ ಮಿರಾಂಡಾ ಲೀಕ್ ಮೇಲೂ ಜಯ ಸಾಧಿಸಿದರು.ಅತಾನು ದಾಸ್ ಮೊದಲ ಪಂದ್ಯದಲ್ಲಿ 6-0 ರಲ್ಲಿ ಸೌದಿ ಅರೇಬಿಯದ ಮುಯಿದ್ ರಜಾ ಅಲ್‌ಬಕಾಮಿ ಎದುರು ಗೆದ್ದರೆ, ಆ ಬಳಿಕ 6-4 ರಲ್ಲಿ ಇಟಲಿಯ ಮ್ಯಾಸಿಮಿಲಿಯಾನೊ ಮಾಂಡಿಯಾ ಅವರನ್ನು ಮಣಿಸಿದರು.ರಾಹುಲ್ ಮೊದಲ ಪಂದ್ಯದಲ್ಲಿ 7-3 ರಲ್ಲಿ ಇರಾಕ್‌ನ ಹುಸೇನ್ ಖಲಾಫ್ ಫಯ್ಯಾದ್ ಎದುರು ಜಯ ಸಾಧಿಸಿದರೆ, ಎರಡನೇ ಪಂದ್ಯದಲ್ಲಿ 6-0 ರಲ್ಲಿ ಅಮೆರಿಕದ ರಿಚರ್ಡ್ ಜಾನ್ಸನ್ ಅವರನ್ನು ಸೋಲಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.