ಶುಕ್ರವಾರ, ಮೇ 14, 2021
31 °C

ಆರ್ಚರಿ: ಫೈನಲ್‌ಗೆ ರಜತ್- ಮಂಜುದಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲ್ಕತ್ತ (ಪಿಟಿಐ): ಭಾರತದ ರಜತ್ ಚೌಹಾಣ್ ಮತ್ತು ಮಂಜುದಾ ಸೋಯ್ ಟರ್ಕಿಯ ಅಂತಾಲ್ಯದಲ್ಲಿ ನಡೆಯುತ್ತಿರುವ ವಿಶ್ವಕಪ್ ಆರ್ಚರಿ `ಸ್ಟೇಜ್-2' ಕೂಟದ ಕಾಂಪೌಂಡ್ ಮಿಶ್ರ ಡಬಲ್ಸ್ ವಿಭಾಗದ ಫೈನಲ್ ಪ್ರವೇಶಿಸುವ ಮೂಲಕ ಪದಕ ಖಚಿತಪಡಿಸಿಕೊಂಡರು.ಶನಿವಾರ ನಡೆಯುವ ಫೈನಲ್‌ನಲ್ಲಿ ಭಾರತದ ಜೋಡಿ ಇಟಲಿಯ ಸೆರ್ಜಿಯೊ ಪಾಗ್ನಿ ಹಾಗೂ ಮಾರ್ಸೆಲಾ ಟೋನಿಯೊಲಿ ಅವರ ಸವಾಲನ್ನು ಎದುರಿಸಲಿದೆ. ವಿಶ್ವಕಪ್‌ನ ಕಾಂಪೌಂಡ್ ವಿಭಾಗದ ಮಿಶ್ರ ಡಬಲ್ಸ್‌ನಲ್ಲಿ ಭಾರತ ಇದುವರೆಗೆ ಚಿನ್ನ ಜಯಿಸಿಲ್ಲ.ರಜತ್- ಮಂಜುದಾ ಲೀಗ್ ಪಂದ್ಯಗಳಲ್ಲಿ ಬ್ರಿಟನ್ ಸ್ಪರ್ಧಿಗಳ ವಿರುದ್ಧ 151-149, ರಷ್ಯಾ ಎದುರು 156-154 ಹಾಗೂ ಕೆನಡಾ ಮೇಲೆ 154- 147 ರಲ್ಲಿ ಗೆಲುವು ಪಡೆದು ಫೈನಲ್‌ಗೆ ಮುನ್ನಡೆದರು.ಪ್ರಮುಖ ಸ್ಪರ್ಧಿಗಳಿಗೆ ನಿರಾಸೆ: ಆದರೆ ಇದೇ ಕೂಟದ ರಿಕರ್ವ್ ವಿಭಾಗದಲ್ಲಿ ಭಾರತದ   ಪ್ರಮುಖ ಸ್ಪರ್ಧಿಗಳು ಪದಕ ಪಡೆಯುವಲ್ಲಿ ವಿಫಲರಾಗಿ ನಿರಾಸೆ ಉಂಟುಮಾಡಿದರು.ರಾಹುಲ್ ಬ್ಯಾನರ್ಜಿ ಪ್ರೀ ಕ್ವಾರ್ಟರ್ ಫೈನಲ್‌ನಲ್ಲಿ 0-6 ರಲ್ಲಿ ಚೀನಾದ ಜಿಯಾನ್‌ಪಿನ್ ಜಾಂಗ್ ಎದುರು ಪರಾಭವಗೊಂಡರು. ಅತಾನು ದಾಸ್ 1-7 ರಲ್ಲಿ ಅಮೆರಿಕದ ಬ್ರಾಡಿ ಎಲಿಸನ್ ಎದುರು ಸೋಲು ಅನುಭವಿಸಿದರು. ರಿಕರ್ವ್ ತಂಡ ವಿಭಾಗದಲ್ಲಿ ಪುರುಷರು ಮೊದಲು ಸುತ್ತಿನಲ್ಲಿ 219-222 ರಲ್ಲಿ ಸ್ಪೇನ್ ಎದುರು ಸೋತರೆ, ಮಹಿಳೆಯರು ಎರಡನೇ ಸುತ್ತಿನ ಪಂದ್ಯದಲ್ಲಿ 224-227 ರಲ್ಲಿ ಕೊರಿಯಾ ಕೈಯಲ್ಲಿ ಪರಾಭವಗೊಂಡರು.ಡೋಲಾ ಬ್ಯಾನರ್ಜಿ 2-6 ರಲ್ಲಿ ಬೊ ಬಾಯೆ ಎದುರೂ, ರಿಮಿಲ್ ಬಿರುಲಿ 5-6 ರಲ್ಲಿ ಕೊಲಂಬಿಯದ ಅನಾ ಮರಿಯಾ ರೆಂಡನ್ ಮೇಲೂ, ಲೈಶ್‌ರಾಮ್ ಬೊಂಬ್ಯಾಲ ದೇವಿ 2-6 ರಲ್ಲಿ ಕೊರಿಯಾದ ಹ್ಯೂನ್ ಜುಂಗ್ ಜು ಎದುರೂ ನಿರಾಸೆ ಅನುಭವಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.